Ad Widget

ಸುರಕ್ಷಾ ದಂತ ಚಿಕಿತ್ಸಾಲಯದ ವತಿಯಿಂದ ಸಸಿ ವಿತರಣೆ

ಸುರಕ್ಷಾ ದಂತ ಚಿಕಿತ್ಸಾ ಲಯದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯದ ೨೭ನೆಯ ಸಂಸ್ಥಾಪನಾ ದಿನಾಚರಣೆ   ಅಂಗವಾಗಿ ಜು.3ರಂದು   ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಸುಮಾರು ೫೦ ಮಂದಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.  ಶ್ರೀ ವಿದ್ಯಾಧರ್ ಅವರಿಗೆ ನೆಲ್ಲಿಕಾಯಿ ಮತ್ತು ಹಲಸಿನಹಣ್ಣಿನ ಗಿಡವನ್ನು ಡಾ ಮುರಲಿ ಮೋಹನ್ ಚೂಂತಾರು ಅವರು ನೀಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ ರಾಜಶ್ರೀ  ಮೋಹನ್, ದಂತ ಪರಿಚಾರಕಿಯರಾದ ರಮ್ಯಾ, ಚೈತ್ರಾ, ಸುಷ್ಮಿತಾ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು. ಕಳೆದ ಹತ್ತು ವರುಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯ ನಿರಂತರವಾಗಿ ಸಸಿ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ಜೂನ್ ಮತ್ತು ಜುಲೈ ತಿಂಗಳಿಡೀ ಆಚರಿಸುತ್ತಾ ಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading