Ad Widget

ಎನ್ನೆಂಸಿ; ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಜ್ಞಾನ ಉತ್ಸವದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ.

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಜೀವ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ಮೇ 03 ಶುಕ್ರವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗ ಆಯೋಜಿಸಿದ “ವರ್ಟೆಕ್ಸ್ 6.0” ರಾಷ್ಟ್ರ ಮಟ್ಟದ ಅಂತರ ಕಾಲೇಜು ವಿಜ್ಞಾನ ಉತ್ಸವದಲ್ಲಿ ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು.

. . . . . . .

ಕಾಲೇಜಿನ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಭಾಗಗಳನ್ನು ಒಳಗೊಂಡ 10 ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದು, ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಸುಕನ್ಯಾ ಡಿ ಯು ಪ್ರಥಮ, ರಸಪ್ರಶ್ನೆಯಲ್ಲಿ ಅನುಶ್ರೀ ಮತ್ತು ಚೈತ್ರ ದ್ವಿತೀಯ, ಡಮ್ ಶರಡ್ಸ್ ಸ್ಪರ್ಧೆಯಲ್ಲಿ ಮಹಿಮಾ ಮತ್ತು ಮಧಿವಧಿನಿ ದ್ವಿತೀಯ ಬಹುಮಾನ ಪಡೆದುಕೊಂಡರು. ಜೊತೆಗೆ ವಿದ್ಯಾರ್ಥಿಗಳಾದ ಯಶಿಕಾ, ತೇಜಸ್, ಅಕ್ಷತಾ ಮತ್ತು ಮನಸ್ವಿನಿ ಭಾಗವಹಿಸಿ ಪ್ರಾರಂಭದ ತಂಡ ಪರಿಚಯ ಸ್ಪರ್ಧೆ ಕಿರುನಾಟಕದಲ್ಲಿ ಪ್ರಥಮ ಬಹುಮಾನದೊಂದಿಗೆ ಸಮಗ್ರ ದ್ವಿತೀಯ ಪ್ರಶಸ್ತಿ ಗೆದ್ದುಕೊಂಡರು.

ಕಾಲೇಜಿನ ಪ್ರಾಣಿಶಾಸ್ತ್ರ ಉಪನ್ಯಾಸಕರಾದ ಅಜಿತ್ ಕುಮಾರ್ ಎಸ್ ಬಿ ತಂಡದ ನೇತೃತ್ವ ವಹಿಸಿದ್ದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪಿ ಪಿ, ಸಸ್ಯಶಾಸ್ತ್ರ ಉಪನ್ಯಾಸಕಿ ಕೃತಿಕಾ ಕೆ ಜೆ, ರಸಾಯನಶಾಸ್ತ್ರ ಉಪನ್ಯಾಸಕಿ ಪಲ್ಲವಿ ಬಿ ಮಾರ್ಗದರ್ಶನ ನೀಡಿದ್ದರು. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಜ್ಞಾನ ಪದವಿ ವಿಭಾಗದ ಸಂಯೋಜಕರಾದ ಸತ್ಯಪ್ರಕಾಶ್ ಡಿ ಮತ್ತು ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!