ಸುಳ್ಯ ನಿರೀಕ್ಷಿಣ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ ಸ್ವೀಕರಿಸಿದರು. ಸಾರ್ವಜನಿಕ ಅಹವಾಲುಗಳಲ್ಲಿ ಪ್ರಮುಖವಾಗಿ ರಸ್ತೆ , ನೀರು, ವಿದ್ಯುತ್, ನೆಟ್ವರ್ಕ್ ಸೇರಿದಂತೆ ಎಲ್ಲಾ ಅಹವಾಲುಗಳನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಮುಖ್ಯವಾಗಿ ಬೆಳ್ಳಾರೆ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಹೊತ್ತು ವೈದ್ಯರಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಅಲ್ಲಿಗೆ ಕಾಯಂ ವೈದ್ಯರ ನೇಮಕವಾಗಬೇಕೆಂದು ಸಾರ್ವಜನಿಕರು ಅಹವಾಲು ನೀಡಿದ್ದು ಇದಕ್ಕೆ ಸ್ಪಂದಿಸಿದ ಸಂಸದರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಲು ಸೂಚನೆ ನೀಡಿದರು.
- Wednesday
- December 11th, 2024