ಸುಬ್ರಹ್ಮಣ್ಯ, ಮೇ 2: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಗೊಂಡಿರುವ ಎಸ್.ಜೆ.ಯೇಸುರಾಜ್ ಹಿಂದು ಧರ್ಮದವರು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಯೆಸ್.ಜೆ.ಯೇಸುರಾಜ್ ಅವರು ದಿನಾಂಕ 17.01.2005ರಂದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೌಕರರಾಗಿ ಆಯ್ಕೆ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಇವರ ಶಾಲಾ ದಾಖಲಾತಿ ಮತ್ತು ನೇಮಕಾತಿ ಸಂದರ್ಭದಲ್ಲಿ ಹಾಜರು ಪಡಿಸಿರುವ ದಾಖಲಾತಿಗಳಂತೆ ಇವರು ಹಿಂದು ಧರ್ಮಕ್ಕೆ ಸೇರಿದವರಾಗಿರುತ್ತಾರೆ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಇವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಎಂದು ಬಿತ್ತರಿಸಲಾಗುತ್ತಿದ್ದು, ಆದರೆ ಇವರು ಹಿಂದು ಧರ್ಮಕ್ಕೆ ಸೇರಿದವರೆಂದು ಈ ಮೂಲಕ ಸ್ಪಷ್ಟನೆ ನೀಡುತ್ತಿರುವುದಾಗಿ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Tuesday
- January 28th, 2025