Ad Widget

ಸುಳ್ಯದಲ್ಲಿ ನಿರಂತರ ಕತ್ತಲ ಭಾಗ್ಯ – ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ – ಮನವಿ ಸಲ್ಲಿಕೆ




ಸುಳ್ಯ ತಾಲೂಕಿನಾದ್ಯಂತ ಜನತೆ ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮುಖ್ಯವಾಗಿ ಅಜ್ಜಾವರ , ಸಂಪಾಜೆ , ಅರಂತೋಡು , ಮರ್ಕಂಜ , ಮಂಡೆಕೋಲು  ಸೇರಿದಂತೆ ಇತರ ಇತರೆ ಗ್ರಾಮಗಳ ಸಮಸ್ಯೆಗಳ ಬಗ್ಗೆ ದೂರಿದರು. ಸೋಮಾರಿ ಅಧಿಕಾರಿಗಳಿಗೆ ದಿಕ್ಕಾರ ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸಂಪಾಜೆ ಗ್ರಾ.ಪಂ ಅಧ್ಯಕ್ಷೆ ಸುಮತಿ ಶಕ್ತಿವೇಲು , ಗ್ಯಾರಂಟಿ ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ , ನಗರ ಪಂಚಾಯತ್ ಸದಸ್ಯರಾದ ಸಿದ್ದೀಕ್ ಕೊಕ್ಕೊ , ಶರೀಫ್ ಕಂಠಿ , ಜಿ ಕೆ ಹಮೀದ್ , ಅಬ್ದುಲ್ಲ ಖಾದರ್ ಮೊಟ್ಟಂಗಾರು , ಗ್ರಾ.ಪಂ ಉಪಾಧ್ಯಕ್ಷ ಎಸ್ ಕೆ ಹನೀಫ್ ,ರಾಜು ಪಂಡಿತ್ , ಅಬ್ಬಾಸ್ ಅಡ್ಪಂಗಾಯ ಮತ್ತಿತರರು ಉಪಸ್ಥಿತರಿದ್ದರು.

ಅಧಿಕಾರಿಗಳಿ‌ದ ಸ್ಪಷ್ಟನೆ –

ಸುಳ್ಯದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ಮುಂಭಾಗದಲ್ಲಿ ದಿಕ್ಕಾರ ಕೂಗಿದಾಗ ಎಕ್ಸಿಕಿಟ್ಯೂ ಎಂಜಿನಿಯರ್ ರಾಮಚಂದ್ರ ಅವರು ಮನವಿ ಪತ್ರವನ್ನು ಸ್ವೀಕರಿಸಿ ಮುಂದೆ ಇಂತಹ ರೀತಿಯಲ್ಲಿ ಆಗದಂತೆ ನೋಡಿಕೊಳ್ಳುತ್ತೆವೆ. ಅಲ್ಲದೇ ಕಛೇರಿ ಮುಂಭಾಗದಲ್ಲಿನ ನೀರು ನಿಲ್ಲುತ್ತಿದ್ದು ಇದನ್ನು ಕೂಡ ತೆರವುಗೊಳಿಸಿ ಜನರಿಗೆ ನಡೆದಾಡಲು ತೊಂದರೆ ಆಗದಂತೆ ಮಾಡುತ್ತೇವೆ ಎಂದು ಪ್ರತಿಭಟನಾನಿರತರಿಗೆ ತಿಳಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!