ದ.ಕ ಸಂಪಾಜೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ, ಇಂದು ಸಂಜೆ ಸುರಿದ ಗಾಳಿ -ಮಳೆಗೆ ಮನೆ ಮೇಲೆ ಮರ ಬಿದ್ದು ಹಾಗೂ, ಕರೆಂಟ್ ಕಂಬಗಳಿಗೆ ಹಾನಿಯಾದ ಘಟನೆ ಮೇ 8 ರಂದು ಸಂಜೆ ವರದಿಯಾಗಿದೆ. ಅಲ್ಲದೆ ದೊಡ್ಡಡ್ಕ ರಾಮಚಂದ್ರ ಮತ್ತು ಗೂನಡ್ಕ ಬೈಲೆ ಟೈಲರ್ ಅಬೀರ ನಾಗೇಶ್ ಅವರ ಮನೆಗೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಹಾಗೂ ಉಮ್ಮರ್ ನವರ ಅಂಗಡಿಗೆ ಮರದ ಕೊಂಬೆ ಬಿದ್ದು ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೆ ಗ್ರಾ.ಪಂ ಮಾಜಿ ಅಧ್ಯಕ್ಷಾರದ ಜಿ ಕೆ ಹಮೀದ್ ಮಾಧ್ಯಮಗಳ ಮೂಲಕ ಪ್ರಥಮ ಮಳೆಗೆ ಅಲ್ಲಲ್ಲಿ ಚರಂಡಿ ಬ್ಲಾಕ್, ಅಲ್ಲಲ್ಲಿ ಬೇಲಿ ರಸ್ತೆಯಲ್ಲಿ ಬಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆಯಲ್ಲಿ ಬಾಗಿದ ಬೇಲಿ ತೆರವು ಗೊಳಿಸುವುದು, ಮುಚ್ಚಿದ ಚರಂಡಿ ಓಪನ್ ಮಾಡಿ ಸಹಕರಿಸಿ. ವಿದ್ಯುತ್ ಕಂಬದ ಹಾಗೂ ತಂತಿಯ ಮೇಲೆ ಮರದ ಗೆಲ್ಲು ಬಿದ್ದಲ್ಲಿ ಮೆಸ್ಕಾಂ ಗಮನಕ್ಕೆ ತರದೇ ಮುಟ್ಟಬೇಡಿ. ತುರ್ತು ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅದಿಕಾರಿ ಹಾಗೂ ಗ್ರಾಮ ಕರಣಿಕರು. ಜನಪ್ರತಿನಿದಿನಗಳ ಗಮನಕ್ಕೆ ತನ್ನಿ. ಮಳೆಗಾಲ ಆರಂಭ ಹಿನ್ನಲೆ ಮೆಸ್ಕಾಂ ಇಲಾಖೆಯ ವತಿಯಿಂದ ಹೆಚ್ಚುವರಿ ಪವರ್ ಮೆನ್ ಒದಗಿಸಿ ಟ್ರೀ ಕಟ್ಟಿಂಗ್ ಕೂಡಲೇ ಮಾಡಿಸಿ. ಸಂಪಾಜೆ ಪ್ರವಾಹ ಪೀಡಿತ ಪ್ರದೇಶವಾಗಿರುವುದರಿಂದ ಇಲಾಖೆಯ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ಸಿಗುವಂತೆ ವೆವಸ್ಥೆ ಮಾಡಿ, ಅರಣ್ಯ, ರಾಷ್ಟ್ರಿಯ ಹೆದ್ದಾರಿ, ಇಲಾಖೆಯವರು ತುರ್ತು ಸಂದರ್ಭದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯ ಇರಬೇಕು, ಕೂಡಲೇ ಎಲ್ಲಾ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ಕರೆದು ತಾಲೂಕು ಆಡಳಿತ ವೆವಸ್ಥೆ ಮಾಡಬೇಕು. ಈಗಾಗಲೇ ಈ ದಿನ ಹಾಗೂ ಮೊನ್ನೆ ಗಾಳಿಗೆ ಮನೆಗೆ ಸಾರ್ವಜನಿಕ ರಸ್ತೆಗೆ ಮರ ಬಿದ್ದು ಹಾನಿಯಾಗಿದೆ. ಯಾವುದೇ ಮುಂಜಾಗ್ರತೆ ವೆವಸ್ಥೆಯನ್ನು ಕಲ್ಪಿಸುವಂತೆ ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.
- Thursday
- November 21st, 2024