Ad Widget

ಮಂಡೆಕೋಲು: ಆಷಾಢದಲ್ಲಿ ಅಕ್ಕಂದಿರ ಹರಟೆ ಕಾರ್ಯಕ್ರಮ

ಮಂಡೆಕೋಲು ಗ್ರಂಥಾಲಯದಲ್ಲಿ ಆಷಾಢದಲ್ಲಿ ಅಕ್ಕಂದಿರ ಹರಟೆ ಚಟುವಟಿಕೆ ಸರಳ ರೀತಿಯಲ್ಲಿ ಆಚರಿಸಲಾಯಿತು. ಈ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಲತಾ ಸದಾನಂದ ಮಾವಜಿಯವರು ವೆಂಕಟ್ರಮಣ ಸೊಸೈಟಿ ನಿರ್ದೇಶಕರು , ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರತಿಮಾ ಹೆಬ್ಬಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪಿ, ಗ್ರಾಮ ಪಂಚಾಯತ್ ಸದಸ್ಯರಾದ ಬಾಲಚಂದ್ರ ಡಿಸಿ , ಉಷಾಗಂಗಾಧರ ಮಾವಂಜಿ ,

. . . . .

ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಅತೀ ಹೆಚ್ಚು ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕ ಎರವಲು ಪಡೆದುಕೊಂಡು ಓದಿರುವ ಭವ್ಯ ಶ್ರೀ ಮಾವಂಜಿ ಇವರೀಗೆ ಬಹುಮಾನ ನೀಡಲಾಯಿತು ಜೊತೆಗೆ ಈ ದಿನ ,ವಿವಿಧ ರೀತಿಯ ಮನೋರಂಜನಾ ಆಟಗಳನ್ನು ಭಾರತಿ ಉಗ್ರಾಣಿಮನೆಯವರು ನಡೆಸಿಕೊಟ್ಟರು ,ಗ್ರಾಮ ಗ್ರಂಥಾಲಯ ಓದುಗ ಮಾತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಭಾಗವಹಿಸಿದರು, ವಿಶೇಷವಾಗಿ   ಈ ದಿನ ಪ್ರತಿ ಮಹಿಳೆಯರು ಒಂದೊಂದು ಪುಸ್ತಕವನ್ನು ಗ್ರಂಥಾಲಯದಿಂದ ಪಡೆದುಕೊಂಡು ಹೋಗಬೇಕು ಮತ್ತು ತಾನು ಪಡೆದುಕೊಂಡ ಪುಸ್ತಕ ಪುಸ್ತಕದ ಹೆಸರು,ಲೇಖಕರ ಹೆಸರು ಮತ್ತು ಈ ಪುಸ್ತಕದಿಂದ ನಾನು ಏನನ್ನೂ ಕಲಿತೆ/ಅರಿತೆ ಅಥವ ಪುಸ್ತಕ ಪರಿಚಯ ಒಂದು ತಿಂಗಳ ಒಳಗೆ ಇದೇ ಗುಂಪಿನಲ್ಲಿ ಬರೆದುಹಾಕುವುದು. ಮನೆಯವರ ಮಕ್ಕಳ ಯಾರ ಬೇಕಾದರೂ ಸಹಾಯ ಪಡೆದುಕೊಳ್ಳಬಹುದು ಅತೀ ಉತ್ತಮ ಬರವಣಿಗೆಗೆ ಬಹುಮಾನ ನೀಡುವುದಾಗಿ ಗ್ರಂಥಾಲಯ ಮೇಲ್ವಿಚಾರಾದ ಸಾವಿತ್ರಿ ಕಣೆಮರಡ್ಕ ತಿಳಿಸಿ ಎಲ್ಲರಿಗು ಧನ್ಯವಾದಗಳು ಸಮರ್ಪಿಸಿದರು.

ತುಳುನಾಡಿನ ಸಾಂಪ್ರದಾಯಿಕ ಔಷಧಿಯುಕ್ತ 10ಬಗೆಯ  ಆಷಾಡ ಖಾದ್ಯಗಳನ್ನು ಮಹಿಳೆಯರು ತಂದು ಹಂಚಿಕೊಂಡು ಸಂಭ್ರಮಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!