Ad Widget

ಎಸ್ ಎಸ್ ಪಿಯು ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ – ವಿದ್ಯಾರ್ಥಿಗಳು ಸೇನೆಗೆ ದೇಶಸೇವೆ ಮಾಡುವ ಸಂಕಲ್ಪ ಮಾಡಬೇಕಿದೆ – ಸೋಮಶೇಖರ ನಾಯಕ್

ಕಾರ್ಗಿಲ್ ನಲ್ಲಿ ನಮ್ಮ ಯೋಧರು ಮಾಡಿದ ಸಾಧನೆಯು ನಮಗೆಲ್ಲರಿಗೂ ಹೆಮ್ಮೆ.ಅತ್ಯಂತ ಕಾಠಿಣ್ಯ ಪ್ರದೇಶವಾದ ಕಾಗ್ರಿಲ್ ನಲ್ಲಿ ನಡೆದ ಯುದ್ಧದಲ್ಲಿ ನಮ್ಮ ಯೋಧರ ಅಪ್ರತಿಮ ಪರಾಕ್ರಮವು ವಿಜಯ ದುಂದುಬಿಯನ್ನು ಭಾರಿಸುವಂತೆ ಮಾಡಿದೆ.ಈ ವಿಜಯವು ಸರ್ವ ಭಾರತೀಯರಿಗೆ ಹೆಮ್ಮೆಯ ಪ್ರತೀಕವಾಗಿದೆ‌.ಯುವ ವಿದ್ಯಾರ್ಥಿಗಳಾದ ತಾವುಗಳು ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರಿ ಯೋಧರಾಗಿ ದೇಶಸೇವೆ ಮಾಡುವ ಸಂಕಲ್ಪ ಮಾಡಬೇಕಾಗಿದೆ.ದೇಶ ಸೇವೆಗೆ ದೊರಕುವ ಅವಕಾಶವು ನಮ್ಮ ಭಾಗ್ಯವಾಗಿದ್ದು ಇದಕ್ಕೆ ವಿದ್ಯಾರ್ಥಿಗಳು ಮನಪೂರ್ವಕವಾಗಿ ಸಜ್ಜಾಗಬೇಕು ಎಂದು ಎಸ್ ಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್ ಎಸ್ ಪಿ ಯು ಕಾಲೇಜಿನಲ್ಲಿ ವಿದ್ಯಾ ಸಂಸ್ಥೆಯ ಯುವ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ್ ಆಚರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್.ಆರ್, ಯುವ ರೆಡ್ ಕ್ರಾಸ್ ನ ಜ್ಯೂನಿಯರ್ ಕೌನ್ಸಿಲರ್ ಶ್ರುತಿ ಅಶ್ವಥ್ ಯಾಲದಾಳು, ಎನ್ ಎಸ್ ಎಸ್ ಯೋಜನಾಧಿಕಾರಿ ಪೂರ್ಣಿಮಾ, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಉಪನ್ಯಾಸಕರಾದ ಶ್ರೀಧರ ಪುತ್ರನ್, ರತ್ನಾಕರ ಸುಬ್ರಹ್ಮಣ್ಯ,ಪ್ರವೀಣ್.ಎ, ಭವ್ಯಶ್ರೀ ಹರೀಶ್ ಕುಲ್ಕುಂದ, ಸೌಮ್ಯಕೀರ್ತಿ, ಮಾನಸ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಈ ಮೊದಲು ಪ್ರಾಚಾರ್ಯರು ಸೇರಿದಂತೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಪುಷ್ಪ ನಮನ ಸಮರ್ಪಿಸಿದರು‌.ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!