Ad Widget

ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನ ವತಿಯಿಂದ ಅಮರಶ್ರೀ ಸಭಾಂಗಣದಲ್ಲಿ ಅಮರಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರು ಒಟ್ಟಾಗಿ 300 ಜನ ಏಕಕಾಲದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿದರು.

. . . . .

ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾಪ್ರಸಾದ್ ಕೆ ವಿ ಯವರು ಶುಭ ಹಾರೈಸಿದರು.ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ ಅವರು ಮಾತನಾಡಿ ಅಂತರಾಷ್ಟ್ರೀಯ ಯೋಗ ದಿನದ ಉಗಮವನ್ನು ಉಲ್ಲೇಖಿಸುತ್ತಾ, ಯೋಗವನ್ನು ವಿಶ್ವಮಾನ್ಯವಾಗುವಂತೆ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಯೋಗ ದಿನಾಚರಣೆಯ ಅಂಗವಾಗಿ “ವಸುದೈವ ಕುಟುಂಬಕಂ” ನ ಅರ್ಥವನ್ನು ಹೇಳುತ್ತಾ ಯೋಗದಿಂದ ಏಕಾಗ್ರತೆ ಸಾಧಿಸಿ ಹೇಗೆ ಜೀವನ, ವಿದ್ಯಾಭ್ಯಾಸವನ್ನು ಸುಂದರಗೊಳಿಸಬಹುದು ಎಂಬುವುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಭಟ್ ಪಿ ಉಪನ್ಯಾಸಕರು,ಆರ್ಟ್ ಆಫ್ ಲಿವಿಂಗ್ ಸುಳ್ಯ,ಇವರು ವಿದ್ಯಾರ್ಥಿಗಳಿಗೆ ಯೋಗದ ಪ್ರಾಮುಖ್ಯತೆ,ತಮ್ಮ ಜೀವನದಲ್ಲಿ ಯೋಗದ ಅಗತ್ಯತೆ ಬಗ್ಗೆ ಅರಿವು ಮೂಡಿಸಿ”ಯೋಗೇನ ಚಿತ್ತಸ್ಯ ಪದೇನಾ ವಾಚಾಂ”ಎಂಬುದರ ಪ್ರತಿಬಿಂಬವೆಂಬಂತೆ ನೆರೆದಿದ್ದ ಸಮೂಹಿಗರಿಂದ ಪ್ರಾಯೋಗಿಕ ಯೋಗಾಭ್ಯಾಸವನ್ನು ಮಾಡಿಸಿ ಯೋಗಾಭ್ಯಾಸದ ಅರಿವು ಮೂಡಿಸಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಉಜ್ವಲ್ ಯು ಜೆ ಹಾಗೂ ಎಲ್ಲಾ ಅದ್ಯಾಪಕ ವೃಂದದವರು ಯೋಗದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಯೋಗ ಶಿಕ್ಷಕರಾದ ಶ್ರೀ ಭಾಸ್ಕರ ಬೆಳೆಗದ್ದೆ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ನಿರ್ದೇಶಿಸಿದರು.
ಈ ಸಮಯದಲ್ಲಿ ಉಪಪ್ರಾಂಶುಪಾಲರಾದ ದೀಪಕ್ ವೈ ಆರ್ ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿವರ್ಗ ಭಾಗವಹಿಸಿದ್ದು ಯೋಗಾಭ್ಯಾಸದಲ್ಲಿಯು ಪಾಲ್ಗೊಂಡರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!