ನಾಳೆ ಮುಂಜಾನೆ ನೀರು ಪೂರೈಸಲು ತಾಕೀತು ನೀಡಿದ ಇ ಒ ರಾಜಣ್ಣಾ , ನೀರಿನ ನಿರ್ವಹಣಾ ವೆಚ್ಚಾ ಪಾವತಿಸಲು ಗ್ರಾಮಸ್ಥರಲ್ಲಿ ಮನವಿ.
ಅಜ್ಜಾವರ: ಅಜ್ಜಾವರ ಗ್ರಾಮದಲ್ಲಿ ಬೇಸಿಗೆ ಕಾಲದಲ್ಲಿ ವಿಧ್ಯುತ್ ಸಮಸ್ಯೆ , ನೀರಿಗೆ ಕೊರತೆ ಎಂಬೆಲ್ಲಾ ಕಾರಣಗಳನ್ನು ತಿಳಿಸುತ್ತಿದ್ದ ಪಂಚಾಯತ್ ಇದೀಗ ಮಳೆಗಾಲದಲ್ಲು ಜನರ ಮೂಲ ಸೌಕರ್ಯಗಳಲ್ಲಿ ಒಂದಾದ ನೀರು ನೀಡುವಲ್ಲಿ ವಿಫಲಾವಾದ ವಿಚಾರ ಇದೀಗ ಬಹಿರಂಗವಾಗಿದೆ.
ಮಳೆಗಾಲದಲ್ಲು ನೀರಿಗಾಗಿ ಹಾಹಾ ಕಾರ .
ಅಜ್ಜಾವರ ಗ್ರಾಮದಲ್ಲಿ ಒಟ್ಟು 18 ಪಂಪು ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದು ಅವರಲ್ಲಿ ಅತೀ ಹೆಚ್ಚು 3700 ಸಂಭಾವನೆ ಪಡೆಯುತ್ತಿದ್ದರೆ ಮತ್ತುಳಿದವರು ಅದಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದು ಇದೀಗ ಅವರಿಗೆ ನಿರಂತರವಾಗಿ ಎರಡು ತಿಂಗಳುಗಳಿಂದ ಈ ಅಲ್ಪ ಪ್ರಮಾಣದ ವೇತನ ನೀಡದ ಹಿನ್ನಲೆಯಲ್ಲಿ ಪಂಪು ಚಾಲಕರುಗಳು ಒಟ್ಟಾಗಿ ಮನವಿ ಸಲ್ಲಿಸಿ ನೀರು ಬಿಡುವ ಕೆಲಸಕ್ಕೆ ಗೈರು ಹಾಜಾರಾಗಿ ಇದೀಗ ಗ್ರಾಮದೆಲ್ಲೆಡೆ ನೀರಿಗೆ ಹಾಹಾಕಾರ ಪ್ರಾರಂಭವಾಗುವಂತಾಗಿದೆ . ಜುಲೈ ಒಂದರಂದು ಪಂಪು ಚಾಲಕರು ಪಂ ಅಭಿವೃದ್ಧಿ ಅಧಿಕಾರಿಗಳಿಗೆ ವೇತನ ನೀಡುವಂತೆ ಮನವಿ ಸಲ್ಲಿಸಿ ನೀಡದೇ ಇದ್ದಲ್ಲಿ ಜುಲೈ 5 ರಿಂದ ನೀರು ಬಿಡುವುದಿಲ್ಲ ಎಂದು ಲಿಖಿತವಾಗಿಯೇ ನೀಡಿದ್ದರು ಇದನ್ನು ಗಂಭೀರವಾಗಿ ಪರಿಗಣಿಸದ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತ ಮಂಡಳಿಯು ನಿರ್ಲಕ್ಷ್ಯದಿಂದಾಗಿ ಇದೀಗ ನಿನ್ನೆಯಿಂದ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಪ್ರಾರಂಭವಾಗಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕರೆಮಾಡಿದರೆ ಕರೆ ಸ್ವೀಕರಿಸದೇ ಇದ್ದು ಇದೀಗ ಗ್ರಾಮದೆಲ್ಲಡೆ ಒಂದು ಬಿಂದಿಗೆ ನೀರಿಗು ಹಹಕಾರ ಪ್ರಾರಂಬವಾಗಿದ್ದು ನಾಳೆ ವಾರದ ರಜೆಯಾದ ಭಾನುವಾರವಾಗಿದ್ದು ನಾಳೆಯು ನೀರು ಬರುವುದು ಬಹುತೇಕ ಸಂಶಯವಾಗಿದೆ.
ಗ್ರಾ.ಪಂ ಅಧ್ಯಕ್ಷರು ಮತ್ತು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾಹಿತಿ.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜಣ್ಣರನ್ನು ಸಂಪರ್ಕಿಸಿದಾಗ ಈ ಬಗ್ಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಲ್ಲಿ ವಿಚಾರಿಸಿ ನಾಳೆ ಮುಂಜಾನೆಯ ನೀರು ಸುಗಮವಾಗಿ ನೀಡಬೇಕು ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ನೀಡಿದ್ದು ಇದರ ಜೊತೆಗೆ ಜನರು ಕೂಡ ನೀರನ್ನು ಉಚಿತವಾಗಿ ನೀಡಿದಾಗ ನಿರ್ವಹಣಾ ವೆಚ್ಚವೆಂದು ಗ್ರಾ.ಪಂ ವಿಧಿಸುತ್ತಿದ್ದು ಅವುಗಳನ್ನು ಪಾವತಿಸಬೇಕು ಎಂದು ಜನರಲ್ಲಿ ವಿನಂತಿಯನ್ನು ಮಾಡಿದ್ದು ಜನರ ಸಹಕಾರವು ಅಗತ್ಯವಾಗಿದೆ.
ಪಂಪು ಚಾಲಕರು ಮನವಿ ನೀಡಿ ಜುಲೈ 5ರ ತನಕ ಬಿಡುವುದಾಗಿ ತಿಳಿಸಿದ್ದು ಈ ಬಗ್ಗೆ ಪಂಪು ಚಾಲಕರ ಜೊತೆ ಮಾತುಕತೆ ನಡೆಸಲಾಗಿತ್ತು ಆದರೆ ಅವರು ಹೇಳಿದಂತೆ ಇದೀಗ ಕೆಲಸ ಸ್ಥಗಿತಗೊಳಿಸಿದ್ದು ಗ್ರಾಮದಲ್ಲಿ ನೀರಿನ ಮೊತ್ತ ಪಾವತಿಸಲು ಬಾಕಿ ಇರುವವರು ಕಟ್ಟಬೇಕು ಇಲ್ಲವಾಗಿದ್ದಲ್ಲಿ ಇಂತಹ ಪರಿಸ್ಥಿತಿ ಎದುರಾಗುತ್ತದೆ ಅಲ್ಲದೇ ನಾಳೆ ಪಂ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ಮಾತನಾಡಿ ಸಮಸ್ಯೆ ಬಗೆ ಹರಿಸುವಿದಾಗಿ ಗ್ರಾ.ಪಂ ಅಧ್ಯಕ್ಷರಾದ ಬೇಬಿ ಕಲ್ತಡ್ಕ ತಿಳಿಸಿದರು. ಇವೆಲ್ಲದರ ಮಧ್ಯೆ ಸರಕಾರ ಮತ್ತು ಹಿರಿಯ ಅಧಿಕಾರಿಗಳು ಗಮನ ಹರಿಸಿ ನೀರು ಸರಬರಾಜಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದೇ ಎಂದು ಕಾದು ನೋಡಬೇಕಿದೆ.