ದ.ಕ ಜಿಲ್ಲೆಯ ಪ್ರವರ್ಗ “ಬಿ” ಮತ್ತು “ಸಿ” ಗೆ ಸೇರಿದ ದೇವಸ್ಥಾನ/ದೈವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗ ಬಯಸುವ ಆಸಕ್ತ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ಸಹಾಯಕ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮರ್ಕಂಜದ ಕಾವೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಹಾಗೂ ಪುರುಷ ಭೂತ ದೇವಸ್ಥಾನ, ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೇವಸ್ಥಾನ, ಕಾಯರ್ತೋಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಮಂಡೆಕೋಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉಬರಡ್ಕದ ಶ್ರೀ ಸರಸಿಂಹ ಶಾಸ್ತಾವು ದೇವಸ್ಥಾನ, ಮುರುಳ್ಯದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೊಲ್ಲಮೊಗ್ರದ ಕೊಚ್ಚಿಲ ಶ್ರೀ ಮಯೂರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಪಂಜದ ಪೈಂದೋಡಿ ಸುಬ್ರಾಯ ದೇವಸ್ಥಾನ, ಪಂಬೆತ್ತಾಡಿಯ ಗೋಳಿಕಟ್ಟೆ ವಿನಾಯಕ ದೇವಸ್ಥಾನ, ಮುರುಳ್ಯದ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ, ಐವರ್ನಾಡಿನ ಪಂಚಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ 15 ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರಾಗಲು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.