Ad Widget

ಕಡಬ: ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ IRCMD ಶಿಕ್ಷಣ ಸಂಸ್ಥೆಯ ‘ಅಬಾಕಸ್’ ಗಣಿತ ತರಗತಿ ಉದ್ಘಾಟನೆ

ಕಡಬದ   ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಅಬಾಕಸ್ ಗಣಿತ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಪ್ರಾಂಶುಪಾಲರಾದ ವಂದನೀಯ ಫಾದರ್ ಅಮಿತ್ ಪ್ರಕಾಶ್ ರೋಡ್ರಿಗಸ್ ರವರು ವಹಿಸಿ ಮಾತನಾಡಿ ಅಬಾಕಸ್ ತರಗತಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡುವುದರಿಂದ ವಿದ್ಯಾರ್ಥಿಗಳ ಬುದ್ದಿ ಶಕ್ತಿ ಉತ್ತಮಗೊಳ್ಳುತ್ತದೆ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಇನ್ನಿತರ ಚಟುವಟಿಕೆಗಳಲ್ಲಿಯೂ ಪ್ರಗತಿ ಸಾಧಿಸುತ್ತಾರೆ ಎಂದು ಹೇಳಿದರು.

ಅಬಾಕಸ್ ತರಗತಿಯ ಬಗ್ಗೆ ತರಬೇತಿ ನೀಡಲು ಮುಖ್ಯ ಅತಿಥಿಯಾಗಿ ಆಗಮಿಸಿದ IRCMD  ಎಜುಕೇಶನ್ ಸೆಂಟರ್ ಪುತ್ತೂರು ಮತ್ತು ಸುಳ್ಯ ಇದರ CEO ಆಗಿರುವ ಶ್ರೀಮತಿ ಪ್ರಫುಲ್ಲ ಗಣೇಶ್  ರವರು ಅಬಾಕಸ್ ತರಗತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿಯನ್ನು ನೀಡಿದರು. ಸಹ ಶಿಕ್ಷಕಿ ಶ್ರೀಮತಿ ಶಿಲ್ಪ ಸ್ವಾಗತಿಸಿ,   ಸಹ ಶಿಕ್ಷಕಿ ಶ್ರೀಮತಿ ಶೈನಸ್ ರವರು ವಂದಿಸಿದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ಶ್ರೀಮತಿ ದಿವ್ಯ ಜ್ಯೋತಿ ಯವರು ನಿರೂಪಿಸಿದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!