Ad Widget

ಸುಳ್ಯ :  ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಸಭೆ – ಪಂಚಾಯತ್ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ- ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಲು ನಿರ್ಧಾರ

ಸುಳ್ಯ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಸಭೆ ಜು.22ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ವಹಿಸಿದ್ದರು.‌ ಭೆಯಲ್ಲಿ

. . . . . . .

ಸಭೆಯಲ್ಲಿ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಕೇಶವ ಅಡ್ತಲೆ ಮಾತನಾಡಿ ಪಂಚಾಯತ್ ಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ವಿವರ ನೀಡಿದರು. ಪಂಚಾಯತ್ ಪ್ರಮುಖವಾಗಿ ಎದುರಿಸಿರುವ ಸಮಸ್ಯೆಗಳಾದ, ಉದ್ಯೋಗ ಖಾತ್ರಿ ಯೋಜನೆಯ ಎನ್. ಎಂ ಎಂ ಎಸ್. ಜಿಪಿಎಸ್ ಸಮಸ್ಯೆ, ಪ್ರಕೃತಿ ವಿಕೋಪ, ಚುನಾವಣಾ ಸಂದರ್ಭದಲ್ಲಿ, ಸರಕಾರದ ಅನುದಾನ ಗ್ರಾಮ ಪಂಚಾಯಿತಿಗೆ ಲಭಿಸುವಂತೆ, ಪಂಚಾಯತ್ ಗಳಲ್ಲಿ ಖಾಲಿ ಇರುವ ಸಿಬ್ಬಂದಿ ಭರ್ತಿಮಾಡುವ ಬಗ್ಗೆ, ಸಂಜೀವಿನಿ ಒಕ್ಕೂಟಗಳ ಧೋರಣೆಯ ಬಗ್ಗೆ, ಎಸ್ಕ್ರೋ ಅನುದಾನ ಹೆಚ್ಚಿಸುವ ಬಗ್ಗೆ, ಶಾಸನಬದ್ಧ ಅನುದಾನಗಳನ್ನು ಹೆಚ್ಚಿಸುವ ಬಗ್ಗೆ, ವಸತಿ ಯೋಜನೆಗಳು, 9/11 ಸಮಸ್ಯೆಗಳು,ಕೆ. ಡಿ. ಪಿ ಸಭೆಗಳಲ್ಲಿ ಪಂಚಾಯತ್ ಭಾಗವಹಿಸಲು ಅವಕಾಶ ಮತ್ತು ಗ್ರಾಮ ಸಭೆಗಳಲ್ಲಿ ಇಲಾಖಾ ಅಧಿಕಾರಿಗಳ ಗೈರು ಹಾಜರಿ ಸೇರಿದಂತೆ  ಹಲವು ಸಮಸ್ಯೆಗಳ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಶಾಸಕರಾದ ಕುl ಭಾಗೀರಥಿ ಮುರುಳ್ಯ ಮತ್ತು ಪಂಚಾಯತ್ ಸದಸ್ಯರ ವಿಧಾನಪರಿಷತ್ ಪ್ರತಿನಿಧಿಗಳಾದ  ಮಂಜುನಾಥ ಭಂಡಾರಿ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಲು ತೀರ್ಮಾನಿಸಲಾಯಿತು. ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಹರೀಶ್ ರೈ ಉಬರಡ್ಕ,ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು, ಕೆಲ ಪಂಚಾಯಿತಿಗಳ ಪ್ರಮುಖ ಗ್ರಾಮ ಪಂಚಾಯತ್ ಸದಸ್ಯರುಗಳು ಭಾಗವಹಿಸಿದ್ದರು.  ಜು.22ರಂದು ಅಪಘಾತದಲ್ಲಿ ನಿಧನರಾದ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಪ್ರಭುಗಳಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.  ಒಕ್ಕೂಟದ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಅಡ್ತಲೆ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!