ಮಳೆ ಬಂತೆಂದರೇ ಸಾಕು ವಿದ್ಯುತ್ ಮಾಯಾವಾಗುತ್ತದೆ. ಅದರ ಜತೆಗೆ ಬಿಎಸ್ಎನ್ ಎಲ್ ನೆಟ್ವರ್ಕ್ ಕೂಡ ಮಾಯವಾಗುತ್ತದೆ. ಸುಳ್ಯ ತಾಲೂಕಿನ ಗ್ರಾಮಂತರ ಪ್ರದೇಶಗಳಲ್ಲಿ ಪರ್ಯಾಯ ನೆಟ್ವರ್ಕ್ ಇಲ್ಲದೇ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದ್ದ ಟವರ್ ಗಳನ್ನೇ ಸರಿಯಾಗಿ ಮೈಂಟೆನೆನ್ಸ್ ಮಾಡುತ್ತಿಲ್ಲ, ಇದೀಗ ತಾಲೂಕಿನಾದ್ಯಂತ ಹೊಸ ಟವರ್ ನಿರ್ಮಾಣ ಮಾಡಿದೆ. ಟವರ್ ನಿರ್ಮಾಣಗೊಂಡರೂ ಇದರ ಕಾರ್ಯಾರಂಭಕ್ಕೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.
ಜನ ಬಿಸಿ ಮುಟ್ಟಿಸಿದರೇ ಮಾತ್ರ ವ್ಯವಸ್ಥೆ ಸರಿಯಾಗುತ್ತದೆ
ಜನರ ಪ್ರತಿಭಟನೆಗೆ ಮಣಿದು ಕೊಲ್ಲಮೊಗ್ರ ಹಾಗೂ ತೊಡಿಕಾನದಲ್ಲಿ ಹೊಸ ಬ್ಯಾಟರಿ ಅಳವಡಿಸಿ ನಿರಂತರ ನೆಟ್ವರ್ಕ್ ಗೆ ವ್ಯವಸ್ಥೆಗಳಾಗಿದೆ. ವಿದ್ಯುತ್ ಸಮಸ್ಯೆಗಳಿಗೆ ಸ್ಥಳೀಯ ಅಧಿಕಾರಿಗಳು ಸ್ಪಂದನೆ ಮಾಡದೇ ಇದ್ದಾಗ ಮೇಲಾಧಿಕಾರಿಗಳಿಗೆ ದೂರು ನೀಡಲು ಆರಂಭಿಸಿದ ಭಾಗಗಳಲ್ಲಿ ವ್ಯವಸ್ಥೆ ಸರಿಯಾದ ಉದಾಹರಣೆಗಳಿವೆ. ಅದೇ ರೀತಿ ಜನತೆ ಎಚ್ಚೆತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೆಂಬಿಡದೇ ಕಾಡಿದಾಗ ವ್ಯವಸ್ಥೆ ಸರಿಯಾಗಬಹುದು. ಕೇರಳದಲ್ಲಿ ಕೆಲ ವ್ಯವಸ್ಥೆ ಯಾಕೆ ಸರಿಯಾಗಿದೆ ಅಂದರೇ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಆಗಾಗ ಪ್ರತಿಭಟನೆ,ಮುಷ್ಕರದ ಬಿಸಿ ಮುಟ್ಟುತ್ತಿರುತ್ತದೆ. ನಾವು ಕೇಳಿದವರಿಗೆ ಮತ ಹಾಕುವುದರ ಜತೆಗೆ ಅವರ ಬಳಿ ನಮ್ಮ ಸೌಲಭ್ಯಗಳನ್ನು, ಹಕ್ಕನ್ನು ಕೇಳಲೇ ಬೇಕಿದೆ. ಅಲ್ಲದೇ ಹೋದರೆ ಯಾರು ನಿಂತರೂ ಗೆಲ್ತಾರೆ ಎನ್ನುವ ಸೋಮಾರಿ ಜನಪ್ರತಿನಿಧಿಗಳು ಸಾಕಷ್ಟು ಸೃಷ್ಟಿಯಾಗುತ್ತಾರೆ.