ಗೆಳೆಯರೊಂದಿಗೋ, ಬಂಧುಗಳೊಂದಿಗೋ ಕುಳಿತು ಐಸ್‌ಕ್ರೀಮ್ ಚಪ್ಪರಿಸುವುದೆಂದರೆ ಎಲ್ಲಿಲ್ಲದ ಆನಂದ! ಹಾಗೆಂದು ಅದರಲ್ಲಿ ಏನೆಲ್ಲ ಇದೆಯೆಂದು ನಾವು ಹುಡುಕಿದರೆ-“ತಾಜಾ ಹಾಲು, ಸಕ್ಕರೆ, ಬಾದಾಮಿ, ಸೋಯಾಬೀಜದ ಪ್ರೊಟೀನ್, ಲೆಸಿಥಿನ್, ತೆಂಗಿನೆಣ್ಣೆ, ಸರ್ಯಕಾಂತಿಎಣ್ಣೆ, ಕ್ಲೋರೋಫಿಲ್, ನಿಂಬೆ ಮುಂತಾದ ನೈಸರ್ಗಿಕ ಪರಿಮಳ, ಡೆಕ್ಸ್ಟ್ರೋಸ್, ಕ್ರೀಮ್, ಗ್ಲಕೋಸ್, ಹಾಲಿನ ಹುಡಿ, ಲೋಕಸ್ಟ್ ಬೀನ್‌ಗಮ್-ಗುವಾರ್‌ಗಮ್,-ಕ್ಯಾರಾಜೀನನ್ ಮುಂತಾದ ಸ್ಥಿರತೆಕಾರಕ ಸ್ಟೇಬಿಲೈಸರ್‌ಗಳು, ಎಮಲ್ಸಿಫಯರ್( mono and diglycerides of fatty acids), ಸಮುದ್ರದ ಉಪ್ಪು”- ಇತ್ಯಾದಿ ಇದರಲ್ಲಿ ಇರುವ ಬಹುತೇಕ ದ್ರವ್ಯಗಳು ಅತಿಸಂಸ್ಕರಿತಆಹಾರದ ಪ್ರಮುಖಭಾಗಗಳು. ಅಥವಾಅಡುಗೆಕೋಣೆಯಲ್ಲಿ ಕಾಣಸಿಗದ ವಸ್ತು ಯಾವುದಾದರೂ ಆಹಾರದಲ್ಲಿ ಇದ್ದರೆ ಅದುಅತಿಯಾಗಿ ಸಂಸ್ಕರಿಸಿದ ಆಹಾರ ಅಥವಾ ultra processed food. ಇದುಅದರ ಸರಳವ್ಯಾಖ್ಯೆ. ಆದರೆ ಐಸ್‌ಕ್ರೀಮ್‌ನ್ನುಉದಾಹರಣೆಯಾಗಿಟ್ಟುಕೊಂಡುಎಲ್ಲಾಅತಿ ಸಂಸ್ಕರಿಸಿದ ಆಹಾರಗಳ ಬಗ್ಗೆ ವಿವರಿಸಬಹುದು.
ಎಮಲ್ಸಿಫಯರ್‌ಗಳು ಹಾಗೂ ಗಮ್ ನಂತಹ ಪದಾರ್ಥಗಳನ್ನು ಹಾಕಿ ಹೇಗೆ ಐಸ್‌ಕ್ರೀಮ್ ತಯಾರಾಗುತ್ತದೆ ಮತ್ತು ಅದು ಉತ್ಪಾದನಾವೆಚ್ಚವನ್ನು ತಗ್ಗಿಸುವಲ್ಲಿ ಹೇಗೆ ಸಹಕಾರಿಯಾಗುತ್ತದೆ ಎಂಬುದುಅಧ್ಯಯನದ ವಿಷಯ. ಮೊದಲನೆಯದಾಗಿ, ಅವುಗಳು ಐಸ್‌ಕ್ರೀಮ್‌ನ್ನು ಬಿಸಿಯನ್ನು ಸಹಿಸುವ ವಸ್ತುವಾಗಿ ರೂಪಿಸುತ್ತದೆ. ಮತ್ತುಅದರ ಸಾಗಣಿಕೆಕೂಡ ಸುಲಭವಾಗುತ್ತದೆ. ಕಾರ್ಖಾನೆಗಳಿಂದ ವಾಹನಗಳಿಗೆ, ವಾಹನಗಳಿಂದ ಸೂಪರ್‌ಮಾರ್ಕೆಟ್‌ಗಳಿಗೆ, ಅಲ್ಲಿಂದ ನಿಮ್ಮ ಮನೆಯ ಫ್ರೀಜರ್‌ಗೆ. ಗಮ್, ಗ್ಲಿಸರಿನ್ ಹಾಗೂ
ಎಮಲ್ಸಿಫಯರ್‌ಗಳು ಮಂಜು ಹರಳುಗಟ್ಟದಂತೆ ತಡೆಯುತ್ತದೆ; ನೀರನ್ನುತನ್ನಲ್ಲಿಯೇ ಹಿಡಿದಿಟ್ಟುಕೊಳ್ಳುವ ಕಾರಣದಿಂದ. ಸುಲಭಸಾಗಾಣಿಕೆ ಮತ್ತುಅತ್ಯಂತಕಡಿಮೆಉಷ್ಟತೆಯಅಗತ್ಯವನ್ನುಕಡಿಮೆ ಮಾಡುತ್ತದೆ. ಜನರುಐಸ್‌ಕ್ರೀಮ್‌ನಕ್ರೀಮ್ ಸ್ವಭಾವವನ್ನು ಹೆಚ್ಚು ಇಷ್ಟಪಡುತ್ತಾರೆ, ಮಂಜುಗಡ್ಡೆಯ ತುಣುಕುಗಳನ್ನು ಅಲ್ಲತಾನೇ? ಐಸ್‌ಕ್ರೀಮ್‌ತಯಾರುಮಾಡುವ ಪ್ರಯೋಗದ ಹಂತದಲ್ಲಿಯೇಉದ್ದೇಶ ಸ್ಪಷ್ಟವಾಗಿತ್ತು. ನೊರೆಯ ಮುದ್ದೆ (blocks of foam) ಯೊಂದುರೂಮಿನ ಸಾಮಾನ್ಯಉಷ್ಣತೆಯಲ್ಲಿ ಸ್ಥಿರವಾಗಿರುವಂತೆ ನೋಡಿಕೊಳ್ಳುವುದು, ಜಗತ್ತಿನ ನಾನಾ ಭಾಗಗಳಿಗೆ ಸಾಗಿಸುವುದು ಮತ್ತುಆಯಾ ಸ್ಥಳಗಳಲ್ಲಿ ಫ್ರೀಜರ್‌ಗಳಲ್ಲಿ ಸಂಗ್ರಹಿಸಿಡುವುದು. ಇದನ್ನು ಸಾಧಿಸಿದರೆ ಖರ್ಚುಕಮ್ಮಿ, ಉಳಿತಾಯ ಅಧಿಕ. ಹೆಚ್ಚಿನ ಐಸ್‌ಕ್ರೀಮುಗಳು ಇದಕ್ಕೆ ಹೊರತಾಗಿಲ್ಲ. ಆದರೆ ಸೂಕ್ಷ್ಮಾಣುಗಳು ಒಂದೇ ಉಳಿದಿರುವ ಸಮಸ್ಯೆ. ಅವು ಕೂಡಾಐಸ್‌ಕ್ರೀಮನ್ನು ಬಹುವಾಗಿ ಪ್ರೀತಿಸುತ್ತವೆ. ಆದುದರಿಂದ ಅವುಗಳಿಂದ ತಪ್ಪಿಸಿ ಕೆಡದಂತೆಇಡಲು ಫ್ರೀಜರ್‌ಅವಶ್ಯಕ. ಸ್ವಲ್ಪಉತ್ತಮ, ನೈಸರ್ಗಿಕವೆಂದು ಹೇಳಿಕೊಳ್ಳುವ ಐಸ್‌ಕ್ರೀಮ್‌ತಯಾರಿಕಾ ಕಂಪೆನಿಗಳು ಸ್ವಲ್ಪ ಭಿನ್ನವಾದ ವಸ್ತುಗಳನ್ನು ಬಳಸಬಹುದು. ಪಾಮ್ ಸ್ಟಿಯರಿನ್, ಪಾಮ್‌ಆಯಿಲ್, ಎಮಲ್ಸಿಫಯರ್, ಸ್ಟೇಬಿಲೈಸರ್ , ಪರಿಮಳ ದ್ರವ್ಯಗಳು , ಬಣ್ಣಗಳು ಇತ್ಯಾದಿ.
ಇವು ಕಂಪೆನಿಗಳಿಗೆಹಣ ಉಳಿತಾಯಮಾಡಿಕೊಡುತ್ತದೆ. ಏಕೆಂದರೆ ಹಾಲು, ಬೆಣ್ಣೆ, ಸಕ್ಕರೆ, ನಿಜವಾದ ವೆನಿಲ್ಲಾ ಹಾಕಿ ಐಸ್‌ಕ್ರೀಮ್‌ತಯಾರಿಸಬೇಕಾದರೆಅದುಅತ್ಯಂತದುಬಾರಿಯಾಗುತ್ತದೆ. ಸಾಗಾಟದ ಸಮಯವನ್ನು ತಾಳಿಕೊಳ್ಳುವ ಗುಣವೂಅದಕ್ಕೆಇರುವುದಿಲ್ಲ. ಮಾರಾಟದ ವೆಚ್ಚವೂ ಅತ್ಯಂತ ಹೆಚ್ಚಾಗಿರುತ್ತದೆ. ಆದುದರಿಂದ ಬದಲಿವಸ್ತುಗಳನ್ನು ಬಳಸುವುದು ಇಂತಹ ಅತಿಸಂಸ್ಕರಿಸಿದ ಕೃತಕ ಹಾಗೂ ಮಾರಕ ಆಹಾರಗಳ ಕ್ರಮ. ನಾವು “ಆಹಾರ”ವೆಂದುಕರೆಯುವ ಸಾಂಪ್ರದಾಯಿಕ ಆಹಾರಗಳಲ್ಲಿ ರುಚಿ, ರಚನೆ, ಮತ್ತು ಶಕ್ತಿ ನೀಡುವ ವರ್ಗದ ಪಿಷ್ಟ (ಕಾರ್ಬೋಹೈಡ್ರೇಟ್), ಸಸಾರಜನಕ (ಪ್ರೊಟೀನ್), ಕೊಬ್ಬು(fat) ಹಾಗೂ ಜಿವಸತ್ವ (ವಿಟಾಮಿನ್), ಖನಿಜಾಂಶಗಳು ಇರುತ್ತವೆ. ಅಂದರೆ ಅತಿಸಂಸ್ಕರಿಸಿದ ಆಹಾರಗಳ ಉದ್ದೇಶವೇ ಬೇರೆ. ಅದು ನಿಮಗೆ ಶಕ್ತಿ ಹಾಗೂ ಪೋಷಕಾಂಶಗಳನ್ನು ನೀಡುವುದುಅಲ್ಲಎಂಬುದು ನಿಮ್ಮಗಮನದಲ್ಲಿಗಟ್ಟಿಯಾಗಿರಲಿ. ಬದಲಿಗೆ ಸಾಂಪ್ರದಾಯಿಕಆಹಾರ ಪದರ್ಥಗಳನ್ನು ದೂರತಳ್ಳಿ, ಅಗ್ಗದ ಬದಲಿವಸ್ತುಗಳನ್ನು ಬಳಸಿ ನಿಮ್ಮರುಚಿಯನ್ನು ಹೆಚ್ಚಿಸುವುದು (ಅಂದರೆ ರುಚಿಕೆಡಿಸುವುದು!) ಮತ್ತು ಕೆಲವೂಂದು ವಸ್ತುಗಳನ್ನು (additives) ಸೇರಿಸಿ ದೀರ್ಘಕಾಲ ಅವುಗಳನ್ನು ಕೆಡದಂತೆ ಉಳಿಸುವುದು ಮತ್ತು ಹೊರಗೆಅತಿಯಾಗಿ ಬಳಕೆಯಾಗುವಂತೆ ಉತ್ತೇಜನ ನೀಡುವುದು. ಬೆಣ್ಣೆ, ಪಿಜ್ಜಾ, ಪೇಸ್ಟಿçಗಳು- ಎಲ್ಲವೂಕೂಡಾ ನೈಜ ಆಹಾರಗಳಾಗಿಯೇ ಶುರುವಾದವುಗಳು. ಆದರೆUtraprocesse ಅಲ್ಲದ ನೈಜರೂಪದಲ್ಲಿ ಅವು ದುಬಾರಿ. ಆದುದರಿಂದ ಅವುಗಳ ಪಾರಂಪರಿಕ ವಸ್ತುಗಳ ಸ್ಥಾನವನ್ನುಕೃತಕ ರಾಸಾಯನಿಕಗಳು ಆಕ್ರಮಿಸಿಕೊಂಡವು. ಈ ಬದಲಿವಸ್ತುಗಳು, ಪ್ರಾಣಿಗಳಿಗಾಗಿ ಬೆಳೆದ ಆಹಾರಗಳಿಂದ ಸಂಗ್ರಹಿಸಿ ಶೇಖರಣೆ ಮಾಡಿದ್ದುಆಗಿರುತ್ತವೆ. ಆ ವಸ್ತುಗಳನ್ನು ಸಂಸ್ಕರಣ ( refined )ಗೊಳಿಸಿ, ರೂಪಾಂತರ ಗೊಳಿಸಿ ಬಳಸಲಾಗುತ್ತವೆ. ಆ ಹೊತ್ತಿಗೆ ಆ ವಸ್ತುಗಳು ಆಹಾರವಾಗಿ ಉಳಿಯದೆ, ಏತಕ್ಕೂ ಬೇಡದಕಸದ ಮೌಲ್ಯವನ್ನಷ್ಟೇ ಉಳಿಸಿಕೊಂಡಿರುತ್ತವೆ.
ಬಹುಶಃ ಇಂದುಯಾವುದೇಆಹಾರದಘಟಕವನ್ನಾದರೂ, ಅದನ್ನೇ ಹೋಲುವ ಇನ್ನೊಂದುಕಡಿಮೆ ವೆಚ್ಚದ, ಕೃತಕತಯಾರಿಕೆಯ ವಸ್ತುಗಳನ್ನು ಬದಲಿಯಾಗಿ ಉಪಯೋಗಿಸಿ, ನೈಜವೆಂಬಂತೆ ಮಾರಾಟ ಮಾಡಬಹುದು. ತಂತ್ರಜ್ಞಾನ ಮತ್ತು ಮಾನವ ಬುದ್ಧಿಮತ್ತೆಯ ಪರಾಕಾಷ್ಠೆ ಅಷ್ಟನ್ನು ಸಾಧಿಸಿದೆ. ನಮ್ಮ ನೈಜ, ನೈಸರ್ಗಿಕಆಹಾರ ಸೇವಿಸುವ ಹಕ್ಕು ಮತ್ತು ಅವಕಾಶಗಳನ್ನು ಕಸಿದುಕೊಂಡಿದೆ. ತಯಾರಿಸುತ್ತದೆ
ಬೇರೆ ಬೇರೆ ಸಸ್ಯಗಳು ಬೇರೆ ಬೇರೆರೀತಿಯ ಪಿಷ್ಠವನ್ನು (Starch) ತಯಾರಿಸುತ್ತದೆ. ಕೆಲವು ಸಲ ಪರಸ್ಪರ ವಿರುದ್ಧ ಗುಣಗಳನ್ನೂ ಹೊಂದಿರುತ್ತವೆ. ವಿಧವಿಧದಜೆಲ್ ಮತ್ತು Pasteಗಳನ್ನು ತಯಾರಿಸಲು, ಬೇರೆ ಬೇರೆ ಉಷ್ಣತೆಗಳಲ್ಲಿ ಮತ್ತು ವಿನ್ಯಾಸಗಳಲ್ಲಿ, ಅವುಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಬಹುದು. 19 ನೆಯ ಶತಮಾನದಲ್ಲಿರಸಾಯನಶಾಸ್ತçಜ್ಞರಿಗೆಒಂದು ವಿಚಾರಗೊತ್ತಾಯಿತು. Starch ಅಥವಾ ಪಿಷ್ಠವನ್ನು ಬೇರೆ ಬೇರೆ ರೀತಿಗಳಲ್ಲಿ ರೂಪಾಂತರಿಸುವುದರ ಮೂಲಕ, ನಮಗೆ ಬೇಕಾದಂತಹ ಗುಣಧರ್ಮಗಳ ವಸ್ತುಗಳನ್ನು ರೂಪಿಸಬಹುದು. ನೀವು ಗಮನಿಸಿದರೆ, ಅತಿಯಾಗಿ ಸಂಸ್ಕರಿಸಿದ ಆಹಾರಗಳಲ್ಲಿ ಇರುವ ವಸ್ತುಗಳು, ಹಾಲು ಮತ್ತು ಹಾಲಿನ ಕೊಬ್ಬ÷ನ್ನು ಒಳಗೊಳ್ಳದೇ, ಇದ್ದು, ಫ್ರೀಜಿಂಗ್ ಸಮಯದಲ್ಲಿ ನೀರನ್ನು ಹಿಡಿದಿಟ್ಟುಕೊಂಡು, ಸೋಸ್(sauce)ರೂಪದಲ್ಲಿ ಹೊರಹೊಮ್ಮುತ್ತವೆ. 1930 ರ ಹೊತ್ತಿನಲ್ಲಿಏಡಿಚಿಜಿಣ ಎಂಬಾತ, ಜೋಳದ ಹಿಟ್ಟು ಮತ್ತುಅರಾರೋಟಿನ ಹಿಟ್ಟನ್ನು ಮಿಶ್ರಮಾಡಿ, (ಎಣ್ಣೆ-ಮೊಟ್ಟೆಯ ಸಾರ ಭಾಗ-ನಿಂಬೆರಸ-ಉಪ್ಪು ಸೇರಿಸಿ ತಯಾರಿಸುವ ತಿನಿಸನ್ನುತಯಾರಿಸುವ ಬದಲಿಗೆ) ತಯಾರಿಸುವ ತಿನಿಸು ಅತ್ಯಂತಅಗ್ಗವೆಂದು ಪ್ರಚಾರ ಪಡೆಯಿತು. ಅದರತಯಾರಿಕೆಗೆ ಮೊಟ್ಟೆ ಮತ್ತುಎಣ್ಣೆಗಿಂತಕಡಿಮೆ ಬೆಲೆಯ ವಸ್ತುಗಳನ್ನು ಬಳಸಲು ಆರಂಭವಾಯಿತು.ಆದರೆ ನೈಜವಾಗಿ ತಯಾರಿಸಿದ ತಾಜಾ ತಿನಿಸಿನಂತೆಯೇ ಕ್ರೀಮಿನಅನುಭವವನ್ನುಅದು ನೀಡಿತು. 1950 ರ ಹೊತ್ತಿಗೆ, ಈ ರಿತಿಯರೂಪಾಂತರ ಮಾಡಿದ ಪಿಷ್ಟಗಳು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದವು. ಒಮ್ಮೆ ಹೀಗೆ ಮಾಡಿದರೆ, ಮತ್ತಿನ ಕೆಲಸ ಅತ್ಯಂತ ಸುಲಭ! Starch ನ್ನು acidಹಾಕಿ ತೆಳ್ಳಗೆ ಮಾಡಿದರೆ ಬಟ್ಟೆಗಳನ್ನು ತೊಳೆಯುವಲ್ಲಿ ಬಳಕೆಯಾಗುತ್ತದೆ. Propylene oxide ಎಂಬುದರೊಂದಿಗೆ ಮಿಶ್ರಮಾಡಿದರೆಜಾರುವಅಥವಾಜಿಗುಟು ಗುಣವುಳ್ಳ ಸಲಾಡ್‌ತಯಾರಾಗುತ್ತದೆ. Starch ನ್ನು acid ನೊಂದಿಗೆ ಸೇರಿಸಿದರೆ Pie ತಿನಿಸುಗಳನ್ನು ತಯಾರಿಸಬಹುದು. Maltodextrins ಎಂಬುದರ ಬಳಕೆಯಿಂದ ತಿನಿಸುಗಳಿಗೆ ನುಣ್ಣನೆಯ creaminess ಸ್ವರೂಪಕೊಟ್ಟು, milkshake ಎಂದು ಹೆಸರಿಸಬಹುದು! ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸದೇ ಇಷ್ಟೆಲ್ಲ ಕಿತಾಪತಿಗಳನ್ನು ಮಾಡಬಹುದು! ವೈಜ್ಞಾನಿಕವಾಗಿಜನರನ್ನು ವಂಚಿಸಬಹುದು! ಐಸ್‌ಕ್ರೀಮ್‌ನಲ್ಲಿ ಬಳಕೆಯಾಗುವ guar, gym, locust, bean gum, alginate, carragreen, xanthan, gum ಇತ್ಯಾದಿಗಳನ್ನು ಕೂಡಾ ನೋಡಬಹುದು. ಕೊನೆಯದಾದ xanthan gum ಬ್ಯಾಕ್ಟೀರಿಯಾ ಸೂಕ್ಷಾö್ಮಣು ಹೊರಸೂಸಿದ ದ್ರವ.ಬ್ಯಾಕ್ಟೀರಿಯಾಗಳು ಅಂಟಿಕೊಳ್ಳುವುದಕ್ಕೆ ಅನುಕೂಲ ಆಗುವ ಹಾಗೆ ಸೂಸುವ ಅಂಟಾದದ್ರವ. ಇವುಗಳನ್ನು ಕಡಿಮೆವೆಚ್ಚದಲ್ಲಿ, ಆಹಾರವು ದೀರ್ಘಕಾಲ ಬಾಳಿಕೆ ಬರಲು ಬಳಸಲಾಗುತ್ತವೆ.
1970 ರಲ್ಲಿಕಡಿಮೆಕೊಬ್ಬುಇರುವ ಉತ್ಪನ್ನಗಳ ಬಗ್ಗೆ ಮಾರ್ಗದರ್ಶನಗಳು ಬಂದು, ಜನರೆಲ್ಲ ಅವುಗಳನ್ನು ಸೇವಿಸುವಂತೆ ಪ್ರೋತ್ಸಾಹ ನೀಡುವ ಸನ್ನಿವೇಶ ಸೃಷ್ಟಿಯಾಯಿತು. ಇಂದಿಗೂ ಕೂಡ, ಕೊಬ್ಬಿನ ಸ್ಥಾನವನ್ನು ಪಿಷ್ಟಪದಾರ್ಥಗಳು ಆಕ್ರಮಿಸಿವೆ. ಕೊಬ್ಬುಎನ್ನುವುದು ಸಮಸ್ಯೆಯ ವಿಷಯವೆಂದುಜನರು ಬಗೆದಿರುವುದರಿಂದಾಗಿ, ಅದರಆಧಾರದ ಮೇಲೆ ದೊಡ್ಡ ವ್ಯಾಪಾರ ನಡೆಯುತ್ತಿದೆ! ಸರಿಯಾಗಿ ಬಳಕೆ ಮಾಡಿದರೆ ಹೆಸರಿಸಿದಂತಹ ಗಮ್‌ಗಳು, ಹೆಚ್ಚು ನುಣುಪು ಮತ್ತು ಬ್ನಗ್ಧತೆಯನ್ನು ನೀಡುತ್ತದೆ. ಏಕೆಂದರೆ ಬಾಯಿಗೆ ಹಾಕಿದತಕ್ಷಣಅದುಎಣ್ಣೆಯ (oily)ಅನುಭವ ನೀಡುತ್ತದೆ. ಪಿಷ್ಟ ಮತ್ತುಗಮ್- ಎರಡುಕೂಡಾ, ಕೊಬ್ಬು ಇಲ್ಲದಕಾರಣ ಆರೋಗ್ಯ ಕಾಪಾಡುವುದೆಂಬ ಭ್ರಮೆಯನ್ನು ಬಳಕೆದಾರನಲ್ಲಿ ಹುಟ್ಟಿಸುವುದರಜೊತೆಗೆ, ತಯಾರಕರಿಗೆಉತ್ಪಾದನಾ ವೆಚ್ಚವನ್ನುಕೂಡಾಕಡಿಮೆಮಾಡುವುದು. ಈ ತರದ ಉತ್ಪನ್ನಗಳು, ಕೊಬ್ಬು ಕಡಿಮೆ ಇದೆಯೆಂದು ಹೇಳುತ್ತಲೇ, ತೂಕ ಹೆಚ್ಚಿಸುವುದರ ಜೊತೆಗೆ, ಆಹಾರದಿಂದ ಉಂಟಾಗುವ ಇತರ ಕಾಯಿಲೆಗಳನ್ನು ಹೆಚ್ಚಿಸುತ್ತವೆ. ನಿಜ ಹೇಳಬೇಕೆಂದರೆ, ಇವುಗಳ ಬಳಕೆ ಆದ ನಂತರ, ಬೊಜ್ಜಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಪರಿಮಳ (flavour) ಯುಕ್ತ ಆಹಾರಗಳು ಬಾಯಿಗೆ ಹಾಕಿದಾಗಕೊಬ್ಬಿನಲ್ಲಿಕರಗುವಂತದ್ದುಆಗಿರುತ್ತವೆ. ಬೆಣ್ಣೆಯ ಬ್ರೆಡ್ಡನ್ನು, ಎಣ್ಣೆಯು ಸಲಾಡ್‌ನ್ನುರುಚಿಕರವಾಗಿಸುತ್ತದೆ. ಇದರಜೊತೆಗೆಗಟ್ಟಿಯಾಗಿರುವಕೊಬ್ಬುಆಹಾರಕ್ಕೆಒಂದು ವಿನ್ಯಾಸವನ್ನು ನೀಡುತ್ತದೆ. ಬೆಣ್ಣೆಇದಕ್ಕೆಉತ್ತಮಉದಾಹರಣೆ. ಅಷ್ಟೇ ಅಲ್ಲ, ಬ್ಯಾಕ್ಟೀರಿಯಾಗಳು ಹೊಗುವುದಕ್ಕೆಅಸಾಧ್ಯಆಗಿರುವುದರಿಂದ, ಬೆಣ್ಣೆಗೆ ಫ್ರೀಜರ್‌ನಅಗತ್ಯವಿಲ್ಲ. ಅದರಲ್ಲಿಕೊಬ್ಬಿನಲ್ಲಿಕರಗುವಎಲ್ಲಾ ವಿಟಾಮಿನ್ ಹಾಗೂ ಅಗತ್ಯವಿರುವ ಮೇದೋ ಅಮ್ಲಗಳು ಇರುತ್ತವೆ. ಹಿಂದಿನಿಂದಲೂ, ಹಾಲನ್ನು ಹಾಳಾಗದಂತೆ ಇಡುವ ವಿಧಾನ ಮಜ್ಜಿಗೆಯತಯಾರಿಆಗಿತ್ತು. ಬೆಣ್ಣೆಕೂಡಾ ಅಷ್ಟೇ. ಬಹಳ ಸಮಯ ಹಾಳಾಗದಂತೆ ಇಡಬಹುದು. ಆದರೆ ಬೆಣ್ಣೆ ವೆಚ್ಚದ ವಿಷಯ. ಅದೂಅಲ್ಲದೆ, ಹಾಲಿಗಾಗಿ ಪ್ರಾಣಿಗಳನ್ನು ಸಾಕಿ, ಹಾಲು ಕರೆಯುವ ಕೆಲಸವೂ ಇದೆ. ಸಸ್ಯಜನ್ಯಕೊಬ್ಬುಕಡಿಮೆ ವೆಚ್ಚದ್ದು, ಆದರೆದ್ರವರೂಪದ್ದು. ಆಹಾರಕ್ಕೆ ವಿನ್ಯಾಸಕೊಡುವಲ್ಲಿಅದರ ಪಾತ್ರಕಡಿಮೆ. ಇದಕ್ಕಾಗಿ, 1864ರಲ್ಲಿ, ಬೆಣ್ಣೆಯ ಬದಲಿಗೆ, ಕೃತಕ-ಕಡಿಮೆವೆಚ್ಚದ ವಸ್ತುವಿನ ಅನ್ವೇಷಣೆಆರಂಭವಾಯಿತು.
ಅದೇ ವರ್ಷ, ನೆಪೋಲಿಯನ್ನನ ಅಳಿಯ, ಬೆಣ್ಣೆಯೆಂಬ ಈ ಕೊಬ್ಬಿನ ರಸಾಯನಶಾಸ್ತ್ರದರಹಸ್ಯ ಬಗೆದವರಿಗೆ ಬಹುಮಾನಘೋಷಣೆ ಮಾಡಿದ. ಪ್ರೆಂಚ್ ರಸಾಯನಶಾಸ್ತ್ರಜ್ಞಾ ಹಾಗೂ ಔಷಧಶಾಸ್ತ್ರಜ್ಞಾ ಹಿಪ್ಪೋಲೈಟ್ ಮೆಜೆಮೌರಿಸ್‌ಎಂಬಾತ ಆ ಪಾರಿತೋಷಕವನ್ನು ಪಡೆದ. ಬೇಕರಿತಂತ್ರಜ್ಞಾನದ ಸಾಧನೆಗೆಆತ ಈಗಾಗಲೇ ಗೌರವಪ್ರಶಸ್ತಿ ಪಡೆದಿದ್ದ. ಬೆಣ್ಣೆಗೆ ಬದಲಿ ವಸ್ತುವಿನ ಸಂಶೋಧನೆ ಹಾಗೂ ವಿವರಣೆಗಳು ಆತ ಮಾಡಿದ್ದು, ಬಹುಶಃ ಅದು ಮೊದಲ Ultra-process (ಅತಿ ಸಂಸ್ಕರಣೆ).
ಮೆಚೆಮೌರಿಸ್‌ಅತಿಕಡಿಮೆ ವೆಚ್ಚದ, ದನಗಳ ಕಿಡ್ನಿಗಳ ಸುತ್ತ ಸಂಗ್ರಹವಾದಕೊಬ್ಬನ್ನು ಸಂಗ್ರಹಿಸಿದ. ಅದನ್ನು ನೀರಿನೊಂದಿಗೆ ಬೆರೆಸಿ ಬಿಸಿಮಾಡಿದ. ಕುರಿಗಳ ಜಠರದಿಂದತೆಗೆದ ಕೆಲವು ಕಿಣ್ವಗಳೊಂದಿಗೆ ಅದನ್ನು ಮಿಶ್ರಮಾಡಿದ. ಕೊಬ್ಬನ್ನು ಮುದ್ದೆಯಾಗಿಡುವ ಕೋಶಗಳನ್ನು ಪ್ರತ್ಯೇಕಿಸಲುಅದು ಸಹಕಾರಿ. ಆಮೇಲೆ ಅದನ್ನು ಸೋಸಿ, ಆ್ಯಸಿಡ್ ಹಾಕಿ ಬ್ಲೀಚ್ ಮಾಡಿದ. ನಂತರ ನೀರಿನಿಂದ ತೊಳೆದು ಬಿಸಿಮಾಡಿದ. ಕೊನೆಗೆ ಬೈಕಾರ್ಬೊನೇಟ್, ಹಾಲಿನ ಪ್ರೊಟೀನ್, ದನಗಳ ಕೆಚ್ಚಲಿನ ಅಂಗಾಂಶ ಹಾಗೂ ಅಚಿಯೋಟೆ(ಉರುಕು) ಎಂಬ ಮರದ ಹಳದಿಬಣ್ಣದ ವಸ್ತು (ಆಹಾರಗಳಿಗೆ ಬಣ್ಣಕೊಡಲು ಬಳಸಲಾಗುತ್ತದೆ) -ಎಲ್ಲವನ್ನೂ ಸೇರಿಸಿದ ಒಂದನ್ನು ತಯಾರಿಸಿದ. ಇದು ಬೆಣ್ಣೆಯನ್ನೇ ಹೋಲುವ ಒಂದು ರ‍್ಯಾಯವಾಗಿ ಬಂತು. ಇದಕ್ಕೆಆತ "oleomargarine” ಎಂಬ ಹೆಸರನ್ನುಕೊಟ್ಟ. ಕೈಗಾರಿಕಾರಸಾಯನಶಾಸ್ತçದ ಬೆಳವಣಿಗೆಯಿಂದ ನಂತರ19ನೆಯ ಶತಮಾನದಲ್ಲಿ, ಸಸ್ಯಜನ್ಯ ತೈಲಗಳಿಂದ ಮಾರ್ಗಾರಿನ್‌ತಯಾರಿಕೆಯ ಹೊಸ ಬಾಗಿಲು ತೆರೆಯಿತು. 20ನೆಯ ಶತಮಾನದಲ್ಲಿ, ಸಸ್ಯಜನ್ಯ ತೈಲಗಳನ್ನು ಗಟ್ಟಿಯಾಗಿಯೇ ಉಳಿಸುವ "ಹೈಡ್ರೋಜನೇಷನ್" ಎಂಬ ಹೊಸ ವಿಧಾನ ಬಂತು. ತೈಲವನ್ನುಜಲಜನಕದ ಉಪಸ್ಥಿತಿಯಲ್ಲಿ, ಅಧಿಕಒತ್ತಡದಲ್ಲಿ ಬಿಸಿಮಾಡಿದರೆ, ತೈಲದರಚನೆ ಮತ್ತುಕರಗುವ ಗುಣಗಳಲ್ಲಿ ಬದಲಾವಣೆಗಳಾಗುತ್ತವೆ. ತೈಲವನ್ನು ಸಂರ್ಪೂಣವಾಗಿ ಹೈಡ್ರೋಜನೇಟ್ ಮಾಡಿದರೆ ಮಂಜುಗಡ್ಡೆಯಷ್ಟುಗಟ್ಟಿಯಾದಕೊಬ್ಬುತಯಾರಾಗುತ್ತದೆ. ಆದರೆ, ಸ್ವಲ್ಪ ಅಂಶ ಮಾತ್ರ ಹೈಡ್ರೋಜನೇಟ್ ಮಾಡಿದರೆ, ಬೇಕಾದಂತೆಕರಗುವಗುಣವನ್ನು ಪಡೆಯಬಹುದು. ರೂಮಿನಉಷ್ಣತೆಯಲ್ಲಿಗಟ್ಟಿಯಾಗಿಯೇ ಉಳಿಸಬಹುದು (ಫ್ರೀಜರ್‌ಅಗತ್ಯವಿಲ್ಲದೇ). ಅದರಜೊತೆಗೆಅದರಲ್ಲಿನ "ಟ್ರಾನ್ಸ್" ಕೊಬ್ಬು ಹೃದಯದ ಕಾಯಿಲೆಗಳನ್ನು ತರಬಹುದು!
ನಂತರದ ಹಂತ, ಅಗ್ಗದತೈಲವನ್ನು ಪಡೆಯುವಂತದ್ದು. ಹತ್ತಿಯ ಬೀಜಗಳು ಹತ್ತಿಉದ್ಯಮದಉಪಯೋಗವಿಲ್ಲದ ಪಳೆಯುಳಿಕೆಗಳು. 1860 ರ ವರೆಗೆಅದನ್ನುತ್ಯಾಜ್ಯವೆಂದೇ ಪರಿಗಣಿಸಲಾಗಿತ್ತು. 1907 ರಲ್ಲಿ ಪ್ರೊಕ್ಟರ್ ಮತ್ತುಗ್ಯಾಂಬಲ್ ಎಂಬ ಕಂಪೆನಿಯು, ಹತ್ತಿಬೀಜದಎಣ್ಣೆಯನ್ನು ಸೇವಿಸಬಹುದಾದಕೊಬ್ಬನ್ನಾಗಿ ಪರಿವರ್ತಿಸುವುದು ಹೇಗೆಂಬ ಯೋಚನೆಗೆ ಒಳಗಾಯಿತು. ಅದಕ್ಕೆಎದುರಾದಕಷ್ಟವೆಂದರೆ ಆ ಎಣ್ಣೆಯಲ್ಲಿ ಗಾಸಿಪಾಲ್ (Gossypol) ಎಂಬ ವಿಷಪದಾರ್ಥಇರುವಂಥದ್ದು. ಸಸ್ಯಗಳನ್ನು ಅದು ಕೀಟಗಳಿಂದ ರಕ್ಷಿಸುವುದಾದರೂ, ಪುರುಷರಲ್ಲಿ ವಂಶಾಭಿವೃದ್ಧಿ ಸಾಮರ್ಥ್ಯವನ್ನು ಕುಂಠಿತಗೊಳಿಸುವಂಥದ್ದು. ತೈಲ ಶುದ್ಧಿಕರಣದ ವಿಧಾನಗಳು ಬಳಕೆಗೆ ಬಂದವು. RBD ಅಂದರೆ Refinining (ಶುದ್ಧೀಕರಣ), bleached (ಬಣ್ಣತೆಗೆಯುವುದು) ಮತ್ತು deodourised (ಅದರ ವಾಸನೆಯನ್ನು ನಿವಾರಿಸುವುದು. ಉದಾಹರಣೆಗೆ palm oil (ಪಾಮಾಯಿಲ್). ಆಕರ್ಷಕನಿಸರ್ಗಸಹಜ ಬಣ್ಣ ಮತ್ತು ಪರಿಮಳ, ಟೋಕೋಟ್ರೈನಾಲ್ ಎಂಬ ಕೋಶಗಳ ಕೊಳೆತೆಗೆಯುವ ಔಷಧೀಯಜಾಡಮಾಲಿ ಅಂಶಗಳನ್ನು ಒಳಗೊಂಡಿರುವುದು. ಆದರೆಆಹಾರ ಸಂಸ್ಕರಣೆ ಮಾಡುವವರಿಗೆ ಈ ಪರಿಮಳ, ಬಣ್ಣಗಳು ಸಮಸ್ಯೆ! Ultra process ಮಾಡಿ ಮಾರಾಟಮಾಡುವವರಿಗೆ, ಯಾವುದೇಆಹಾರ ಉತ್ಪನ್ನಗಳಿಗೆ ಬಳಸುವಂತೆ ಬಣ್ಣರಹಿತ, ಪರಿಮಳವಿಲ್ಲದ ರೀತಿಯಲ್ಲಿಅದುಇರಬೇಕು! ಆದಕಾರಣ ಹೆಚ್ಚು ಬಿಸಿಮಾಡಿ ಅದನ್ನುರಿಫೈನ್ ಮಾಡಿ, ಗಮ್ ಮತ್ತುಅಂಟನ್ನುತೆಗೆಯಲು ಫಾಸ್ಫಾರಿಕ್ ಆ್ಯಸಿಡ್ ಬಳಸಿ, ಕಾಸ್ಟಿಕ್‌ಸೋಡಾ ಬಳಸಿ ನ್ಯೂಟ್ರಲ್ ಮಾಡಿ, ಬೆಂಟೋನೈಟ್‌ಕ್ಲೇ ಬಳಸಿ ಬ್ಲೀಚ್ ಮಾಡಿಅಧಿಕಒತ್ತಡ ಆವಿ ಬಳಸಿ ವಾಸನೆರಹಿತ ಮಾಡುವುದುಇದರ ಪ್ರಕ್ರಿಯೆ. ಸರ‍್ಯಕಾಂತಿಎಣ್ಣೆ, ಸೋಯಾಬೀಜದಎಣ್ಣೆ, ರೇಪ್‌ಸೀಡ್ ಆಯಿಲ್‌ತಯಾರಿಕೆಗೂಇದೇ ವಿಧಾನ.
ಪ್ರೊಕ್ಟರ್ ಮತ್ತುಗ್ಯಾಂಬಲ್ ಕಂಪೆನಿ ಸಂಸ್ಕರಣಗೊಳಿಸಿದ, ವಿಷರಹಿತವೆಂದು ಘೋಷಿಸಿದ ಈ ತೈಲಗಳ ಬಗ್ಗೆ ಪ್ರಚಾರ ಭರದಿಂದ ನಡೆಯಿತು. 1920ರ ಹೊತ್ತಿಗೆ, ಇವುಗಳ ಬಳಕೆ ವಿಸ್ತಾರವಾಗಿ, ವಿಶ್ವಮಾರುಕಟ್ಟೆಯ90% ಭಾಗವನ್ನು ಆಕ್ರಮಿಸಿಕೊಂಡಿತು. ಎಲ್ಲಾ ಕೊಬ್ಬುಗಳನ್ನು (ಪಾಮ್ ಸ್ಟಿಯರೇಟ್, ಕೊಬ್ಬರಿಎಣ್ಣೆ) RBD ವಿಧಾನದಲ್ಲಿ ಸಂಸ್ಕರಿಸಿ, ಬಿಸ್ಕಿಟ್‌ಗಳಿಂದ ತೊಡಗಿಐಸ್‌ಕ್ರೀಮ್‌ತನಕ, ತಂತ್ರಜ್ಞಾನದ ಸಾಧ್ಯತೆಗಳನ್ನು ಉದ್ಯಮವು ಬಳಸಿಕೊಂಡಿತು. ಅತಿ ಸಂಸ್ಕರಿಸಿದ ಆಹಾರದತಯಾರಕರೆಲ್ಲರಿಗೂಇದು ಅನುಕೂಲ ಮಾಡಿಕೊಟ್ಟಿತು; ಐಸ್‌ಕ್ರೀಮ್‌ತಯಾರಕರಿಗೆ ಮಾತ್ರವಲ್ಲ. ಯಾವುದುಕಡಿಮೆ ಬೆಲೆಗೆ ಸಿಗುವುದೋ ಅದು ಅವುಗಳ ಆದ್ಯತೆ! ಸಿದ್ಧ ಮಾದರಿಯ ಲೇಬಲ್‌ಗಳನ್ನು ಎಲ್ಲಾ ಉತ್ಪನ್ನಗಳ ಪ್ಯಾಕೇಜುಗಳ ಮೇಲೆ ಮುದ್ರಿಸಿ, ಲೇಬಲ್ ತಯಾರಿಕೆಯ ವೆಚ್ಚವನ್ನುಕೂಡಾಇದರತಯಾರಿಕಾ ಕಂಪೆನಿಗಳು ಉಳಿಕೆ ಮಾಡಿದವು! ಆದರೆ ನೆನಪಿರಲಿ. ಈ ಮೇಲೆ ಹೇಳಿದ ಯಾವುದೇತೈಲ ಅಥವಾಕೊಬ್ಬು, ಯಾವುದೇ ಪ್ಯಾಕ್‌ನ ಲೇಬಲ್‌ಗಳಲ್ಲಿ ಕಂಡುಬಂದರೆ ಆ ಆಹಾರವು ultra process (ಅತಿ ಸಂಸ್ಕರಿಸಿದ, ಶುಷ್ಕ,ಸತ್ವಹೀನ). ಆದರೆಅವೆಲ್ಲದರ ಬದಲಾಗುತ್ತಿರುವ ಮಾರುಕಟ್ಟೆ ದರಗಳ ನಡುವೆ ಇನ್ನೂ ಕೆಲವು ಅಸಹಜವಾದ ದ್ರವ್ಯಗಳನ್ನು ಕೂಡಾ ಅವುಗಳು ಒಳಗೊಳ್ಳಬಹುದು! ಯುಕ್ರೇನ್‌ನಲ್ಲಿಯುದ್ಧಆರಂಭವಾದಾಗ, ಸರ‍್ಯಕಾಂತಿಎಣ್ಣೆಯ ಬೆಲೆ ಗಗನಕ್ಕೇರಿತು. ಇಂಡೋನೇಷಿಯವುತನ್ನ ದಿನಬಳಕೆಯ ಆಹಾರ ವಸ್ತುಗಳ ಬೆಲೆಯೇರಿಕೆಯನ್ನುತಡೆಯಲು, ಪಾಮ್‌ಆಯಿಲ್‌ರಫ್ತು ಮಾಡುವುದರ ಮೇಲೆ ನಿರ್ಬಂಧ ಹೇರಿತು. ಇಂತಹ ಸನ್ನೀವೇಶಗಳಿಂದಾಗಿ, ಸಸ್ಯಜನ್ಯ ತೈಲಗಳ ಬೆಲೆ, ಬೆಣ್ಣೆಯ ಬೆಲೆಯಷ್ಟೇ ಆಗುವ ದಿನ ಕೂಡಾದೂರವಿಲ್ಲ. "ಈಗಾಗಲೇ ದನಗಳ ಕಿಡ್ನಿಯ ಸುತ್ತಲಿನ "ಕ್ರೀಂ" ವಿನ್ಯಾಸ ಹೊಂದಿದ ಹಾಗೂ ಮಾಂಸಗಳ ನಡುವಿನ ಕೊಬ್ಬು ಮಾತ್ರವಲ್ಲದೆ, ಕೋಳಿಗಳ ಶರೀರದಕೊಬ್ಬುಕೂಡಾಆಹಾರ ಉತ್ಪನ್ನಗಳನ್ನು ಪ್ರವೇಶಿಸಿದೆ. ಆದುದರಿಂದ ಐಸ್‌ಕ್ರೀಮುಗಳಲ್ಲಿ ಕೋಳಿಗಳ ಕೊಬ್ಬನ್ನು ಸದ್ಯದಲ್ಲೇ ಊಹಿಸಿಕೊಳ್ಳಿ", ಎಂದು, ಆಹಾರೋದ್ಯಮವನ್ನು ಆಳವಾಗಿ ಬಲ್ಲ, ಪೌಲ್‌ಹಾರ್ಟ್ಎಂಬಾತ ವಿವರಿಸಿತ್ತಾನೆ. ಆತ ಶಾಲಾ ನಂತರದ ದಿನಗಳಿಂದಲೇ ಆಹಾರೋದ್ಯಮದದೈತ್ಯಯುನಿಲೆವೆರ್‌ಕಂಪೆನಿಯಲ್ಲಿಕೆಲಸಕ್ಕೆ ಸೇರಿ, ಅದರಲ್ಲಿ20 ವರ್ಷಉದ್ಯೋಗ ಮಾಡಿದ. ಆರಂಭದಲ್ಲಿಜೀವರಸಾಯನಿಕತಜ್ಞನಾಗಿ, ನಂತರಆಹಾರೋತ್ಪಾದನಾ ವ್ಯವಸ್ಥೆಯ ವಿನ್ಯಾಸಕಾರನಾಗಿ, ಆತ ಸುಳ್ಳು ಹೇಳಿರಲಾರ. ಅಲ್ಲವೇ?
ವೈದ್ಯಡಾ|| ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಬಿ.ಎ.ಎಂ.ಎಸ್. ಎಂ.ಎಸ್.(ಆಯು)
ಆಯುರ್ವೇದತಜ್ಞವೈದ್ಯ ಹಾಗೂ ಆಡಳಿತ ನಿರ್ದೇಶಕ,
ಪ್ರಸಾದಿನೀ ಆಯುರ್ನೀಕೇತನಆಯುರ್ವೇದಆಸ್ಪತ್ರೆ,
ಪಾದೆ,ನರಿಮೊಗರು, ಪುತ್ತೂರು.ದ.ಕ.
mob: 9740545979