ಸುಳ್ಯ: ದಾರುಲ್ ಹಿಕ್ಮ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 2023-24 ನೇ ಸಾಲಿನ ಮಂತ್ರಿ ಮಂಡಲವನ್ನು ಜೂನ್ 10 ರಂದು ಪ್ರಜಾಪ್ರಭುತ್ವ ಮಾದರಿಯಲ್ಲಿ ಮತ ಚಲಾವಣಾ ಯಂತ್ರದ ಮೂಲಕ ಮತ ಚಲಾಯಿಸುವುದರೊಂದಿಗೆ ರಚಿಸಲಾಯಿತು.
ಶಾಲಾ ಮುಖ್ಯಶಿಕ್ಷಕಿ ಸಬೀದಾ ಎಸ್ ಇವರ ಮಾರ್ಗದರ್ಶನದಲ್ಲಿ, ಶಾಲಾ ಶಿಕ್ಷಕಿಯಾದ ಬುಶ್ರಾ ಚುನಾವಣಾಧಿಕಾರಿಯಾಗಿ, ಶಿಕ್ಷಕಿ ಚಿತ್ರಾಕ್ಷಿ.ಟಿ ಅಧ್ಯಕ್ಷಾಧಿಕಾರಿಯಾಗಿ ಸಹಕರಿಸಿದರು. ಶಿಕ್ಷಕಿಯರಾದ ಸುಮೈಯಾ, ಶಾಕೀರ, ಶಾಹಿನಾ, ಮಿಶ್ರಿಯಾ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ಮುಖ್ಯಮಂತ್ರಿಯಾಗಿ ಖದೀಜತ್ ಶಹೀಮಾ ,ಉಪಮುಖ್ಯಮಂತ್ರಿಯಾಗಿ ಮಹಮ್ಮದ್ ಆದೀಲ್ ಆಯ್ಕೆಯಾದರು.
ವಿದ್ಯಾ ಮಂತ್ರಿಯಾಗಿ ಫಾತಿಮಾಃ ರಿಫಾ, ಉಪವಿದ್ಯಾಮಂತ್ರಿಯಾಗಿ ಆಯಿಶತ್ ಆಫ್ರಾ ಶಿಸ್ತುಮಂತ್ರಿಯಾಗಿ ಹಿಬಾ ಫಾತಿಮಾ, ಉಪ ಶಿಸ್ತುಮಂತ್ರಿಯಾಗಿ , ಮಹಮ್ಮದ್ ನಶಾತ್, ಆರೋಗ್ಯ ಮಂತ್ರಿಯಾಗಿ ಅಬ್ದಲ್ ಖಾದರ್ ಔಫ್ ,ಉಪಆರೋಗ್ಯ ಮಂತ್ರಿಯಾಗಿ ಮಹಮ್ಮದ್ ರಹೀಝ್ , ಗೃಹಮಂತ್ರಿಯಾಗಿ ಫಾತಿಮಾಃ ರಿಝಾ, ಉಪಗೃಹ ಮಂತ್ರಿಯಾಗಿ ಶಝಾ.ಬಿ ಸಾಂಸ್ಕೃತಿಕ ಮಂತ್ರಿಯಾಗಿ ಖದೀಜತುಲ್ ಫಾಹಿಮಾ, ಉಪಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮಾತ್ ಶಫಾ, ನೀರಾವರಿ ಮಂತ್ರಿಯಾಗಿ ಮೊಹಮ್ಮದ್ ಮುಹಾಝ್, ಉಪನೀರಾವರಿ ಮಂತ್ರಿಯಾಗಿ ಮಹಮ್ನದ್ ಅಸೀದ್, ವಾರ್ತಾಮಂತ್ರಿಯಾಗಿ ಮುಬಶ್ಶಿರ ಬಿ,ಉಪವಾರ್ತಾ ಮಂತ್ರಿಯಾಗಿ ಆಯಿಶತ್ ಶಬೀಬಾ, ಸ್ವಚ್ಛತಾ ಮಂತ್ರಿಯಾಗಿ ಉಮೈಹಾನಿ, ಉಪಸ್ವಚ್ಛತಾ ಮಂತ್ರಿಯಾಗಿ ನಫೀಸಾ ಮನ್ ಹಾ ಕ್ರೀಡಾಮಂತ್ರಿಯಾಗಿ ಕಲಂದರ್ ಶಮ್ಮಾಝ್, ಉಪಕ್ರೀಡಾ ಮಂತ್ರಿಯಾಗಿ ಫಾತಿಮತ್ ಹಫೀಝಾ ,ಗ್ರಂಥಾಲಯ ಮಂತ್ರಿಯಾಗಿ ಅಫ್ಸಾ ತಸ್ನೀಮ್, ಉಪ ಗ್ರಂಥಾಲಯ ಮಂತ್ರಿಯಾಗಿ ಆಯಿಷಾ ಶಿಲ್ಮಿ, ಕೃಷಿಮಂತ್ರಿಯಾಗಿ ಮಹಮ್ಮದ್ ಶಹೀಕ್, ಉಪ ಕೃಷಿಮಂತ್ರಿಯಾಗಿ ಮಹಮ್ಮದ್ ಜಮಾಲುದ್ದೀನ್, ವಿರೋಧ ಪಕ್ಷದ ನಾಯಕರಾಗಿ ತಾನಿಷಾ ಎನ್ ಎಸ್ ಮತ್ತು ಸಫಾ ಅಬ್ದುಲ್ ಸಲಾಂ ಆಯ್ಕೆಯಾದರು.