ಜೀವನದಲ್ಲಿ ಏಕಾಂಗಿಯಾದೆ ಎಂದು ನೀ ಕೊರಗಬೇಡ, ಏಕಾಂತದಲ್ಲೂ ಖುಷಿಯಿದೆ ಎಂಬುವುದನ್ನು ಮರೆಯಬೇಡ…ಬದುಕಿನಲ್ಲಿ ಕಷ್ಟವೇ ಬರುವುದು ಎಂದು ನೀ ಕುಗ್ಗಬೇಡ, ಕಷ್ಟ-ನಷ್ಟಗಳ ಆಚೆಗೆ ಸುಂದರವಾದ ಬದುಕಿದೆ ಎಂಬುವುದನ್ನು ಮರೆಯಬೇಡ… ಬದುಕಿನಲ್ಲಿ ಎಷ್ಟೇ ಕಷ್ಟಗಳಿದ್ದರೂ ಮುಖದಲ್ಲಿನ ನಗುವನ್ನು ಎಂದಿಗೂ ಬಿಡಬೇಡ, ಕೆಲವು ಕಷ್ಟಗಳ ಅತ್ತು ಮರೆತರೆ ಇನ್ನೂ ಕೆಲವು ಕಷ್ಟಗಳ ನಕ್ಕು ಮರೆಯಬಹುದೆಂಬ ಮಾತನ್ನು ಮರೆಯಬೇಡ… ಜಗತ್ತಿನಲ್ಲಿ ನಿನಗೊಬ್ಬನಿಗೆ ಇಷ್ಟೊಂದು ಕಷ್ಟಗಳು ಬರುವುದೆಂದು ನೀ ವ್ಯಥೆಪಡಬೇಡ, ನಿನಗಿಂತಲೂ ಹೆಚ್ಚು ಕಷ್ಟದಲ್ಲಿರುವವರು ಈ ಜಗದಲ್ಲಿ ಇರುವರೆಂದು ಮರೆಯಬೇಡ…ಬದುಕಿನಲ್ಲಿ ಸೋತೇ ಎಂದು ನೀ ಭಯಪಡಬೇಡ, ಸೋತು ಗೆದ್ದವರೇ ಇತಿಹಾಸ ಸೃಷ್ಟಿಸುವುದು ಎಂಬ ಮಾತನ್ನು ಮರೆಯಬೇಡ… ಅವಮಾನಗಳಿಗೆ ಅಂಜಿ ನೀ ಹಿಂದೆ ಸರಿಯಬೇಡ, ಇಂದಿನ ಅವಮಾನವೇ ಮುಂದಿನ ಸನ್ಮಾನವಾಗುವುದು ಎಂಬ ಮಾತನ್ನು ಮರೆಯಬೇಡ…
✍️ಉಲ್ಲಾಸ್ ಕಜ್ಜೋಡಿ