ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ಒಕ್ಕೂಟಗಳ ಪದಾಧಿಕಾರಿಗಳಿಗೆ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಪವರ್ಗ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಗಾರವನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯಾಧ್ಯಕ್ಷರಾದ ಶ್ರೀ ಯೋಗೀಶ್ ದೇವರವರು ದೀಪ ಬೆಳಗಿಸುವ ಮುಖೇನ ಚಾಲನೆಯನ್ನು ನೀಡಿದರು.
ಈ ಕಾರ್ಯಗಾರದಲ್ಲಿ ಒಕ್ಕೂಟಗಳ ಪದಾಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆ 2 ರ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರವೀಣ್ ಕುಮಾರ್ ರವರು ಕ್ಷೇತ್ರದ ಹಿನ್ನಲೆ ಬಗ್ಗೆ, ಯೋಜನೆಯ ಹುಟ್ಟು, ಬೆಳವಣಿಗೆ, ಇದರಿಂದ ತಾಲೂಕಿನ ಪಾಲುದಾರ ಬಂಧುಗಳ ಕುಟುಂಬಗಳು ಅಭಿವೃದ್ಧಿಗೊಂಡ ಬಗ್ಗೆ, ಪ್ರತಿ ಗ್ರಾಮಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಂಡ ಬಗ್ಗೆ, ಪ್ರಸ್ತುತ ವಿದ್ಯಮಾನದ ಸ್ಥಿತಿಗತಿಗಳ ಬಗ್ಗೆ, ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಮತ್ತು ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಈ ಕಾರ್ಯಗಾರದಲ್ಲಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವರಾದ ಶ್ರೀ ಮಾಧವರವರು ಪ್ರಗತಿ ಬಂಧು ಒಕ್ಕೂಟಗಳ ಉದ್ದೇಶ, ಒಕ್ಕೂಟ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ, ಒಕ್ಕೂಟ ಸಭೆಗಳ ಪರಿಣಾಮಕಾರಿ ನಿರ್ವಹಣೆ ಬಗ್ಗೆ, ಪದಾಧಿಕಾರಿಗಳ ನಾಯಕತ್ವದ ಬಗ್ಗೆ ದಾಖಲಾತಿ ನಿರ್ವಹಣೆ ಬಗ್ಗೆ, ಪ್ರಗತಿನಿಧಿ ಕಾರ್ಯಕ್ರಮ ಮತ್ತು ನಿಯಾಮವಳಿಗಳ ಬಗ್ಗೆ, ಪ್ರಗತಿನಿಧಿಗೆ ಭದ್ರತೆ ಮತ್ತು ಮಂಜೂರಾತಿ ಕ್ರಮದ ಬಗ್ಗೆ, ಪ್ರಗತಿ ರಕ್ಷಾ ಕವಚ ಕಾರ್ಯಕ್ರಮದ ಬಗ್ಗೆ, ಯೋಜನೆಯಲ್ಲಿ ಪ್ರಸ್ತುತ ಇರುವ ವಿವಿಧ ಜನ ಉಪಯೋಗಿ ಕಾರ್ಯಕ್ರಮಗಳ ಬಗ್ಗೆ ಮತ್ತು ಪ್ರಸ್ತುತ ದಿನಗಳಲ್ಲಿ ಅದರ ಅಗತ್ಯತೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಗಾರದಲ್ಲಿ ತಾಲೂಕು ವಿಚಕ್ಷಣಾಧಿಕಾರಿಯವರಾದ ಅನಿತಾರವರು ಪ್ರಗತಿನಿಧಿಗೆ ವಿಧಿಸುವ ಬಡ್ಡಿಯ ಲೆಕ್ಕಾಚಾರದ ಬಗ್ಗೆ, ಮರುಪಾವತಿ ಚೀಟಿಯ ಪ್ರಯೋಜನದ ಬಗ್ಗೆ, ಸಂಘಗಳ ಗ್ರೇಡಿಂಗ್ ನ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮೆಟ್ಟಿನಡ್ಕ ಒಕ್ಕೂಟದ ಪದಾಧಿಕಾರಿಯವರಾದ ಭರತ್ ಕಾಡುಕೊಲ್ಯರವರು ಹಾಗೂ ಮಾವಿನಕಟ್ಟೆ ಒಕ್ಕೂಟದ ಪದಾಧಿಕಾರಿಯವರಾದ ಭಾಗ್ಯವತಿರವರು ಕಾರ್ಯಗಾರದ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಗಾರದಲ್ಲಿ ವಲಯದ ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಎಲ್ಲಾ ಸೇವಾಪ್ರತಿನಿಧಿಯವರು ಭಾಗವಹಿಸಿದರು.
ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿದರು.
ನಾಲ್ಕೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಹರಿಶ್ಚಂದ್ರ ಕೆ ರವರು ಕಾರ್ಯನಿರೂಪಿಸಿದರು. ಕಂದ್ರಪ್ಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ತಿಮ್ಮಪ್ಪ ಕಡ್ಯಾರವರು ಧನ್ಯವಾದವಿತ್ತರು.