ತವರು ಮನೆಗೆ ಬಂದಿದ್ದ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪತಿ ಕೊನೆಗೆ ಚೂರಿಯಿಂದ ಇರಿದ ಘಟನೆ ನಡೆದಿದ್ದು, ಮಹಿಳೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಾಗಿದೆ.
ಜಾಲ್ಸೂರು ನಿವಾಸಿ ಅಶ್ವಿನಿ ಎಂಬವರು ಕಳೆದ 6 ವರ್ಷಗಳ ಹಿಂದೆ ನವೀನ್ ಕುಮಾರ್ ಎಂಬಾತನನ್ನು ವಿವಾಹವಾಗಿದ್ದರು. ಮದುವೆಯ ನಂತರ ಪತಿ ವಿನಃ ಕಾರಣ ಪತ್ನಿಗೆ ಕಿರುಕುಳ ನೀಡುತ್ತಾ ಜಗಳವಾಡುತ್ತಿದ್ದರೆನ್ನಲಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ತನ್ನ ತವರು ಮನೆಯಾದ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ವಾಸವಾಗಿದ್ದರು. ಜೂ 28 ರಂದು ಅಲ್ಲಿಗೆ ಬಂದ ಪತಿ ನವೀನ್ ಕುಮಾರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನಲ್ಲಿದ್ದ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಬೊಬ್ಬೆ ಕೇಳಿ ಮಹಿಳೆಯ ಸಂಬಂಧಿಕರು ಬಂದಾಗ ಆತ ಚೂರಿಯನ್ನು ಸ್ಥಳದಲ್ಲಿ ಬಿಸಾಡಿ ಪರಾರಿಯಾಗಿರುತ್ತಾನೆ. ಮಹಿಳೆಯನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಮಹಿಳೆ ನೀಡಿದ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 89/2024 ಕಲಂ: 324.307 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
- Wednesday
- December 4th, 2024