Ad Widget

ಅರಂತೋಡು ಅಡ್ತಲೆ ರಸ್ತೆಯಲ್ಲಿ ಪ್ರತಿನಿತ್ಯ ಬೀಳುತ್ತಿರುವ ವಿದ್ಯುತ್ ಕಂಬಗಳು – ಹಲವಾರು ದಿನಗಳಿಂದ ಕತ್ತಲಲ್ಲೇ ಕಾಲ ಕಳೆಯುತ್ತಿರುವ ಜನತೆ – ಶಾಸಕರ ಮಾತಿಗೂ ಕ್ಯಾರೇ ಮಾಡದ ಅಧಿಕಾರಿಗಳ ವಿರುದ್ಧ ದೂರು

ಅರಂತೋಡಿನಲ್ಲಿ ನಡೆದ ವಿದ್ಯುತ್ ಅದಾಲತ್ ನಲ್ಲಿ ಶಾಸಕರ ಸಮ್ಮುಖದಲ್ಲಿ, ಅರಂತೋಡು ತೊಡಿಕಾನ ಅವಳಿ ಗ್ರಾಮದ ಜನಪ್ರತಿನಿದಿನಗಳು, ವಿದ್ಯುತ್ ಪಲಾನುಭವಿಗಳು, ಮೆಸ್ಕಾಂ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಸೇರಿ ಸಭೆ ನಡೆಸಿ, ಮಳೆಗಾಲ ಪ್ರಾರಂಭ ಆಗುವ ಮೊದಲು, ವಿದ್ಯುತ್ ಲೈನ್ ಗೆ ಹತ್ತಿರ ಇರುವ, ಬಳ್ಳಿ ಹಾಗೂ ಮರದ ಕೊಂಬೆಗಳನ್ನು ಕಡಿದು ಸ್ವಚ್ಛ ಗೊಳಿಸಬೇಕು. ಸಣ್ಣ ಪುಟ್ಟ ತಾಂತ್ರಿಕ ತೊಂದರೆ ಗಳನ್ನು ಸರಿ ಪಡಿಸಿಸಬೇಕು ಎಂದು ಒತ್ತಾಯಿಸಲಾಗಿತ್ತು.  ಬೀಳುವ ಸ್ಥಿತಿಯಲ್ಲಿರುವ ಮರದ ಕೊಂಬೆಗಳನ್ನು ತೆರವುಗೊಳಿಸಲು ಸ್ಥಳೀಯರು ಸಹಕಾರ ನೀಡುತ್ತಾರೆ ಎಂದು ತಿಳಿಸಲಾಗಿತ್ತು.  ಇದೆಲ್ಲವನ್ನೂ ಮರೆತಿರುವ ಅಧಿಕಾರಿಗಳಿಂದಾಗಿ  ಪ್ರತಿ  ವರ್ಷವೂ ಮಳೆಗಾಲ ಪ್ರಾರಂಭ ಆಗಿ,ಕತ್ತಲಲ್ಲೇ ಕಾಲ ಕಳೆಯುವಂತೆ ಇಲಾಖೆ ಮಾಡುತ್ತಿದೆ. ಮರಗಳು ಬಿದ್ದು ಕಂಬಗಳು ತುಂಡಾಗುವ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು  ಜನ ಆಗ್ರಹಿಸಿದ್ದಾರೆ.

ಜೆಇ ವಿರುದ್ಧ ಮೇಲಾಧಿಕಾತಿಗಳಿಗೆ ದೂರು :  ಗ್ರಾಹಕರ ಜೊತೆ ಉತ್ತಮ ಭಾಂದವ್ಯ ಇಟ್ಟುಕೊಂಡಿರುವುದಿಲ್ಲ ಹಾಗೂ ಅಸಭ್ಯ ವರ್ತನೆ ಆಗುತ್ತಿದೆ ಎಂದು ಅರಂತೋಡು ಕಿರಿಯ ಇಂಜಿನಿಯರ್ ವಿರುದ್ಧ ಜನಪ್ರತಿನಿಧಿಗಳು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.  ಶಾಸಕರು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರೂ ಕ್ಯಾರೇ ಮಾಡದ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂಬ ಕೂಗು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳಿಂದ ಕೇಳಿಬಂದಿದೆ.

ಮೆಸ್ಕಾಂ ಇಲಾಖೆ ಲೈನ್ ಕಡೆಯದೆ, ಇರುವುದನ್ನು ಮನಗಂದು ಕತ್ತಲೆಯಿಂದ ಪಾರಾಗಲು  ಮೇ.26 ರಂದು ವಿದ್ಯುತ್ ಫಲನುಭವಿಗಳು, ಹಾಗೂ ಊರಿನ ಸಂಘದ ಸಂಸ್ಥೆಗಳು ಸೇರಿಕೊಂಡು ಆರಂತೋಡಿನಿಂದ ಅಡ್ತಲೆ ತನಕ ಲೈನ್ ಕಡಿಯಲು ತೀರ್ಮಾನಿಸಿದ್ದಾರೆ. ಇನ್ನಾದರೂ  ಮೆಸ್ಕಾಂ ಇಲಾಖೆ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ  ಕಾದು ನೊಡಬೇಕಿದೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!