Ad Widget

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ
ಉಚಿತ ಮನೆ ಮದ್ದು ತರಬೇತಿ  ಶಿಬಿರ




ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಪಾದೆ , ನರಿಮೊಗರು, ಪುತ್ತೂರು -ಇದರ ಆಶ್ರಯದಲ್ಲಿ ಹಾಗೂ ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ  ಇದರ ಸಹಯೋಗದಲ್ಲಿ, ಅರೋಗ್ಯ ಭಾರತಿಯ ರಾಷ್ಟೀಯ ಯೋಗ ಪ್ರಮುಖ್ ಹಾಗೂ ಆಯುರ್ವೇದ ವೈದ್ಯ ಡಾ . ಟಿ . ಎನ್ . ಮಂಜುನಾಥ್ ಮತ್ತು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಯುರ್ವೇದ ತಜ್ಞ ವೈದ್ಯ  ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರಿಂದ , ಎರಡು ದಿನಗಳ ಉಚಿತ ಮನೆ ಮದ್ದು ತರಬೇತಿ  ಶಿಬಿರವು ಜುಲೈ  21 ಮತ್ತು 22, ಆದಿತ್ಯವಾರ ಮತ್ತು ಸೋಮವಾರ  ಬೆಳಿಗ್ಗೆ 9 ರಿಂದ  ಸಾಯಂ 4 ರ ತನಕ , ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಗ್ರಾಮಪಂಚಾಯತ್ ಸಮೀಪ , ನರಿಮೊಗರು ಇಲ್ಲಿ ನಡೆಯಲಿದೆ  . ಉದ್ಘಾಟನೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಜಿಲ್ಲಾ ಆರೋಗ್ಯ ಭಾರತಿ ಅಧ್ಯಕ್ಷರಾದ ಖ್ಯಾತ ನರಮಾನಸಿಕ ತಜ್ಞ ಡಾ .ಗಣೇಶ್ ಪ್ರಸಾದ್ ಮುದ್ರಜೆ ವಹಿಸಲಿದ್ದಾರೆ ಎಂದು ಪುತ್ತೂರು ಜಿಲ್ಲಾ ಅರೋಗ್ಯ ಭಾರತಿ ಕಾರ್ಯದರ್ಶಿ ಗಣೇಶ್ ಭಟ್ ಮುವ್ವಾರು ತಿಳಿಸಿದ್ದಾರೆ . ಸ್ವಸ್ಥ ಭಾರತ್ ಸಂಯೋಜಕ ಹರ್ಷಿತ್ ಬೆಟ್ಟಂಪಾಡಿ ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆ . ಆಸಕ್ತರು ದಿನಾಂಕ ಜುಲೈ 19ರ ಮೊದಲು  ನೋಂದಾಯಿಸಿಕೊಳ್ಳಬೇಕಾಗಿ ಅಪೇಕ್ಷೆ. ನೋಂದಾವಣೆಗೆ ಸಂಪರ್ಕ ಸಂಖ್ಯೆ 97 40 54 59 79 , 90 19 93 45 81 , 94 83 80 21 17 ನಂಬರ್ ಗೆ ಕರೆ ಮಾಡಬಹುದು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!