ರಾಮಕೃಷ್ಣ ರೈ ತಂಡದವರಿಂದ ಅಧಿಕಾರ ಸ್ವೀಕಾರ
ಸುಳ್ಯ ಲಯನ್ಸ್ ಕ್ಲಬ್ ನ 2024-25 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ರಾಮಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಲ್ಲತಡ್ಕ, ಕೋಶಾಧಿಕಾರಿ ರಮೇಶ್ ಶೆಟ್ಟಿಯವರ ತಂಡದ ಪದಪ್ರದಾನ ಸಮಾರಂಭ ಜು.16ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ಲಯನ್ಸ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ರವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು. ಪದಪ್ರದಾನ ದ ಬಳಿಕ ನೂತನ ಅಧ್ಯಕ್ಷ ರಾಮಕೃಷ್ಣ ರೈಗಳ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು. ಲಯನ್ಸ್ ಜಿಲ್ಲಾ ದ್ವಿತೀಯ ಉಪ ರಾಜ್ಯಪಾಲ ಹೆಚ್.ಎಂ. ತಾರನಾಥ್ ಪದಪ್ರದಾನ ನೆರವೇರಿಸಿದರು. “ಲಯನ್ಸ್ ಕ್ಲಬ್ ನಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಸುಳ್ಯದ ಲಯನ್ಸ್ ಕ್ಲಬ್ ನವರು ಸರಕಾರಿ ಸ್ಕೂಲಿಗೆ ಆದಾಯ ಬರುವಂತ ಕೆಲಸವನ್ನು ಮಾಡಿರುವುದು ಶ್ಲಾಘನೀಯ. ಇದರಿಂದ ತೃಪ್ತಿ, ನೆಮ್ಮದಿ ಲಭಿಸುತ್ತದೆ” ಎಂದರು.
ಚಾರ್ಟರ್ ನೈಟ್ ಕಾರ್ಯಕ್ರಮ ವನ್ನು ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವರು ಉದ್ಘಾಟಿಸಿದರು. ಲಯನ್ಸ್ ಐಪಿಪಿ ರೂಪಾಶ್ರೀ ಜೆ ರೈ ವೇದಿಕೆಯಲ್ಲಿ ಇದ್ದರು. ಲ| ಕರಂಬಯ್ಯ ಕೇರ್ಪಳ – ರೀಟಾ ಕರಂಬಯ್ಯರು ಕಾವ್ಯ ಚಂದ್ರು ಎಂಬ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಕೊಡ ಮಾಡಿದ ಧನ ಸಹಾಯವನ್ನು ವಿತರಿಸಲಾಯಿತು.
ಉಬರಡ್ಕದ ಗಣೇಶ್ ರೈ – ಆಶಾ ರೈ ದಂಪತಿಗಳು ಸಂತೋಷ್ ಎಂಬ ವಿದ್ಯಾರ್ಥಿ ಯ ಪದವಿ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಿದರು. ಗಾಂಧಿನಗರ ಶಾಲಾ ವಿದ್ಯಾರ್ಥಿಗಳಾದ ತನುಶ್ರೀ, ಶ್ರಾವಣಿ ವಿದ್ಯಾಭ್ಯಾಸಕ್ಕೆ ಕ್ಲಬ್ ನೂತನ ಅಧ್ಯಕ್ಷ ರಾಮಕೃಷ್ಣ ರೈ – ಸುಜಾತ ದಂಪತಿಗಳು ಸಹಾಯಧನ ನೀಡಿದರು.
ಕೊಡಿಯಾಲಬೈಲು ಸರಕಾರಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ನಿರ್ಮಿಸಿದ ಅಡಿಕೆ ತೋಟ, ಹಣ್ಣಿನ ತೋಟ ನಿರ್ಮಾಣಕ್ಕೆ ಸಹಕರಿಸಿದ ಕೊಡಿಯಾಲಬೈಲು ಶಾಲಾ ಮುಖ್ಯ ಶಿಕ್ಷಕಿ ಸವಿತಾ ಸುಬ್ಬಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಚಂದ್ರಕಲಾ ಕೆ. ರನ್ನು ಸನ್ಮಾನಿಸಲಾಯಿತು.ನಿರ್ಗಮನ ಅಧ್ಯಕ್ಷ ವೀರಪ್ಪ ಗೌಡ, ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿ ಯವರನ್ನು ನೂತನ ಸಮಿತಿಯ ಅಧ್ಯಕ್ಷ ರಾಮಕೃಷ್ಣ ರೈ ತಂಡ ಸನ್ಮಾನಿಸಿದರು. ಲಯನ್ಸ್ ಜಿಲ್ಲಾ ದ್ವೀತಿಯ ಉಪ ರಾಜ್ಯಪಾಲರನ್ನು ಹಾಗೂ ಲಯನ್ಸ್ ಕ್ಲಬ್ ಟ್ರಸ್ಟ್ ಕಾರ್ಯದರ್ಶಿ ದೇವಿಪ್ರಸಾದ್ ಕುದ್ಪಾಜೆ ಯವರನ್ನು ಗೌರವಿಸಲಾಯಿತು. ನೂತನ ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ ವಂದಿಸಿದರು. ವೀಣಾ ಪ್ರಸಾದ್ – ತೇಜಸ್ವಿನಿ ಕಿರಣ್ ನೀರ್ಪಾಡಿ ಕಾರ್ಯಕ್ರಮ ನಿರೂಪಿಸಿದರು.