ಕರ್ತವ್ಯದಲ್ಲಿ ಪರಿಣತಿ ಹೊಂದುವುದರಿ0ದ ಸೇವಾ ನಿಷ್ಠೆ ಸಾಧ್ಯ: ಎಸಿ ಜುಬಿನ್ ಮೊಹಾಪತ್ರ
ಸುಬ್ರಹ್ಮಣ್ಯ: ಕರ್ತವ್ಯದಲ್ಲಿ ಪರಿಣತಿ ಹೊಂದುವುದರಿ0ದ ಸೇವಾವಧಿಯಲ್ಲಿ ಶಿಸ್ತುತಮವಾದ ಕರ್ತವ್ಯ ನಿರ್ವಹಿಸಲು ಸಾಧ್ಯವಿದೆ. ಸೇವಾನಿಷ್ಠತೆಯು ಸೇವಾಜೇಷ್ಠತೆಯ ಆಧಾರದಲ್ಲಿ ಉತ್ಕೃಷ್ಠವಾಗಿ ಅಧಿಕಾರಿಗೆ ಬರುತ್ತದೆ. ಡಾ.ನಿಂಗಯ್ಯ ಅವರು ತಮ್ಮ ಸುಧೀರ್ಘವಾದ ಸೇವಾಧಿಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು. ಸೇವಾ ನಿವೃತ್ತಿ ಎನ್ನುವುದು ಸರಕಾರಿ ಸೇವೆಯಲ್ಲಿ ಇರುವ ಸ್ವಾಭಾವಿಕ ವಿಚಾರ. ಸಿಬ್ಬಂಧಿಗಳು ಈ ಬಗ್ಗೆ ಅರಿತುಕೊಂಡು ತಮ್ಮ ಕರ್ತವ್ಯ ನಿಷ್ಠೆಯನ್ನು ಮತ್ತು ಹೆಚ್ಚಿಸಿಕೊಳ್ಳಬೇಕು.ಕಾರ್ಯಕ್ಷಮತೆಯನ್ನು ಅಧಿಕಗೊಳಿಸುವ ಮೂಲಕ ಉತ್ತಮವಾಗಿ ಕೆಲಸ ಕಾರ್ಯದತ್ತ ಗಮನ ಹರಿಸುವುದು ಅತ್ಯಗತ್ಯ ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಮತ್ತು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಾಪತ್ರ ಹೇಳಿದರು.
೩೫ ವರ್ಷಗಳ ಸರಕಾರಿ ಸೇವೆಯಿಂದ ಸೇವಾ ನಿವೃತ್ತಿ ಹೊಂದಿದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಸಿಬ್ಬಂಧಿಗಳು ಕರ್ತವ್ಯ ನಿಷ್ಠೆ ತೋರಿಸಿದಾಗ ಅನುಕೂಲಕರ ಸನ್ನಿವೇಶ ನಿರ್ಮಾಣವಾಗುತ್ತದೆ.ಕರ್ತವ್ಯ ಅವಧಿಯಲ್ಲಿ ಶ್ರಮವಹಿಸಿ ಸೇವೆ ನೆರವೇರಿಸಿದರೆ ಅದು ಸರ್ವರ ಪ್ರೀತಿಗೆ ಪಾತ್ರವಾಗುತ್ತದೆ ಎಂದರು.
ಗೌರವಾರ್ಪಣೆ:
ಡಾ.ನಿಂಗಯ್ಯ ಅವರ ಪತ್ನಿ ನಾಗರತ್ನ,ಅವರ ಪುತ್ತಿಯರಾದ ನವ್ಯಶ್ರೀ, ನಿಧಿಶ್ರೀ, ಶ್ರೀ ದೇವಳದ ಎಇಒ ಯೇಸುರಾಜ್ ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ಆಡಳಿತಾಧಿಕಾರಿಗಳು ಶಾಲು ಹೊದಿಸಿ ಶ್ರೀ ದೇವರ ಬೆಳ್ಳಿ ಪೋಟೋ ನೀಡಿ ಸನ್ಮಾನಿಸಿದರು.
ಶುಭ ಹಾರೈಕೆ:
ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯಕುಮಾರ್, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಸಿಬ್ಬಂಧಿಗಳಾದ ರಾಜಲಕ್ಷ್ಮಿ ಪಿ.ಶೆಟ್ಟಿಗಾರ್, ನಿಂಗಣ್ಣ ಗೌಡ, ಮಹೇಶ್ ಕುಮಾರ್.ಎಸ್ ಶುಭ ಹಾರೈಸಿದರು. ಸಿಬ್ಬಂಧಿಗಳಾದ ಪೂರ್ಣಿಮಾ ಮತ್ತು ಅರ್ಪಿತಾ ಪ್ರಾರ್ಥನೆ ಹಾಡಿದರು. ಅಭಿಯಂತರ ಉದಯ ಕುಮಾರ್, ಸ್ವಾಗತಿಸಿದರು. ಯೋಗೀಶ್.ಎಂ.ವಿಟ್ಲ ವಂದಿಸಿದರು.ಮಹೇಶ್ ಕುಮಾರ್.ಎಸ್ ನಿರೂಪಿಸಿದರು.
- Sunday
- November 24th, 2024