ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಕೈಯಲ್ಲಿ ರೆಸ್ಯೂಮ್ ಹಿಡಿದುಕೊಂಡು ಕೆಲಸ ಹುಡುಕಿಕೊಂಡು ಅಲೆಯೋ ತಾಪತ್ರೆ ಬೇಡ ಅನ್ನೋರಿಗೆ ಈ ಕ್ಯಾಂಪಸ್ ಪ್ಲೇಸ್‌ಮೆಂಟ್ ಎನ್ನುವುದು ತುಂಬಾನೇ ದೊಡ್ಡ ಅವಕಾಶವಾಗಿರುತ್ತದೆ ಅಂತ ಹೇಳಬಹುದು. ಹೌದು.. ಕಾಲೇಜಿನಲ್ಲಿ ಕೊನೆಯ ವರ್ಷದಲ್ಲಿ ಓದುತ್ತಿರುವಾಗ ಅನೇಕ ಕಂಪನಿಗಳ ಸಿಬ್ಬಂದಿಗಳು ಕಾಲೇಜಿಗೆ ಬಂದು ಸಂದರ್ಶನ ಮಾಡಿ ಕೆಲವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಒಂದು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು, ಏಕೆಂದರೆ ಓದು ಮುಗಿಸಿಕೊಂಡು ನೇರವಾಗಿ ಕೆಲಸಕ್ಕೆ ಹೋಗಿ ದುಡಿಮೆ ಮಾಡುವುದಕ್ಕೆ ಶುರು ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ದಲ್ಲಿ “ಎನ್ನೆಂಸಿ ಟಾಲೆಂಟ್ ಹೈರ್” ಆಯೋಜಿಸುತ್ತಿದೆ. ಮೇ 28 ಮಂಗಳವಾರದಂದು ಎನ್ನೆಂಸಿ (ಕೆವಿಜಿ ಕ್ಯಾಂಪಸ್) ಪ್ಲೇಸ್ ಮೆಂಟ್ ಡ್ರೈವ್ ನಡೆಯಲಿದೆ. ಈ ಉದ್ಯೋಗ ಮೇಳವು ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಕ್ಯಾಂಪಸ್ ನೇಮಕಾತಿ ಬೆಳಗ್ಗೆ ಸರಿಯಾಗಿ 9 ಕ್ಕೆ ಪ್ರಾರಂಭಗೊಳ್ಳಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
- Sunday
- November 24th, 2024