Ad Widget

ಬೆಳ್ಳಾರೆಯಲ್ಲಿ ಆಟಿದ ಪೊಲಬು, ಕೆಸರುಗದ್ದೆ ಕ್ರೀಡಾಕೂಟ – ಸಾಧಕರಿಗೆ ಸನ್ಮಾನ

ಕಾಲದ ಅರಿವು ಮೂಡಿಸುವ ಹೊಸ ಸಂದರ್ಭವನ್ನು ಸೃಷ್ಟಿಸಿರುವ ಆಟಿ ತಿಂಗಳು ಪ್ರಕೃತಿ ಒಡ್ಡುವ ಸವಾಲುಗಳಿಗೆ ಪ್ರಕೃತಿಯಿಂದಲೇ ಉತ್ತರ ನೀಡುವ ವಿಶಿಷ್ಟ ತಿಂಗಳು ಎಂದು ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಹೇಳಿದರು.

. . . . .

ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ಳಾರೆ ಸಮೀಪದ ಪಡ್ಪು ಶೇಷಪ್ಪ ಗೌಡರ ಮನೆಯಲ್ಲಿ ನಡೆದ ಆಟಿದ ಪೊಲಬು ಮತ್ತು ಕೆಸರುಗದ್ದೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ರಂಗಭೂಮಿ ಕಲಾವಿದ, ಚಲನ ಚಿತ್ರನಟ ರವಿ ರಾಮಕುಂಜ ಮಾತನಾಡಿ, ತುಳುನಾಡು ದೈವ ದೇವರ ಶಕ್ತಿಯಲ್ಲಿ ನಿಂತಿದೆ. ತುಳುನಾಡಿನ ಆಚಾರ ವಿಚಾರಗಳನ್ನು ತಿಳಿಯುವ ಪ್ರಯತ್ನ ಎಲ್ಲರೂ ಮಾಡಬೇಕು ಎಂದರು.

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಆಟಿದ ಪೊಲಬು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಬೀಡು ಅಧ್ಯಕ್ಷತೆ ವಹಿಸಿದ್ದರು.

ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ಜೇಸಿಐ ವಲಯ 15ರ ರೀಜನಲ್ ಚೆಯರ್ಮೆನ್ ಆರೀಫ್ ಬೆಳ್ಳಾರೆ, ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ, ಹಿರಿಯ ಕೃಷಿಕ ಶೇಷಪ್ಪ ಗೌಡ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.ದೇವಕಿ ಕುರುಬುoಡೇಲು, ವೇದಾವತಿ, ಶೇಷಮ್ಮ, ದೆಯ್ಯು ಮತ್ತು ಪೂವಕ್ಕ ಪನ್ನೆ ಪಾಡ್ದನ ಹಾಡಿದರು. ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿದರು. ದೈಹಿಕ ಶಿಕ್ಷಕ ಕೊರಗಪ್ಪ ನಾಯ್ಕ ಕುರಂಬುಡೇಲು ಸ್ವಾಗತಿಸಿದರು. ಸ್ನೇಹಿತರ ಕಲಾ ಸಂಘದ ಪೂರ್ವಾಧ್ಯಕ್ಷ ಸಂಜಯ್ ನೆಟ್ಟರ್ ವಂದಿಸಿದರು. ಗಾಯಕ ಹರ್ಷಿತ್ ಮಿತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು. ಜ್ಞಾನದೀಪ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರಾದ ಸುಮಿತ್ರಾ ಕೆ ಮತ್ತು ಸುಮಿತ್ರಾ ಎನ್ ಸಹಕರಿಸಿದರು.

ಸನ್ಮಾನ :
ಆಟಿದ ಪೊಲಬು ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ ದಂಪತಿ ಶೇಷಪ್ಪ ಗೌಡ ಪಡ್ಪು ಮತ್ತು ವೇದಾವತಿ, ಗದ್ದೆ ಬೇಸಾಯದ ಹಿರಿಯ ಕಾರ್ಮಿಕರಾದ ಶೇಷಮ್ಮ ಬಸ್ತಿಗುಡ್ಡೆ, ದೆಯ್ಯು ಚೌಕಾರು ಕಲಾಯಿಬೀಡು, ಪೂವಕ್ಕ ಪನ್ನೆ ಹೈನುಗಾರಿಕೆಯ ಸಾಧಕ ಮಹಾಬಲ ಮಾಳಪ್ಪಮಕ್ಕಿ ಅವರನ್ನು ಸನ್ಮಾನಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!