ಸುಳ್ಯ : ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೆರಾಜೆ ಎಂಬಲ್ಲಿನ ಶೇಷಮ್ಮ ಎಂಬ ಹಿರಿಯ ವೃದ್ದೆಯು ತಹಶೀಲ್ದಾರ್ ಅವರಿಗೆ ಮನವಿ ಮಾಡಿ ತನ್ನ ಮಗ ಮತ್ತು ಸೊಸೆ ಮನೆಯಿಂದ ಹೊರಹಾಕಿದ್ದು ನನ್ನನ್ನು ಮನೆ ಸೇರಿಸಬೇಕು ಎಂದು ಕೇಳಿಕೊಂಡ ಮೇರೆಗೆ ಅಧಿಕಾರಿ ವರ್ಗವು ಇಂದು ಅಜ್ಜಿಯ ಮನೆಗೆ ತೆರಳಿ ಮಕ್ಕಳು ಮತ್ತು ಸೊಸೆಯನ್ನು ಮನವೊಲಿಸಿ ಮನೆಗೆ ಸೇರಿಸಿದ ಘಟನೆ ಮೇ 21ರಂದು ನಡೆದಿದೆ.
ಘಟನೆಯ ವಿವರ.
ಮಂಡೆಕೋಲು ಗ್ರಾಮದ ಪೆರಾಜೆ ಎಂಬಲ್ಲಿನ ಶೇಷಮ್ಮ ಎಂಬುವವರ ಪತಿ ಹಲವಾರು ವರ್ಪಗಳ ಹಿಂದೆ ನಿಧನರಾಗಿದ್ದು, ಆ ಬಳಿಕ ಹೆಣ್ಣು ಮಕ್ಕಳಿಗೆ ಮತ್ತು ತಮ್ಮ ಏಕೈಕ ಪುತ್ರನಿಗೂ ಮದುವೆಯನ್ನು ಮಾಡಿಸಿ ತುಂಬಿದ ಕುಟುಂಬವಾಗಿತ್ತು. ಇದೀಗ ಮಗ ಸೊಸೆಯ ವಿರುದ್ದ ವೃದ್ದೆ ಮತ್ತು ವೃದ್ದೆಯ ವಿರುದ್ದವಾಗಿ ಮಗ ಸೊಸೆ ತಿರುಗಿ ಬಿದ್ದು ಕಾರಣ ಮಗಳ ಮನೆ ಸೇರಿದ್ದರು. ಇದರಿಂದ ಬೇಸರಗೊಂಡ ವೃದ್ಧೆ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದರು. ಈ ಬಗ್ಗೆ ತಾಲೂಕು ಮ್ಯಾಜಿಸ್ಟ್ರೇಟ್ ಜಿ ಮಂಜುನಾಥ್ ಎರಡು ಕಡೆಯವರಿಗೂ ಬುದ್ದಿವಾದ ಮತ್ತು ಮಾನವೀಯತೆಯ ಪಾಠ ಹೇಳಿ ವೃದ್ದೆಯನ್ನು ಮನೆ ಸೇರಿಸಿದ್ದಾರೆ .
ಹಿರಿಯ ಜೀವಗಳನ್ನು ತನ್ನದೇ ಮಗ ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿದ ಹಿನ್ನಲೆಯಲ್ಲಿ
ಘಟನೆಯ ಗಂಭೀರತೆ ಅರಿತ ತಾಲೂಕು ತಹಾಶೀಲ್ದಾರ್ ಜಿ ಮಂಜುನಾಥ್ ನೇತೃತ್ವದಲ್ಲಿ ತಾಲೂಕು ಸೌಧದಲ್ಲಿ ಪೋಲಿಸ್ , ಆರೋಗ್ಯ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ಕಂದಾಯ ಅಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಹಿರಿಯ ಜೀವವನ್ನು ತಮ್ಮ ಮನೆಗೆ ಸೇರಿಸುವ ಕಾರ್ಯವನ್ನು ತಹಶೀಲ್ದಾರ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇ ಒ ಪರಮೇಶ್ , ಸಿಡಿಪಿಒ ಸೈಲಜಾ , ಸರಸ್ವತಿ ಕಾಮತ್ ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ , ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.