ಇಂದು ಸುಳ್ಯ ದ ಅಮೃತ ಭವನದಲ್ಲಿ ನಡೆದ ಕೃಷಿ ಕೊಳೆರೋಗ ಕುರಿತು ಸಂವಾದ ಮತ್ತು ಅಭಿನಂದನಾ ಸಮಾರಂಭದಲ್ಲಿ
ಅರೆಕಾ ವೈ ಎಲ್ ಡಿ ಸಂಘದ ವತಿಯಿಂದ, ಪೆರುವೋಡಿ ನಾರಾಯಣ ಭಟ್ ಅವರಿಗೆ ” ಕೃಷಿಕ ರಕ್ಷಕ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪೆರಾಜೆ ಪ್ರಭಾಕರ ರೈ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀ ಶ್ರೀ ಪಡ್ರೆಯವರು ಅಭಿನಂದನಾ ಭಾಷಣ ಮಾಡಿದರು. ಜೇಡ್ಲ ಶ್ರೀಧರ ಭಟ್ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಸಂಘದ ಸಂಚಾಲಕ ಆರ್.ಕೆ.ಭಟ್ ಸ್ವಾಗತಿಸಿದರು. ನಿರಂಜನ ಪೋಳ್ಯ ಕಾರ್ಯಕ್ರಮ ನಿರೂಪಿಸಿದರು.
ದಕ್ಷಿಣ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಒಂದಾದ ಅಡಿಕೆ ಬೆಳೆಗೆ ಇತ್ತೀಚೆಗೆ ಹಲವು ರೋಗಗಳು ವಕ್ಕರಿಸಿ ಬೆಳೆಗಾರರು ಫಸಲು ಕುಸಿತದಿಂದಾಗಿ ಕಂಗಾಲಾಗಿದ್ದಾರೆ. ಸಿಂಗಾರ ಕರಟುವಿಕೆ, ಎಲೆ ಚುಕ್ಕಿರೋಗ , ಹಳದಿ ಎಲೆ ರೋಗ ಮುಂತಾದವುಗಳಿಗೆ ಪರಿಹಾರ ಕಾಣದೆ ಕಂಗಾಲಾಗಿದ್ದ ಕೃಷಿಕರಿಗೆ ಈಗ ನಾರಾಯಣ ಭಟ್ ಅವರ ವೈಜ್ಞಾನಿಕ ಪ್ರಯೋಗಗಳಲ್ಲಿ ಯೋಗ್ಯ ಫಲಿತಾಂಶ ಕಂಡು ಬರುತ್ತಿದೆ.
ಸಂಪಾಜೆ, ಪುತ್ತೂರು, ಪಾಣಾಜೆ, ವಿಟ್ಲ ಮುಂತಾದೆಡೆ ಹಲವು ತೋಟಗಳಲ್ಲಿ ಕೃಷಿಕರು ಭಟ್ ಅವರ ಮಾರ್ಗದರ್ಶನದಲ್ಲಿ ಕಳೆದೆರಡು ವರ್ಷಗಳಿಂದ ಮಾಡುತ್ತಿರುವ ವಿವಿಧ ಔಷಧಗಳ ನಿಯಮಿತ ಸಿಂಪಡಣೆಯಿಂದ ಯಶಸ್ಸು ಕಂಡು ಬರುತ್ತಿದ್ದು ಹೇರಳ ಫಸಲು ಲಭಿಸುತ್ತಿದೆ, ಮರಗಳೂ ಆರೋಗ್ಯ ಭರಿತವಾಗಿ ಚೇತರಿಸಿಕೊಂಡಿವೆ.
- Sunday
- November 24th, 2024