Ad Widget

ವಿದ್ಯಾರ್ಥಿ ಸಂಘಗಳು ನಾಯಕತ್ವದ ಜ್ಞಾನ ಬೋಧಿಸುವ ಪುಸ್ತಕಗಳು : ಜಯಕರ.ಬಿ.ಶೆಟ್ಟಿ

ಸುಬ್ರಹ್ಮಣ್ಯ : ಗ್ರಾಮೀಣ ಪ್ರದೇಶದಲ್ಲಿ ನಾಯಕತ್ವಗಳು ಹುಟ್ಟಿಕೊಳ್ಳುತ್ತದೆ. ವಿದ್ಯೆ ಜೀವನದ ಅವಿಭಾಜ್ಯ ಅಂಗ. ವಿದ್ಯಾರ್ಥಿ ಸಂಘಗಳು ಯುವಜನಾಂಗಕ್ಕೆ ನಾಯಕತ್ವದ ಜ್ಞಾನವನ್ನು ಬೋಧಿಸುವ ಪುಸ್ತಕಗಳಾಗಿವೆ.ನಾಯಕನ ಗುಣ-ಲಕ್ಷಣ, ಶಿಸ್ತು, ಸ್ಪೂರ್ತಿ ಇತ್ಯಾದಿಗಳು ವಿದ್ಯಾರ್ಥಿ ಸರಕಾರದಿಂದ ದೊರಕುವತ್ತವೆ. ಜ್ಞಾನಗಳಾಗಿವೆ. ಪ್ರಜಾಪ್ರಭುತ್ತೀಯ ಮೌಲ್ಯಗಳನ್ನು ತಿಳಿಯಲು ವಿದ್ಯಾರ್ಥಿ ಸರಕಾರಗಳು ಸಹಕಾರಿಯಾಗುವುದರೊಂದಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಆಡಳಿತಾತ್ಮಕ ಜ್ಞಾನ ಬೋಧಿಸುತ್ತದೆ. ನಿಸ್ವಾರ್ಥ ಮನೋಭಾವನೆಯಿಂದ ಸಮಾಜಮುಖಿ ಸೇವೆ ನಡೆಸಲು ಕೂಡಾ ಇದು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ.ವಿಭಾಗ ನಿಯಂತ್ರಕ ಜಯಕರ.ಬಿ.ಶೆಟ್ಟಿ ಹೇಳಿದರು.
ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು. ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಸ್ತುಮಯ ವಿದ್ಯಾರ್ಥಿ ಜೀವನವು ಭವಿಷ್ಯಕ್ಕೆ ಉತ್ತಮ.ಜೀವನ ನಿರ್ವಹಣೆಯ ಶಿಕ್ಷಣವು ಗ್ರಾಮೀಣ ಭಾಗದಲ್ಲಿ ಅದ್ಬುತವಾಗಿ ದೊರಕುತ್ತದೆ. ಕೆಎಸ್‌ಆರ್‌ಟಿಸಿಯು ದೂರ ದೂರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಾ ಬರುತ್ತಿದೆ ಎಂದರು.

. . . . .


ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಕಾರ್ಯದರ್ಶಿ ಮತ್ತು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ವಹಿಸಿದ್ದರು.ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಸ್ಟಾರ್ ಸ್ಪೋರ್ಟ್ಸ್ ಮುಂಬೈನ ನಿರೂಪಕ ಮತ್ತು ಕಾರ್ಯಕ್ರಮ ನಿರ್ವಾಹಕ ಹರ್ಷಿತ್ ಪಡ್ರೆ, ಕುಕ್ಕೆ ದೇವಳದ ಶಿವಸುಬ್ರಹ್ಮಣ್ಯ ಭಟ್ ಮುಖ್ಯಅತಿಥಿಗಳಾಗಿದ್ದರು.ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸರಕಾರದ ಸಂಚಾಲಕ ಜಯಪ್ರಕಾಶ್.ಆರ್ ವೇದಿಕೆಯಲ್ಲಿದ್ದರು.

ಕಾಲೇಜಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ವಿದ್ಯಾರ್ಥಿ ಸರಕಾರದ ಸಂಚಾಲಕ ಜಯಪ್ರಕಾಶ್ ಆರ್ ಪ್ರತಿಜ್ಞಾ ವಿಧಿ ಬೋಧಿಸಿದರು.ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇತನ್, ಉಪಾಧ್ಯಕ್ಷೆ ಪ್ರೀಕ್ಷಾ.ಎಂ, ಕಾರ್ಯದರ್ಶಿ ಅಕ್ಷಯ್ ಕಂದಡ್ಕ, ಕ್ರೀಡಾ ಕಾರ್ಯದರ್ಶಿ ವಿಕಾಸ್ ಜೋಗಿ, ಸಾಂಸ್ಕೃತಿಕ ಕಾರ್ಯದರ್ಶಿ ವಿದ್ಯಾಲಕ್ಷ್ಮಿ ಮತ್ತು ತರಗತಿ ನಾಯಕರು ಹಾಗೂ ನಾಯಕಿಯರು ಪ್ರಮಾಣವಚನ ವಿದ್ಯಾಧಿದೇವತೆ ಸರಸ್ವತಿಯ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!