Ad Widget

ಸುಳ್ಯ : ಬೆಳ್ಳಾರೆಯಲ್ಲಿ 1812 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು, ಜನಜಾಗೃತಿ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ 1812ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ 1812ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರಾಜೀವಿ ಆರ್ ರೈ ರವರು ಮಾತನಾಡುತ್ತ, ಕುಡಿತದ ಚಟದಿಂದ ಹೊರಗೆ ಬರಬೇಕು. ನವಜೀವನಕ್ಕೆ ಪಾದಾರ್ಪಣೆ ಮಾಡಬೇಕು. ಉತ್ತಮವಾಗಿ ಜೀವನ ನಡೆಸಬೇಕು ಎಂದು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಶ್ರೀ ರಮಾನಾಥ ರೈ ರವರು ಮಾತನಾಡುತ್ತ, ಯಾರು ಕೂಡ ಕುಡಿತದ ದಾಸರಾಗಬಾರದು. ಶಿಬಿರಾರ್ಥಿಗಳ ಮನೆಯವರು ಖುಷಿಯಿಂದ ಇವತ್ತು ಇಲ್ಲಿಗೆ ಬಂದಿದ್ದಾರೆ. ಶಿಬಿರಾರ್ಥಿಗಳು ಕುಡಿತದ ಚಟ ಬಿಡುತ್ತಾರೆ ಎಂಬ ಆಶಾಭಾವನೆ ಅವರಲ್ಲಿದೆ. ಶಿಬಿರಾರ್ಥಿಗಳ ಕುಡಿತ ಬಿಟ್ಟು ಸಮಾಜದಲ್ಲಿ ಗೌರವಾನ್ವಿತ ಪ್ರಜೆಗಳಾಗಿ ಬಾಳುವ ಮುಖಾಂತರ ಸಾಮಾಜಿಕ ಸಾಮರಸ್ಯವನ್ನು ಒಗ್ಗೂಡಿಸುವ ಕೆಲಸ ಶಿಬಿರದಿಂದ ಆಗಬೇಕು. ಮನುಷ್ಯ ಮನುಷ್ಯನ ಮಧ್ಯೆ ಪ್ರೀತಿಯನ್ನು ಬೆಸೆಯುವ ಕೆಲಸ ಆಗಬೇಕು ಎಂದು ಹೇಳಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯರವರು ಮಾತನಾಡುತ್ತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 42 ವರ್ಷದಿಂದ ಬಡ ಕುಟುಂಬವನ್ನು ಮೇಲೇತ್ತುವ ಕೆಲಸವನ್ನು ಮಾಡುತ್ತಾ ಬಂದಿದೆ. ಜನಜಾಗೃತಿ ವೇದಿಕೆಯಿಂದ ದುಶ್ಚಟಕ್ಕೆ ಒಳಪಟ್ಟವರನ್ನು ಸರಿ ದಾರಿಗೆ ತರುವ ಕೆಲಸವನ್ನು ಹಲವು ವರ್ಷದಿಂದ ಮಾಡುತ್ತಾ ಬಂದಿದೆ. ಇದರ ಸದುಪಯೋಗವನ್ನು ಎಲ್ಲಾರು ಪಡೆದುಕೊಂಡು ಉತ್ತಮವಾದ ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದು ಹೇಳಿದರು.
ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಎಸ್ ಅಂಗಾರರವರು ಮಾತನಾಡುತ್ತ, ಬದುಕನ್ನು ಪರಿವರ್ತನೆ ಮಾಡುವ ಕೆಲಸ ಜನಜಾಗೃತಿ ವೇದಿಕೆಯಿಂದ ಆಗುತ್ತಿದೆ. ನಾವೆಲ್ಲಾ ಜೀವನದಲ್ಲಿ ಉತ್ತಮ ಪ್ರಜೆಗಳಾಗಲು ನಮ್ಮ ಬದುಕಿನಲ್ಲಿ ಬದಲಾವಣೆ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿರವರು, ಸುಳ್ಯ ಸೇವಾ ಭಾರತಿ ಹೆಲ್ಪ್ ಲೈನ್ (ರಿ) ನ ಉಪಾಧ್ಯಕ್ಷರಾದ ಶ್ರೀ ಆರ್ ಕೆ ಭಟ್ ರವರು, ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀ ಸಂತೋಷ್ ಬಿ ರವರು, ಸುಳ್ಯ ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಕಣೆಮರಡ್ಕರವರು, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಲೋಕನಾಥ ಅಮೆಚೂರುರವರು, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ಎನ್ ಎ ರಾಮಚಂದ್ರರವರು, ತಾಲೂಕು ಜನಜಾಗೃತಿ ನಿಕಟಪೂರ್ವ ಅಧ್ಯಕ್ಷರಾದ ಮಹೇಶ್ ಕುಮಾರ್ ಮೇನಾಲರವರು, ತಾಲೂಕು ಜನಜಾಗೃತಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ವಿಮಲರಂಗಯ್ಯರವರು, ಉಡುಪಿ ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿಯವರಾದ ಶ್ರೀ ಗಣೇಶ್ ಆಚಾರ್ಯರವರು, ತಾಲೂಕು ಜನಜಾಗೃತಿ ಸದಸ್ಯರಾದ ಶ್ರೀ ಪದ್ಮನಾಭ ಜೈನ್ ರವರು, ಬೆಳ್ಳಾರೆ ಪತಂಜಲಿ ಯೋಗ ಕೇಂದ್ರದ ಯೋಗ ಶಿಕ್ಷಕರಾದ ಶ್ರೀ ಗಣಪಯ್ಯ ವನಶ್ರೀರವರು, ಬೆಳ್ಳಾರೆ ವಲಯದ ಜನಜಾಗೃತಿ ವೇದಿಕೆಯ ವಲಯಧ್ಯಕ್ಷರಾದ ಶ್ರೀ ಆನಂದ ಗೌಡ ಪೆರಿಯಾಣರವರು, ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತುರವರು, ಶಿಬಿರಾಧಿಕಾರಿಯವರಾದ ಶ್ರೀ ನಂದ ಕುಮಾರರವರು, ಅರೋಗ್ಯ ಸಹಾಯಕಿರವರಾದ ಶ್ರೀಮತಿ ನೇತ್ರಾವತಿರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಜನೆಯಿಂದ ಮಂಜೂರು ಆದ ಸೌಲಭ್ಯದಾರ ಬಂಧುಗಳಿಗೆ ಕ್ರಿಟಿಕಲ್ ಫಂಡ್, ಪ್ರಗತಿ ರಕ್ಷಾ ಕವಚ ಮಂಜೂರಾತಿ ಪತ್ರ, ಮೈಕ್ರೋ ಬಚತ್ ಮರಣ ಸಾಂತ್ವನ, ವಾಟರ್ ಬೆಡ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಊರಿನ ಗಣ್ಯರು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಸಂಘಗಳ ಸದಸ್ಯರು, ನವಜೀವನ ಸಮಿತಿಗಳ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸ್ವಯಂ ಸೇವಕರು, ಶಿಬಿರಾರ್ಥಿಗಳು, ಯೋಜನೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಯೋಜನಾಧಿಕಾರಿಯವರ ಮಾಧವರವರು ಸ್ವಾಗತಿಸಿದರು. ಜೆ ಸಿ ಐ 15 ಭಾರತ ವಲಯ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಪಣ್ಣೆರವರು ಕಾರ್ಯನಿರೂಪಿಸಿದರು. ಬೆಳ್ಳಾರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ಕೆ ರವರು ಧನ್ಯವಾದ ವಿತ್ತರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!