ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 2024-25ನೇ ಸಾಲಿನ ರಕ್ಷಕ -ಶಿಕ್ಷಕ ಸಂಘದ ಮಹಾಸಭೆಯು ಜು. 06 ರಂದು ಪುತ್ತೂರು ಬೆಥನಿ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ಪ್ರಶಾಂತಿರವರ ನೇತೃತ್ವದಲ್ಲಿ ನಡೆಯಿತು.
ಸಭೆಯ ಮುಖ್ಯ ಅತಿಥಿಯಾಗಿ, ಶ್ರೀ ರಾಮಚಂದ್ರ ಪದವಿ ಪೂರ್ವ ಕಾಲೇಜು ಪೆರ್ನೆಯ ಪ್ರಾಂಶುಪಾಲರಾದ ಶ್ರೀಯುತ ಶೇಖರ್ ರೈ. ಕೆ., ಇವರು ಮಾತನಾಡಿ ಮಕ್ಕಳ ದೈಹಿಕ, ಮಾನಸಿಕ ,ಬೌದ್ಧಿಕ , ಸರ್ವಾಂಗೀಣ ಪ್ರಗತಿಯಾಗಿ ಮನುಷ್ಯ ಸುಗಮದ ಹಾದಿಯಲ್ಲಿ ನಡೆಯಬೇಕು. ಹಾಗೆಯೇ ಬಡತನವು ವಿಶ್ವವಿದ್ಯಾನಿಲಯ, ಅದುವೇ ಬಹಳ ವಿಸ್ತಾರಕ್ಕೆ ಸಮೃದ್ಧಿಯಾಗಿ ಬೆಳೆಸುವುದು. ಶಾಲೆಯ ವಾತಾವರಣವು ಎಲ್ಲಾ ಜಾತಿಯ ಬಣ್ಣದ ಹೂಗಳು ಒಂದೇ ಉದ್ಯಾನವನದಲ್ಲಿ ಅರಳುವ ಹಾಗೆ ಎಂದು ಅದನ್ನು ಉದ್ಯಾನವನಕ್ಕೆ ಹೋಲಿಸಿದ್ದಾರೆ. ಮಕ್ಕಳ ಸರ್ವಾಂಗೀಣ ಪ್ರಗತಿಯು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಎಲ್ಲಾರಿಗೂ ಮನಮುಟ್ಟುವಂತೆ ನುಡಿದರು.
ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅಕ್ಷತಾರವರು ಮಾತನಾಡಿ ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿಯವರಾದ ಭಗಿನಿ ಸೆಲಿನ್ ಪೇತ್ರರವರು ವಾರ್ಷಿಕ ಯೋಜನೆಯನ್ನು ಹಾಗೂ ಶಾಲಾ ನಿಯಮವನ್ನು ಸವಿಸ್ತಾರವಾಗಿ ಸಭೆಯ ಮುಂದಿಟ್ಟರು.
ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯು ನಡೆಯಿತು. ನೂತನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಪಿ.ಎ ಇಂಜಿನಿಯರಿಂಗ್ ಕಾಲೇಜು ಮಂಗಳೂರು ಇದರ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್.ಇಸ್ಮಾಯಿಲ್ ಶಾಫಿ, ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಪ್ರತಿಕ್ಷ ಪೈ, ಉಪಾಧ್ಯಕ್ಷರಾಗಿ ಪುಷ್ಪರಾಜ್ ಗಂಭೀರ್ ಆಯ್ಕೆಯಾದರು.
ಈ ಕಾರ್ಯಕ್ರಮವನ್ನು ಸಹ ಶಿಕ್ಷಕಿಯವರಾದ, ಶ್ರೀಮತಿ ಗ್ರೀಷ್ಮ ರವರು ಸ್ವಾಗತಿಸಿ, ಶ್ರೀಮತಿ ಶರಲ್ ರವರು ವಂದಿಸಿ, ಶ್ರೀಮತಿ ವೀಣಾ ಹಾಗೂ ಕುಮಾರಿ ಅನ್ವಿತಾ ರವರು ನಿರೂಪಿಸಿದರು.