Ad Widget

ಬೆಳ್ಳಾರೆ : ಕಾವಿನಮೂಲೆಯಲ್ಲಿ ಮನೆಗೆ ಅಳವಡಿಸಿದ ಸಿ.ಸಿ.ಕೆಮರಾ ಕಳವು, ಪೊಲೀಸ್ ದೂರು

ಮನೆಗೆ ಅಳವಡಿಸಿದ ಸಿ.ಸಿ.ಕೆಮರಾ ಕಳವಾದ ಘಟನೆ ಬೆಳ್ಳಾರೆಯ ಕಾವಿನಮೂಲೆಯಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆಯೋರ್ವರು ಪೊಲೀಸ್ ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

. . . . . . . . .

ಬೆಳ್ಳಾರೆ ಗ್ರಾಮದಲ್ಲಿರುವ ಸ್ಥಿರಾಸ್ಥಿ ಸರ್ವೆ ನಂ ೨೧೪/೧ ರಲ್ಲಿ ೨.೫೩ ಎಕ್ರೆ, ಹಾಗೂ ಸರ್ವೆ ನಂ ೮೮/೧ಎ/ಎ೨ ರಲ್ಲಿ ೦.೦೬೦ ಎಕ್ರೆ ಜಮೀನು ಹಾಗೂ ಅದರಲ್ಲಿರುವ ಮನೆಗೆ ಸಿಸಿಟಿವಿ, ಅಳವಡಿಸಿ ಸಂಜೆಯ ವೇಳೆಗೆ ಸಿ.ಸಿಕೆಮರಾ ಮತ್ತು ಇಂಟರ್ ನೆಟ್ಟ್ ಅಳವಡಿಸಿದ ಬಳಿಕ ನಾನು ಮನೆಗೆ ಬೀಗ ಹಾಕಿ ತವರು ಮನೆಯಾದ ಪುತ್ತೂರಿಗೆ ಹೋಗಿದ್ದು, ಬೆಳಿಗ್ಗೆ ೯-೦೦ ಗಂಟೆಗೆ ಪುನಃ ಕಾವಿನಮೂಲೆ ಮನೆಗೆ ಬಂದು ನೋಡಿದಾಗ ಮನೆಗೆ ಅಳವಡಿಸಿದ ಇಂಟರ್ ನೆಟ್ಟ್ ಸಂಪರ್ಕವನ್ನು ಅಲ್ಲಲ್ಲಿ ಕತ್ತರಿಸಿ ಹಾನಿ ಮಾಡಿದ್ದಾರೆ.

. . . . . . .

೫ ಸಿಸಿ ಕೆಮರಾಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಸಿಸಿ ಕೆಮರಾದಲ್ಲಿ ದಾಖಲಾಗಿರುವ ಫೂಟೇಜ್‌ನ್ನು ಪರಿಶೀಲಿಸಲಾಗಿ ಈ ಕೃತ್ಯವನ್ನು ನನ್ನ ಗಂಡ ನವೀನ, ಹಾಗೂ ಕೆಲಸದವರಾದ ಸೀನ ಹಾಗೂ ವಾರಿಜಾರವರು ಮಾಡಿರುವುದು ಕಂಡು ಬರುತ್ತದೆ. ಕಳವಾದ ೫ ಸಿಸಿ ಕೆಮರಾಗಳ ಮೌಲ್ಯ ರೂ ೪೦,೦೦೦/- ಆಗಬಹುದು ಎಂದು ವಿನಮೂಲೆ ಧರ್ಮಶ್ರೀ ನಿಲಯದ ಸ್ಪಂದನ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಆದುದರಿಂದ ನನಗೆ ಅವಾಚ್ಯವಾಗಿ ಬೈದು, ಬೆದರಿಕೆಯೊಡ್ಡಿ , ಮನೆಗೆ ಅಳವಡಿಸಿದ ಇಂಟರ್ ನೆಟ್ಟ್ ಕೇಬಲ್ ಗಳಿಗೆ ಹಾನಿ ಮಾಡಿ, ಸಿಸಿ ಕೆಮಾರಗಳನ್ನು ಕಳವುಮಾಡಿದ ಗಂಡ ನವೀನ, ಅತ್ತೆ ನೀರಜಾಕ್ಷಿ, ಗಂಡನ ಅಣ್ಣನ ಪತ್ನಿ ಪ್ರಜ್ಞಾ ಮತ್ತು ಕೆಲಸದವರಾದ ವಾರಿಜಾ ಹಾಗೂ ಶೀನರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading