ಜವಾಹರ್ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಯ 2ನೆ ಸುತ್ತಿನ ಆಯ್ಕೆ ಪಟ್ಟಿ ಪ್ರಕಟಗೊಂಡಿದ್ದು, ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ ಮೂವರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ಚಿಕ್ಕತ್ತೂರಿನ ಕೀರ್ತಿಪ್ರಸಾದ್ ಸಿ ಎಂ ಮತ್ತು ಸುಪ್ರಿಯಾ ಹೆಚ್ ಜೆ ದಂಪತಿಯ ಪುತ್ರ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ಮೌರ್ಯ ಕೆ ಪ್ರಸಾದ್, ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಜಾಡಿಮನೆ ಜಯಪ್ರಕಾಶ್ ಕೆ.ಎಂ ಮತ್ತು ಜಯಂತಿ ದಪಂತಿಯ ಪುತ್ರ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನ್ವಯ್ ಕೆ, ಬಾಳಿಲ ಗ್ರಾಮದ ದೇರಂಪಾಲು ಡಾ.ರವಿಚಂದ್ರ ನಾಯ್ಕ ಮತ್ತು ಪವಿತ್ರ ಕೆ ದಂಪತಿಯ ಪುತ್ರಿ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಹಂಸಿಕಾ ಡಿ ಆರ್ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. 185 ವಿದ್ಯಾರ್ಥಿಗಳು ಆಯ್ಕೆ2023-24ನೇ ಸಾಲಿನಲ್ಲಿ ಜ್ಞಾನದೀಪ ಸಂಸ್ಥೆಯಿಂದ ತರಬೇತಿ ಪಡೆದ ಒಟ್ಟು 20 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ಇಲ್ಲಿ ತರಬೇತಿ ಪಡೆದ 185 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಗಿದ್ದಾರೆ. 2024-25ನೇ ಸಾಲಿನ ನವೋದಯ ತರಬೇತಿ ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿಯಲ್ಲಿ ಆರಂಭಗೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
- Sunday
- November 24th, 2024