ಹಲವು ವರ್ಷಗಳ ರೈಲ್ವೆ ಬೇಡಿಕೆಯಾದ ಮಂಗಳೂರು ಸುಬ್ರಹ್ಮಣ್ಯ ಮಧ್ಯೆ ಸಂಜೆ ಮತ್ತು ಬೆಳಿಗ್ಗೆ ಪ್ಯಾಸೆಂಜರ್ ರೈಲು ಓಡಿಸಬೇಕೆಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಇಂದು ದ.ಕ. ಸಂಸದ ಬ್ರಿಜೇಶ್ ಚೌಟ ಇವರಿಗೆ ಮನವಿ ಸಲ್ಲಿಸಿದ್ದಾರೆ. 2023 ಡಿಸೆಂಬರ್ ನಲ್ಲಿ ಮೈಸೂರು ಡಿ ಆರ್ ಎಂ ಮತ್ತು ಪಾಲಘಡ್ ಡಿ ಆರ್ ಎಂ ಗಳ ಜಂಟಿ ಸಭೆಯಲ್ಲಿ 2024 ಜನವರಿ ವೇಳೆಗೆ ವಿದ್ಯುದ್ಧೀಕರಣಗೊಂಡ ಬಳಿಕ ರೈಲು ಓಡಿಸುವ ಭರವಸೆ ಕೊಟ್ಟಿದ್ದರು. ಈಗ ಮಂಗಳೂರು ಸುಬ್ರಹ್ಮಣ್ಯ ಮಧ್ಯೆ ವಿದ್ಯುದ್ದೀಕರಣಗೊಂಡರೂ ರೈಲು ಓಡಾಟ ನಡೆಸದಿರುವ ಬಗ್ಗೆ ಸಂಸದರಿಗೆ ಮನವರಿಕೆ ಮಾಡಿಕೊಡಲಾಯಿತು.
- Wednesday
- December 11th, 2024