ಅಜ್ಜಾವರ: ಅಜ್ಜಾವರ ಗ್ರಾಮದಲ್ಲಿ ಕೇಂದ್ರ ಸರಕಾರಿ ಸಾಮ್ಯದ ಬಿಎಸ್ಎನ್ಎಲ್ ಸುಸಜ್ಜಿತ ಕಟ್ಟಡ ಮತ್ತು ಅತ್ಯಾಧುನಿಕ ಜನರೇಟರ್ ಸೇರಿದಂತೆ ಇತರೆ ಸಕಲ ವ್ಯವಸ್ಥೆಗಳು ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಇದೀಗ ಕಟ್ಟಡ ಸೇರಿದಂತೆ ಎಲ್ಲಾ ಸಾಧನಗಳು ಸರಿಯಾದ ನಿರ್ವಹಣೆಯಿಲ್ಲದೆ ಉಪಯೋಗಕ್ಕಿಲ್ಲ, ನೆಟ್ವರ್ಕ್ ಕೂಡ ತುಸು ದೂರವಾಗಿದೆ. ಅಜ್ಜಾವರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲಾ ಕಛೇರಿಗಳಿಗೆ ನೆಟ್ವರ್ಕ್ ಸಮಸ್ಯೆಗಳಿಂದಾಗಿ ಜನರ ಪಾಡು ಹೇಳತೀರದಾಗಿದೆ. ಕೇಂದ್ರವು ಡಿಜಿಟಲ್ ಇಂಡಿಯಾ ಕಲ್ಪನೆಯೊಂದಿಗೆ ಮುನ್ನುಗ್ಗುತ್ತಿದ್ದರೆ ಇತ್ತ ಬಿಎಸ್ಎನ್ಎಲ್ ಅಧಿಕಾರಿಗಳು ಮಾತ್ರ ತಮಗೆ ಯಾವುದೇ ಸಂಭಂದವಿಲ್ಲದಂತೆ ವರ್ತಿಸುತ್ತಿದ್ದು ಕೆಲ ದಿನಗಳ ಹಿಂದೆ ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟರಿಗೆ ದೂರು ನೀಡಲು ಗ್ರಾಮಸ್ಥರು ಹೊರಟಾಗ ತಕ್ಷಣವೇ ಆಗಮಿಸಿ ನೆಟ್ವರ್ಕ್ ಸರಿ ಪಡಿಸಿ ತೆರಳಿದ್ದರು ಇದೀಗ ಮತ್ತದೇ ಸಮಸ್ಯೆ ಉದ್ಭವಿಸಿದ್ದು ಜನರ ಸಂಪರ್ಕವು ಇದೀಗ ಸಂಪೂರ್ಣ ಕಡಿತಗೊಂಡಿದ್ದು ಸಂಸದರು ಈ ವರದಿಯ ಬಳಿಕ ಎಚ್ಚೆತ್ತು ಅಜ್ಜಾವರ ಕಛೇರಿ ಮತ್ತು ನೆಟ್ವರ್ಕ್ ಸಮಸ್ಯೆಗಳಿಗೆ ಮುಕ್ತಿ ನೀಡುವರೆ ಎಂದು ಕಾದು ನೋಡಬೇಕಿದೆ.
- Monday
- November 11th, 2024