Ad Widget

ಬದುಕು ಪ್ರಪುಲ್ಲತೆಯಿಂದ ಸಾಗಬೇಕಾದರೆ ಸೇವಾ ಮನೋಭಾವನೆ ಅತ್ಯಗತ್ಯ.ರೋ. ಪಿ.ಡಿ.ಜಿ. ರಂಗನಾಥ್ ಭಟ್ 


. . . . . . . . .

ಸುಬ್ರಹ್ಮಣ್ಯ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ
“ಈ ಪರಿಸರದ ಒಂದಿಷ್ಟು ಜನರಿಗೆ ತನ್ನಿಂದ ಆದಷ್ಟು ಸೇವೆಯನ್ನು ಕಾಯ-ವಾಚ-ಮನಸ ನೀಡಲು ಒಪ್ಪಿ ಶ್ರೇಷ್ಠ ಜನರ ಆಚಾರ ವಿಚಾರ ಹಾಗೂ ನಡೆ-ನುಡಿಗಳನ್ನು ಮೈಗೂಡಿಸಿಕೊಂಡು ಇತರರಿಗೆ ಮಾರ್ಗದರ್ಶನ ದರ್ಶಕವಾಗುವ ಧ್ಯೇಯವನ್ನು ಸಾಕಾರಗೊಳಿಸಲು ರೋಟರಿ ಸಂಸ್ಥೆ ಸದಾ ಪಣತೊಟ್ಟಿದೆ. ಈ ಬದುಕು ಪ್ರಪೂಲತೆಯಿಂದ ಸಾಗಬೇಕಾದರೆ ಸೇವಾ ಮನೋಭಾವನೆ ಅತ್ಯಗತ್ಯ” ಎಂದು ರೋಟರಿ ಜಿಲ್ಲೆ 3150 ಹಾಗೂ 3191 ಇದರ ಅಸಿಸ್ಟೆಂಟ್ ರಿಜಿನಲ್ ಕೋ ಆರ್ಡಿನೇಟರ್ ರೋ. ರಂಗನಾಥ ಭಟ್ ನುಡಿದರು. ಅವರು ಸುಬ್ರಮಣ್ಯ ರೋಟರಿ ಕ್ಲಬ್ಬಿನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದ ಪ್ರಧಾನ ಅಧಿಕಾರಿಯಾಗಿ ಮಾತನಾಡಿದರು.

. . . . . . .

ಆರಂಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ರೋ.ಪ್ರಶಾಂತ ಕೋಡಿಬೈಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸವನ್ನೂರು ವಿದ್ಯಾ ರಶ್ಮಿ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸೀತಾರಾಮ ರೈ ಮಾತನಾಡುತ್ತ “ಗ್ರಾಮೀಣ ಮಟ್ಟದಲ್ಲಿ ಅದಮ್ಯ ಸೇವಾ ತತ್ವದ ಮೆರೆಯುತ್ತಾ ರೋಟರಿ ಜಿಲ್ಲೆಯಲ್ಲಿ ತನ್ನದೇ ಆದ ವಿಶಿಷ್ಟ ಚಾಪನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಹೊಂದಿದೆ. ನೂತನ ಅಧ್ಯಕ್ಷ ಚಂದ್ರಶೇಖರ್ ನಾಯರ್ ಅವರಿಂದ ಇನ್ನಷ್ಟು ಸಮಾಜಮುಖಿ ಸೇವೆಗಳು ನಡೆಯಲಿ. ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಇರುವ ತನ್ನದೇ ಆದ ಜಾಗದಲ್ಲಿ ರೋಟರಿ ಭವನ ಶೀಘ್ರವಾಗಿ ಎದ್ದು ನಿಲ್ಲಲಿ” ಎಂದು ಶುಭ ಹಾರೈಸಿದರು. ಕ್ಲಬ್ ನ ಪ್ರಸಕ್ತ ಕಾರ್ಯದರ್ಶಿ ಮೋಹನ್ ದಾಸ್ ಎಣ್ಣೆ ಮಜಲು ವರದಿ ವಾಚಿಸಿದರು. ಪದಗ್ರಹಣ ಅಧಿಕಾರಿ ರಂಗನಾಥ್ ಭಟ್ ಅವರು ನೂತನ ಅಧ್ಯಕ್ಷ ಚಂದ್ರಶೇಖರ ನಾಯರ್, ಕಾರ್ಯದರ್ಶಿ ಚಿದಾನಂದ ಕುಳ, ಖಜಾಂಜಿ ಜಯಪ್ರಕಾಶ್ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ತದನಂತರದ ಸಮಾರಂಭದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿ ಮುಂದಿನ ಸಾಲಿನಲ್ಲಿ ತಾನು ಕೈಗೊಳ್ಳುವಂತ ಎಲ್ಲ ಸಮಾಜಮುಖಿ ಸೇವೆಗಳಿಗೆ ಎಲ್ಲರ ಸಹಕಾರವನ್ನು ಕೋರಿದರು. ವಲಯ 5ರ ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್ ಮಾತನಾಡಿ ಜಿಲ್ಲಾ ಗವರ್ನರ್ ಅವರ ಮುಂದಿನ ಯೋಜನೆಗಳು ಹಾಗೂ ರೋಟರಿಯ ಉದ್ದೇಶಗಳನ್ನು ವಿವರಿಸಿದರು.

ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ಶುಭ ಹಾರೈಸಿದರು. ಸುಳ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಯೋಗಿತ ಗೋಪಿನಾಥ್ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್ ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಎಸ್.ಎಸ್ .ಪಿ. ಯು. ಸಿ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳನ್ನು ಕ್ಲಬ್ಬಿನ ವತಿಯಿಂದ  ಗೌರವಿಸಲಾಯಿತು. ಈ ಸಂದರ್ಭದಲ್ಲಿ ಏನೇಕಲ್ಲು ಅಂಗನವಾಡಿ ಮೂಲಸೌಕರ್ಯಕ್ಕೆ ದೇಣಿಗೆ, ಬ್ಯಾಡ್ಮಿಂಟನ್ ಆಟಗಾರನಿಗೆ ಕೊಡುಗೆ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ಕೊಡುಗೆಗಳನ್ನು ದಾನಿಗಳಾದ ಚಂದ್ರಶೇಖರ ನಾಯರ್, ಬಾಲಕೃಷ್ಣ ಪೈ, ಹಾಗೂ ಅಮೆರಿಕನ್ ಯೂನಿವರ್ಸಿಟಿಯ ಬ್ಯಾಡ್ಮಿಂಟನ್ ಕೋಚ್ ರಾಜ ಸುಬ್ರಹ್ಮಣ್ಯ ಅವರುಗಳು ವಿತರಿಸಿದರು. ರೊಟೇರಿಯನ್ ಗಳಾದ ಶಿವರಾಮ ಏನೇಕಲ್, ಬಾಲಕೃಷ್ಣ ಪೈ, ಭವಾನಿ ಶಂಕರ ಪೈಲಾಜೆ, ಕಿಶೋರ್ ಕುಮಾರ್ ಕೂಜುಗೋಡು, ಜಯಪ್ರಕಾಶ್ ಅತಿಥಿಗಳನ್ನು ಪರಿಚಯಿಸಿದರು. ಪೂರ್ವಾಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ಸ್ವಾಗತಿಸಿದರು. ಪೂರ್ವ ಅಧ್ಯಕ್ಷ ಭರತ್ ನೇಕ್ರಾಜೆ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ನೂತನ ಕಾರ್ಯದರ್ಶಿ ಚಿದಾನಂದ ಕುಲ ಧನ್ಯವಾದ ಸಮರ್ಪಿಸಿದರು. ವಲಯ ಐದು ಹಾಗೂ ನಾಲ್ಕರ ವಿವಿಧ ಕ್ಲಬ್ಬುಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading