Ad Widget

ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪಠ್ಯೇತರ ತರಗತಿಗಳ ಉದ್ಘಾಟನೆ

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ
2024 25ನೇ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಗಳಾದ ಚಿತ್ರಕಲೆ, ಭರತನಾಟ್ಯ, ಚೆಸ್, ಕರಾಟೆ ಹಾಗೂ ಯಕ್ಷಗಾನ ದ ಲಲಿತ ಕಲಾ ತರಗತಿಗಳು ಇಂದು ಪ್ರಾರಂಭಗೊಂಡಿದ್ದು. ಲಲಿತ ಕಲಾ ತರಗತಿಗಳ ಉದ್ಘಾಟನೆಯನ್ನು ಶ್ರೀ ಸುಬ್ರಹ್ಮಣ್ಯ ಮರಕತ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಸಂಚಾಲಕರು ಶ್ರೀ ಚಂದ್ರಶೇಖರ್ ನಾಯರ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ, ಭರತನಾಟ್ಯ ಶಿಕ್ಷಕಿಯಾದ ವಿದುಷಿ ರಶ್ಮಿ, ಚಿತ್ರಕಲಾ ಶಿಕ್ಷಕರಾದ ಪ್ರಸನ್ನ ಐವರ್ನಾಡು ಉಪಸ್ಥಿತರಿದ್ದರು. ಈ ಲಲಿತಕಲಾ ತರಗತಿಗಳು ಪ್ರತಿ ಬುಧವಾರ ಶಾಲೆಯಲ್ಲಿ ನಡೆಯಲಿದ್ದು ಈ ತರಗತಿಗಳನ್ನು ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಚಿತ್ರಕಲೆಯನ್ನು ಶ್ರೀ ಪ್ರಸನ್ನ ಐವರ್ನಾಡು, ಭರತನಾಟ್ಯವನ್ನು ವಿದುಷಿ ರಶ್ಮಿ, ಕರಾಟೆಯನ್ನು ಶ್ರೀ ದಿನೇಶ್, ಚೆಸ್ ತರಬೇತಿಯನ್ನು ಶ್ರೀ ಜಗನ್ನಾಥ್, ಹಾಗೂ ಯಕ್ಷಗಾನವನ್ನು ಶ್ರೀ ಗಿರೀಶ್ ಗಡಿಕಲ್ಲು ತರಬೇತಿ ನೀಡಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!