ಸುಳ್ಯ: ಸುಳ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ಉದ್ಘಾಟನೆಯು ಸಂಸ್ಥೆಯ ಅಧ್ಯಕ್ಷರಾದ ಜನಾರ್ದನ ಡಿ ಇವರ ಅಧ್ಯಕ್ಷತೆಯಲ್ಲಿ ಸುಳ್ಯ ವೃತ್ತ ನಿರೀಕ್ಷಕರಾದ ನವೀನ್‌ಚಂದ್ರ ಜೋಗಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಇಂದು ಕಾರ್ಯಾರಂಭ ಪ್ರಾರಂಭಿಸಿತು ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯನ್ನು ಸುಳ್ಯ ವೃತ್ತ ನಿರೀಕ್ಷಕರಾದ ನವೀನ್‌ಚಂದ್ರ ಜೋಗಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಸೊಸೈಟಿಯ ಹೆಸರಿನ ಮಾದರಿಯಲ್ಲೆ ಸುಳ್ಯದಲ್ಲಿ ಈ ಸೊಸೈಟಿಯ ಬೆಳವಣಿಗೆ ಜೊತೆಗೆ ಜನತೆಯು ಆರ್ಥಿಕವಾಗಿ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಹೇಳಿ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡುತ್ತಾ ನಾವು ವೆಂಕ್ರಟಮನ ಸೊಸೈಟಿಯನ್ನು ಹಲವಾರು ವರುಷಗಳ ಹಿಂದೆ ಆರಂಭಿಸಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ ಅದೇ ರೀತಿ ರಾಷ್ಟ್ರೀಯ ಬ್ಯಾಂಕ್ ಗಳ ಮಧ್ಯೆ ಜನತೆಯ ವಿಸ್ವಾಸದ ಜೊತೆಗೆ ಬಹಳಷ್ಟು ಪರಿಣಾಮಕಾರಿಯಾಗಿ ನಮ್ಮ ಸೇವೆಯನ್ನು ಸಲ್ಲಿಸಿರುವ ಹಿನ್ನಲೆಯಲ್ಲಿ ಇಂದು ರಾಜ್ಯಾದ್ಯಂತ ನಮ್ಮ ಸಂಸ್ಥೆಯ ಶಾಖೆಗಳು ಬೆಳೆದು ನಿಂತಿದೆ ಅದೇ ಮಾದರಿಯಲ್ಲಿ ಸ್ವರ್ಣ ಶ್ರೀ ಸೌಹಾರ್ದಕೋ-ಆಪರೇಟಿವ್ ಸೊಸೈಟಿಯು ಬೆಳೆಯಲಿ ಎಂದು ಶುಭಹಾರಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜನಾರ್ದನ ಡಿ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಜನತೆಯ ಹಾಗು ಸರ್ವರ ಬೆಂಬಲವನ್ನು ಕೋರಿದರು.ಜನಾರ್ದನ ಡಿ ಸ್ವಾಗತಿಸಿ ಆನಂದ ಖಂಡಿಗ ನಿರೂಪಿಸಿ ವಂದಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸತ್ಯನಾರಾಯಣ ಎ ಜೆ , ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅಶ್ವತ್ ಬಿಳಿಮಲೆ ನಿರ್ದೇಶಕರುಗಳಾದ ರಾಘವ ಗೌಡ ಎಂ, ಪ್ರಭಾಕರನ್ ನಾಯರ್ , ಪ್ರಕಾಶ್ ಕೆ , ಭವಾನಿ ಬಿ ಆರ್ , ಹರ್ಷಿತ ಎನ್ ಪಿ , ಸಚಿನ್ ಕುಮಾರ್ ಬಿ ಎನ್ , ಸತೀಶ್ ಕೆ ಜಿ , ಮಹೇಶ್ ಎಂ ಆರ್ , ದೀಕ್ಷೀತ್ ಕುಮಾರ್ ಪಿ , ಡಾ ಪುರುಷೋತ್ತಮ ಕೆ ಜಿ , ಧರ್ಮಪಾಲ ಕೆ , ಆನಂದ ಖಂಡಿಗ , ಶ್ರೀಧರ ಕೆ ಎಸ್ , ಅರುಣ್ ಕುಮಾರ್ ಚಿದಾನಂದ ಮದುವೆಗದ್ದೆ ,ರಂಜಿತ್ ಕೇರ್ಪಳ , ಸುರೇಶ್ ರಥಶ್ರೀ , ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.
- Thursday
- November 21st, 2024