Ad Widget

ಸುಬ್ರಹ್ಮಣ್ಯ : ಎಸ್.ಎಸ್.ಪಿ.ಯು. ನಲ್ಲಿ 1100 ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಯೋಗಾಸನ ; ಚಿತ್ತ ಚಾಂಚಲ್ಯ ಹೋಗಲಾಡಿಸಿ  ಏಕಾಗ್ರತೆ ಸಾಧಿಸಲು ಯೋಗ ಅಡಿಗಲ್ಲು- ಸೋಮಶೇಖರ ನಾಯಕ್ ಅಭಿಮತ

ಚಿತ್ತ ಚಾಂಚಲ್ಯವನ್ನು ಹೋಗಲಾಡಿಸಲು ಯೋಗ ಪ್ರಧಾನ.  ಪ್ರಾಚೀನ ಖುಷಿ ಮುನಿಗಳಿಂದ ಸಂಜಾತ ಯೋಗವು ಸರ್ವರೋಗ ನಿವಾರಕವಾಗಿದೆ. ಪತಂಜಲಿ ಮುನಿಯಿಂದ ಭಾರತದಲ್ಲಿ  ಆರಂಭವಾದ ಯೋಗ ಇಂದು ವಿಶ್ವವ್ಯಾಪಿಯಾಗಿದೆ.ವಿಶ್ವ ಇದನ್ನು ಅನುಸರಿಸುತ್ತಿದೆ.ದೇವತೆಯ ಆರಾಧನೆಗೆ ಯೋಗಾಸನವನ್ನು ಬಳಸಲಾಗುತ್ತದೆ. ಸೂರ್ಯನ ಪೂಜನೆಮಾಡುವ  ಸೂರ್ಯ ನಮಸ್ಕಾರ ಅತ್ಯಂತ ಶ್ರೇಷ್ಠವಾದ ಆಸನವಾಗಿದೆ. ಯೋಗವು ಭಾರತವು ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಇದೀಗ ವಿಶ್ವಾದ್ಯಂತ ಯೋಗದ ಕುರಿತು ತಿಳಿಯಲು ಹಾಗೂ ಆರೋಗ್ಯವಂತ ಪ್ರಪಂಚ ಸೃಷ್ಠಿಗೆ ವಿಶ್ವಯೋಗ ದಿನಾಚರಣೆ ಬುನಾದಿಯಾಗಲಿದೆ. ಸಮಚಿತ್ತ ಮತ್ತು ದೈಹಿಕ ಸಮತೋಲನಕ್ಕೆ ಯೋಗ ಅಸ್ತçವಾಗಿದೆ. ಏಕಾಗ್ರತೆಯೊಂದಿಗೆ ಮಾನಸಿಕ ಸದೃಢತೆ ಸಾಧಿಸಲು ಯೋಗ ಅಡಿಗಲ್ಲು.ಯೋಗದಿಂದ ರೋಗವಿಲ್ಲ. ಆದುದರಿಂದ ಎಳವೆಯಲ್ಲಿಯೇ ಪ್ರತಿದಿನ ಯೋಗಾಭ್ಯಾಸ ಮಾಡಬೇಕು ಎಂದು ಎಸ್ ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ  ಬುಧವಾರ ನಡೆದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯೋಗಾಸನದಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ನಿರ್ಮಲ ಚಿತ್ತವು ರೂಪಿತವಾಗುತ್ತದೆ. ಇದರಿಂದ ವ್ಯಕ್ತಿಯ ಮಾನಸಿಕ ಆರೋಗ್ಯ ದೃಢಗೊಳ್ಳುತ್ತದೆ ಎಂದರು.

. . . . . . .


  ೧೧೦೦ ವಿದ್ಯಾರ್ಥಿಗಳಿಂದ  ಯೋಗ :
  ಕಾಲೇಜಿನ ಮೇಲ್ಬಾಗದ ಕ್ರೀಡಾಂಗಣ ಮತ್ತು ಕೆಳಭಾಗದ ಕ್ರೀಡಾಂಗಣದಲ್ಲಿ ಒಟ್ಟು ೧೧೦೦ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಸನ ಮಾಡಿದರು. ಯೋಗ ಗುರುಗಳಾದ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಉಪನ್ಯಾಸಕ ಪ್ರಜ್ವಲ್.ಜೆ ಯೋಗಾಭ್ಯಾಸ ಮಾಡಿಸಿದರು. ಆರಂಭದಲ್ಲಿ ಯೋಗಾಸನ ಮಂತ್ರ, ಪತಂಜಲಿ ಸ್ಮರಣಾ ಮಂತ್ರ ಪಠಿಸಲಾಯಿತು.ಬಳಿಕ ವೃಕ್ಷಾಸನ, ಪದ್ಮಾಸನ, ಮಂತ್ರ ಸಹಿತ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳನ್ನು ಸುಮಾರು ೧ ಗಂಟೆಗಳ ಕಾಲ ವಿದ್ಯಾರ್ಥಿಗಳು ಮಾಡಿದರು.  ಅಲ್ಲದೆ ಯೋಗಾಸನವನ್ನು ದಿನಚರಿಯನ್ನಾಗಿ ಪ್ರತಿದಿನಮಾಡುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಸ್ವೀಕರಿಸಿದರು.


ಬೆಳಗ್ಗಿನ ವೇಳೆ ಸುರಿದ ತುಂತುರು ಮಳೆಯ ನಡುವೆ ವಿದ್ಯಾರ್ಥಿಗಳು ಯೋಗಾಸನ ಮಾಡಿದರು.ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!