ಉಳ್ಳಾಲದಲ್ಲಿ 6 ಪೊಲೀಸರಿಗೆ ಸೋಂಕು ಬಂದಿದೆ. ಬೆಳಗ್ಗೆ 10 ಗಂಟೆಯಿಂದ ಉಳ್ಳಾಲ ಠಾಣೆ ಮುಂಭಾಗದಲ್ಲಿ ಕುಳಿತು (ಹೆಣ ಕಾಯುವಂತೆ) ಆಸ್ಪತ್ರೆ ದಾಖಲಾಗಲು ಕಾಯ್ತಾ ಇದ್ದಾರೆ.
ಯಾವ ಆಸ್ಪತ್ರೆ ಗೂ ದಾಖಲಿಸುವ ಕೆಲಸ ನಡೆಯುತ್ತಿಲ್ಲ. ಪ್ರತಿಷ್ಠಿತ ಆಸ್ಪತ್ರೆಗಳೇ ನಮ್ಮಲ್ಲಿಗೆ ತರಬೇಡಿ ಹೇಳ್ತಾ ಇದ್ದಾರೆ.
ಪೊಲೀಸರ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು?
ದಕ ಜಿಲ್ಲಾಡಳಿತ ಏನು ಮಾಡುತ್ತಿದೆ. ಉಸ್ತುವಾರಿ ಸಚಿವರು, ಶಾಸಕರು ಎಲ್ಲಿದ್ದಾರೆ?
ಕಳೆದ 24 ಗಂಟೆಯಲ್ಲಿ ದಕ ಜಿಲ್ಲೆಯಲ್ಲಿ ನಾಲ್ಕು ಸಾವು ಸಂಭವಿಸಿದೆ.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ದಿಟ್ಟ ಕ್ರಮ ತೆಗೆದುಕೊಳ್ಳಬೇಕಿತ್ತು. ಲಾಬಿಗಳು -ಮಾಫಿಯಾಗಳು, ಕೊಡುವ ದೇಣಿಗೆಗಳಿಗೆ ಮಣಿದು ಕಠಿಣ ನಿರ್ಧಾರದಿಂದ ಹಿಂದೆ ಸರಿದರೆ ಅನಾಹುತ ನಿಶ್ಚಯ. ಎಚ್ಚೆತ್ತುಕೊಳ್ಳಿ?
ಎಚ್ಚರಿಸಬೇಕಾದ ವಿರೋಧ ಪಕ್ಷಗಳು, ನಾಯಕರು ಸೈಕಲ್ ರಥ ಏರಿ ಬೀದಿಯಲ್ಲಿ ಕೊರೋನ ಮಾರಿಯ ಮೆರವಣಿಗೆ ಮಾಡುತ್ತಿದ್ದಾರೆ...
ರಾಜಕಾರಣಿ, ಅಧಿಕಾರಿಗಳಿಗೆ ವಿಐಪಿಗಳಿಗಾಗಿ ವಿಶೇಷ ವ್ಯವಸ್ಥೆ, ಆಸ್ಪತ್ರೆ ಮಾಡಿಕೊಂಡಿರಬಹುದು. ಆದರೆ ಅಲ್ಲಿಗಾದರೂ ಸೇವೆಗೆ ವೈದ್ಯರು, ದಾದಿಯರು ಸಿಗಬೇಕಲ್ವಾ
ಒಟ್ಟಾರೆ .. ಹಸಿವು, ನಿರುದ್ಯೋಗ, ಹಣಕಾಸು ಸಮಸ್ಯೆ, ಡೆಂಗ್ಯು.. ಕೊರೋನ..
ಇದನ್ನೆಲ್ಲ ನೋಡುವಾಗ
ನಿರಾಸೆ, ವಿಷಾದ, ನೋವು, ಆತಂಕ ….ಒಟ್ಟಿಗೆ ಆಗುತ್ತಿದೆ