Ad Widget

ಮಕ್ಕಳ ಕಳ್ಳರ ಹಾವಳಿ ಪೋಸ್ಟರ್ ವೈರಲ್ ಪ್ರಕರಣಕ್ಕೆ ಟ್ವಿಸ್ಟ್ – ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲು



ಅಜ್ಜಾವರ : ಅಜ್ಜಾವರ ಗ್ರಾಮದಲ್ಲಿ ಮಕ್ಕಳ ಕಳ್ಳರ ಹಾವಳಿ ಎಂಬ ತಲೆ ಬರಹದಲ್ಲಿ ಸಂದೇಶವೊಂದು ಭಾನುವಾರ ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದು ಇದು ಪೊಲೀಸ್ ಠಾಣೆ ಮೆಟ್ಟಿಲೇರಿ ೨೪ ಗಂಟೆಯ ಒಳಗಾಗಿ ಪ್ರಕರಣದ ಸತ್ಯಾಸತ್ಯತೆಯನ್ನು ಪೊಲೀಸ್ ಅಧಿಕಾರಿಗಳು ಜಾಡು ಹಿಡಿದು ಹೊರಟಾಗ ಸತ್ಯವು ಹೊರಬಿದ್ದಿದೆ ಎಂದು ತಿಳಿದು ಬಂದಿದೆ.

ಇದು ನಡೆದಿರುವ ಸ್ಥಳವು ಅಜ್ಜಾವರ ಗ್ರಾಮದ ಕಾಟಿಪಳ್ಳ ಎಂಬಲ್ಲಿ ಎಂದು ಹೇಳಲಾಗಿದ್ದು ಅಲ್ಲಿ ಯಾವುದೇ ಸಿಸಿ ಟಿವಿ ಚಿತ್ರಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಎರಡು ಕಾರುಗಳು ಸಂಚರಿಸಿದ್ದು ಅವುಗಳು ಅಜ್ಜಾವರ ಗ್ರಾಮದ ಮೂಲದವರದ್ದು ಆಗಿದ್ದು ಇದೀಗ ಪೋಲಿಸ್ ಇಲಾಖೆಯು ತನಿಖೆಯಲ್ಲಿ ಸುಖಾಂತ್ಯಗೊಳಿಸಿದ್ದು ಬಾಲಕನು ತಪ್ಪು ಮಾಹಿತಿ ನೀಡಿರುವುದಾಗಿ ತಪ್ಪೊಪ್ಪಿಗೆ ನಡೆಸಿದ್ದು ಈ ಕುರಿತು ಪೋಷಕರು ಮತ್ತು ಜನತೆ ಯಾವುದೇ ಭಯಭೀತರಾಗುವ ಅವಶ್ಯಕತೆ ಇರುವುದಿಲ್ಲಾ ಅಲ್ಲದೇ ಅಂತಹ ಯಾವುದೇ ಅನುಮಾನಸ್ಪದವಾದ ಘಟನೆಗಳ ಬಗ್ಗೆ ಕಂಡು ಬಂದಲ್ಲಿ ವ್ಯಾಟ್ಸಪ್ ಮೂಲಕ ಪ್ರಚಾರ ಪಡಿಸದೇ ಅಂತಹ ವಿಚಾರಗಳ ಕುರಿತು ತಕ್ಷಣವೇ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಠಾಣಾಧಿಕಾರಿ ಸರಸ್ವತಿ ಬಿ ಟಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading