ಭಗವಂತನ ಮೇಲಿನ ನಂಬಿಕೆಯೇ ನಮ್ಮನ್ನು ರಕ್ಷಿಸುತ್ತದೆ; ಈಶಪ್ರಿಯ ತೀರ್ಥ ಶ್ರೀಪಾದರು
ಸುಬ್ರಹ್ಮಣ್ಯ,: ಭಗವಂತ ಯಾವಾಗಲೂ ನಮ್ಮನ್ನು ಕಾಪಡುತ್ತಾನೆ ಎಂಬ ನಂಬಿಕೆ, ವಿಶ್ವಾಸ ಯಾರಲ್ಲಿ ಇರುತ್ತದೋ, ಆತನನ್ನು ಭಗವಂತ ಖಂಡಿತ ರಕ್ಷಿಸುತ್ತಾನೆ ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು.
ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತೀ ಮಹೋತ್ಸವದ ಅಂಗವಾಗಿ ಶ್ರೀಮದಾನಂದತೀರ್ಥ ತತ್ವದರ್ಶಿ ನೀ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುಧವಾರ ಮಠದ ಶ್ರೀ ಅನಿರುದ್ಧತೀರ್ಥ ವೇದಿಕೆಯಲ್ಲಿ ನಡೆದ ಅನುಗ್ರಹ ಸಂದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭಗವಂತ ಎಲ್ಲೆಯೂ ಇರುತ್ತಾನೆ. ಭಕ್ತನು ಭಕ್ತಿಯಿಂದ, ಶ್ರದ್ಧೆಯ ಕೂಗಿಗೆ ಭಗವಂತ ಅವತರಿಸುತ್ತಾನೆ ಎಂದ ಅವರು ಶ್ರದ್ಧೆಯಿಂದ ಮಾಡುವ ಕೆಲಸ ಯಶಸ್ಸನ್ನು ತಂದುಕೊಡುತ್ತದೆ ಎಂದರು.
ಚಿತ್ರಾಪುರದ ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡುತ್ತಾ, ನಾನೇ ಎಲ್ಲಾ ಎಂಬುದಕ್ಕಿAತ ಮೂರ್ಖತನ ಇನ್ನೊಂದಿಲ್ಲ. ಆದರೆ ದೇವರು ನಮ್ಮಿಂದ ಮಾಡಿಸಿದ್ದಾನೆ ಎಂಬ ಚಿಂತನೆಯನ್ನಿಂಟು ಕೆಲಸ ಮಾಡಿದಲ್ಲಿ ಭಗವಂತ ಯಾವುದೋ ರೂಪದಲ್ಲಿ ಬಂದು ನಮ್ಮನ್ನು ರಕ್ಷಿಸುತ್ತಾನೆ ಎಂದರು.
ಸುಬ್ರಹ್ಮಣ್ಯ ಮಠಾದೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ಭಗವಂತನ ಆರಾಧನೆಗೆ ಪ್ರತಿಮೆ ಒಂದು ಮಾಧ್ಯಮವೇ ಹೊರತು, ಪ್ರತಿಮೆ ಭಗವಂತ ಅಲ್ಲ ಎಂಬುದನ್ನು ಆಚಾರ್ಯರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಪ್ರತಿಮೆ ಮತ್ತು ಭಗವಂತ ಬೇರೆ ಬೇರೆ ಎನ್ನುವ ಕಲ್ಪನೆಯಿಂದ ಭಗವಂತನ ಆರಾಧನೆ ಮಾಡಬೇಕು. ಆರಾಧನೆಯಲ್ಲಿ ಆಚಾರ್ಯರ ಕೊಡುಗೆ ಅನನ್ಯ ಎಂದು ನುಡಿದರು.
ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಮಹಾಮಹೋಪಾಧ್ಯಾಯ ಎ.ಹರಿದಾಸ ಭಟ್ ಉಪನ್ಯಾಸ ನೀಡುತ್ತಾ, ಜೀವನ ಸಾರ್ಥಕವಾಗಬೇಕಾದರೆ ಏಕಾಂಗಿತನ ಬೇಕು. ಈ ಕಲ್ಪನೆಯಲ್ಲಿ ಸನ್ಯಾಸಕ್ಕೆ ಪ್ರಾಶಸ್ತö್ಯ ಬಂದಿದೆ. ದೇವರು ಮೋಕ್ಷವನ್ನು ಕೊಡುವುದಾದರೆ ಸನ್ಯಾಸಿಗಳಿಗೆ ಮಾತ್ರ. ದೇವರನ್ನು ಒಲಿಸಲು ಸನ್ಯಾಸವೇ ಅನಿವಾರ್ಯವಲ್ಲ, ನಿಷ್ಠಾವಂತ ಸ್ವಧರ್ಮಚರಣೆಯಲ್ಲಿ ಆಸಕ್ತನಾದ ಒಬ್ಬ ಯತಿಗೆ ಏನು ದೇವರ ಸಾನಿಧ್ಯ ಸಿಗಬಹುದೋ, ಒಬ್ಬ ಪ್ರಾಮಾಣಿಕ ಗೃಹಸ್ತನಿಗೆ ಅದೇ ರೀತಿಯ ಭಗವಂತನ ಅಪರೋಕ್ಷ ಸಿದ್ಧಿ ಆಗಬಲ್ಲದು. ಭಗವಂತನಿಗೆ ಪ್ರಿಯವಾದದ ಭಕ್ತ ಎಂದರೇ ಬಾಲ್ಯದಿಂದಲೇ ಸರ್ವಸಂಗ ಪರಿತ್ಯಾಗವನ್ನು ಮಾಡಿ ದೇವರನ್ನು ಆರಾಽಸುವ ವ್ಯಕ್ತಿ ಎಂದರು. ವಿದ್ವಾನ್ ಕಿರಣ್ ಆಚಾರ್ಯ ಸ್ವಾಗತಿಸಿದರು.
ಪ್ರಶಸ್ತಿ ಪ್ರಧಾನ:
ಕಾರ್ಯಕ್ರಮದಲ್ಲಿ ಮಠದ ನೌಕರರಾದ ಚಿನ್ನಪ್ಪ ಗೌಡ ಅಗೋಳಿಕಜೆ ಸುಬ್ರಹ್ಮಣ್ಯ ಹಾಗೂ ನಾಗಮ್ಮ ಅಗೋಳಿಕಜೆ ಸುಬ್ರಹ್ಮಣ್ಯ ಅವರಿಗೆ ನರಸಿಂಹಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಪ್ರಶಸ್ತಿ ನೀಡಿ ಗೌರವಿಸಿ, ಆಶೀರ್ವದಿಸಿದರು.
- Thursday
- November 21st, 2024