ಸುಳ್ಯ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 110 ಕೆ.ವಿ ಕಾಮಗಾರಿ ಆರಂಭಗೊAಡಿದ್ದು ಇದೀಗ ಮತ್ತೆ ಅಡೆ ತಡೆಗಳು ವಿಘ್ನಗಳು ಎದುರಾಗಿವೆ.
ಸುಳ್ಯದ 110 ಕೆ.ವಿ.ಯು ಕೆ.ಪಿ.ಟಿ.ಸಿ.ಎಲ್. ಮೂಲಕ ಕೆಲಸ ಪ್ರಾರಂಭಿಸಿ ಈ ಯೋಜನೆಗೆ ವಿದ್ಯುತ್ ತಂತಿಗಳು ಹಾದು ಹೋಗಲು ಸುಮಾರು 89 ಟವರುಗಳ ನಿರ್ಮಾಣವಾಗಬೇಕಿದೆ. ಆದರೆ ಇದೀಗ 87ಟವರ್‌ಗಳ ನಿರ್ಮಾಣಕ್ಕೆ ತೆರಳಿದಾಗ ಅಡೆತಡೆಗಳು ಉಂಟಾಗಿದ್ದು ಕೇವಲ 2ಟವರ್‌ಗಳ ನಿರ್ಮಾಣ ಮಾಡಲು ಮಾತ್ರವೇ ಆವಕಾಶ ಸಿಕ್ಕಿದಂತಾಗಿದೆ. ಇತ್ತ ಅರಣ್ಯ ಇಲಾಖೆಗೆ ಸರಕಾರ ಬೇರೆ ಕಡೆಯಲ್ಲಿ ಸ್ಥಳ ಗುರುತಿಸಿ ನೀಡಲಾಗಿದೆ ಎಂದು ಪ್ರತಿನಿಧಿಗಳು ತಿಳಿಸಿದ್ದರು ಇದೀಗ ಅರಣ್ಯ ಇಲಾಖೆಯು ಮೊದಲು ಖಾಸಗಿಯಲ್ಲಿ ಮಾಡಿ ಬನ್ನಿ ಮತ್ತೆ ನಾವು ಬಿಡುತ್ತೇವೆ ಎಂದು ಗುತ್ತಿಗೆದಾರರು ಮತ್ತು ಕಾರ್ಮಿಕರಲ್ಲಿ ಖ್ಯಾತೆ ತೆಗೆಯುತ್ತಿದೆ . ಖಾಸಗಿ ಜಮೀನು ಮಾಲಕರುಗಳು ಸರಕಾರಿ ಅರಣ್ಯದಲ್ಲಿ ಹಾದು ಹೋಗುವ ಕೆಲಸವನ್ನು ಮಾಡಿ ಬನ್ನಿ ಎಂದು ಹೇಳುತಿದ್ದು, ಇವೆಲ್ಲಾವನ್ನು ಇತ್ಯರ್ಥ ಪಡಿಸಿ 110 ಕೆ.ವಿ. ಸುಳ್ಯ ತಲುಪಲು ಕನಿಷ್ಠ ಎಷ್ಟು ವರ್ಷಗಳು ಕೆಪಿಟಿಸಿಎಲ್ ಬೇಗಾಗಬಹುದು ಎಂದು ತಿಳಿಯುತ್ತಿಲ್ಲ.
ಮಾಡಾವು, ಪಾಲ್ತಾಡಿ, ಜಾಲ್ಸೂರು, ಮಾರ್ಗವಾಗಿ ಲೈನ್ ಗಳು ಬರುತ್ತಿದ್ದು ಇಲ್ಲಿ ಖಾಸಗಿ ವ್ಯಕ್ತಿಗಳು ಯಾವುದೇ ಪತ್ರಮುಖೇನೆ ಅರ್ಜಿಗಳನ್ನು ನೀಡದೆ ಕಾಮಗಾರಿಗೆ ತಡೆ ಒಡ್ಡುತ್ತಿದ್ದು ಮೂರು ತಿಂಗಳುಗಳಿಂದ ಲೈನ್ ಕಾಮಗಾರಿಯು ನಿಂತಿದ್ದು ಇದೀಗ ಸುಳ್ಯದ ಕಛೇರಿ ಬಳಿಯ ಕೆಲಸಗಳು ಮಾತ್ರ ಭರದಿಂದ ನಡೆಯುತ್ತಿದೆ. ಈ ಕಾಮಗಾರಿಯು ಗುತ್ತಿಗೆ ದಾರರಿಗೆ ನವೆಂಬರ್ 2025ರ ಒಳಗಾಗಿ ಕಾಮಗಾರಿ ಮುಗಿಸಬೇಕಾಗಿದ್ದು ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಜನಪ್ರತಿನಿದಿಗಳ ಜೋತೆಗೆ ಸಭೆ ನಡೆಸಲು ಮತ್ತು ಪರಿಹಾರ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೆವೆ ಅಲ್ಲದೆ ಕೆಪಿಟಿಸಿಎಲ್ ಅಧಿಕಾರಿಗಳು ಜನರನ್ನು ಭೇಟಿಯಾಗಿ 110ಕೆ.ವಿ. ಬಗ್ಗೆ ಮಾಹಿತಿ ನೀಡಿ ಮನವೊಲಿಸುತ್ತೇವೆ, ಅದು ಸಾಧ್ಯವಾಗದ ಪಕ್ಷದಲ್ಲಿ ಪೊಲೀಸ್ ನೆರವು ಪಡೆದು ಬದ್ರತೆಯೊಂದಿಗೆ ಕಾಮಗಾರಿಯನ್ನು ನಡೆಸುತ್ತೇವೆ. ಜನರು ತಮ್ಮ ಅನುಕೂಲಕ್ಕಾಗಿ ಮಾಡುತ್ತಿರುವ ಈ ಕಾಮಗಾರಿಗೆ ಈ ರೀತಿಯಲ್ಲಿ ತೊಂದರೆ ನೀಡುವುದು ಸರಿಯಲ್ಲ ನಮ್ಮ ಜೊತೆಗೆ ಕೈ ಜೋಡಿಸಿ ಕಾಮಗಾರಿ ಪೂರ್ಣಗೊಳಿಸಲು ನಿಮ್ಮ ಸಹಕಾರವು ಬೇಕು ಎಂದು ಎಕ್ಸಿಕೀಟಿವ್ ಎಂಜಿನಿಯರ್ ಗಂಗಾಧರ ಅಮರ ಸುಳ್ಯ ಸುದ್ದಿಗೆ ಮಾಹಿತಿ ನೀಡಿದರು.