Ad Widget

ಸುಳ್ಯ ಲೋಕಾಯುಕ್ತ ಜನ ಸಂಪರ್ಕ ಸಭೆ, ಕುಡಿಯುವ ನೀರು, ಪಹಣಿ, ಸರಣಿ ಕಳ್ಳತನ ಕುರಿತು ದೂರು ಸಲ್ಲಿಕೆ




ಲೋಕಾಯುಕ್ತದ ವತಿಯಿಂದ ಜನ ಸಂಪರ್ಕ ಸಭೆಯು ಮೇ. 07 ರಂದು ಸುಳ್ಯ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆಯಿತು.

ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ. ಕುಮಾರ್, ಲೋಕಾಯುಕ್ತ ಇನ್ ಸ್ಪೆಕ್ಟರ್ ಗಳಾದ ಅಮಾನುಲ್ಲಾ ಖಾನ್, ಸುರೇಶ್ ಬಾಬು ಸಹಿತ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿದರು.
ಸುಳ್ಯ ತಹಶೀಲ್ದಾರ್ ಜಿ. ಮಂಜುನಾಥ್, ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಪರಮೇಶ್, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

ಕನಕಮಜಲು ಗ್ರಾಮದಲ್ಲಿನ ಸರಣಿ ಕಳ್ಳತನ ಪ್ರಕರಣ, ಸುಳ್ಯ ನಗರದಲ್ಲಿ‌ ನಡೆಯುವ ಅಮೃತ್ 2 ಕಾಮಗಾರಿ ಅಸಮರ್ಪಕತೆ, ಗ್ರಾಮ ವ್ಯಾಪ್ತಿಯ ಜೆಜೆಎಂ ಕಾಮಗಾತಿ ಅಸಮರ್ಪಕ ಸೇರಿದಂತೆ ಪಹಣಿ ಸಮಸ್ಯೆ ಕುರಿತು ದೂರು ಅರ್ಜಿ ಸಲ್ಲಿಕೆಯಾದವು.

. . . . . . .

ಲೋಕಾಯುಕ್ತ ಹೆಸರಿನಲ್ಲಿ ಕರೆ ಬಂದಲ್ಲಿ ತಿಳಿಸಿ

ಕರ್ನಾಟಕ ಲೋಕಾಯುಕ್ತ ಹೆಸರಿನಲ್ಲಿ ಪೋನ್ ಕರೆ ಮಾಡಿ ವಂಚನೆ ಎಸಗುತ್ತಿರುವ ದೂರುಗಳು ಕೇಳಿ ಬರುತ್ತಿದ್ದು, ಇಂತಹ ಕರೆಗಳು ಸಾರ್ವಜನಿಕರಿಗೆ ಬಂದಲ್ಲಿ ಲೋಕಾಯುಕ್ತದ ಗಮನಕ್ಕೆ ಅಥವಾ ಇಲಾಖೆಯ ಅಧಿಕೃತ ಸಂಖ್ಯೆಗೆ ದೂರು ನೀಡುವಂತೆ ಡಿವೈಎಸ್‌ಪಿ ಡಾ। ಗಾನ ಪಿ.ಕುಮಾರ್ ಸಲಹೆ ನೀಡಿದರು. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ನೀಡದೇ ಇರುವ ಬಗ್ಗೆ ಅಧಿಕಾರಿಗಳು ಸೂಕ್ತ ಸಮಯಕ್ಕೆ ಕೆಲಸ ನಿರ್ವಹಿಸದೇ ಇರುವ ಬಗ್ಗೆ ಇಲಾಖೆಗಳ ನಡುವೆ ಅರ್ಜಿಗಳು ವಿಲೇವಾರಿ ಆಗದೇ ಇರುವಂತಹ ಪ್ರಕರಣಗಳಿದ್ದಲ್ಲಿ ತಿಳಿಸುವಂತೆ ಅವರು ಹೇಳಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!