Ad Widget

ಸುಳ್ಯ : ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೃಹತ್ ರಕ್ತದಾನ ಶಿಬಿರ

. . . . . . .

ಕೆವಿಜಿ ದಂತ ಮೆಡಿಕಲ್ ಕಾಲೇಜು,ಕೆವಿಜಿ ಇಂಜಿನಿಯರಿಂಗ್ ಕಾಲೇಜು,ಕೆವಿಜಿ ಪಾಲಿಟೆಕ್ನಿಕ್, ಕೆವಿಜಿ ಐಟಿಐ, ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯಘಟಕ ಇವುಗಳ ಸಂಯುಕ್ತ ಆಶ್ರಯ ದಲ್ಲಿ ಇಂದು ಕೆವಿಜಿ ದಂತ ಮಹಾ ವಿದ್ಯಾಲಯ ಸಭಾಂಗಣ ದಲ್ಲಿವಿಶ್ವರಕ್ತ ದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರ ಡಾ.ಕೆ.ವಿ.ರೇಣುಕಾಪ್ರಸಾದ್ ಉದ್ಘಾಟಿಸಿ ಶುಭಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ರೆಡ್ ಕ್ರಾಸ್ ಸುಳ್ಯ ಘಟಕ ಸಭಾಪತಿ ಮಹಾ ರಕ್ತದಾನಿ ಪಿ. ಬಿ. ಸುಧಾಕರ್ ರೈ ಮಾತನಾಡಿ ಮಾನವ ರಕ್ತದ ಗ್ರೂಪ್ ಗಳನ್ನು ಸಂಶೋಧಿಸಿದ ಆಸ್ಟ್ರೀಯ ದೇಶದ ವೈದ್ಯ ಕಾರ್ಲ್ ಲ್ಯಾಂಡ್ ಸ್ಟಾನರ್ ರವರ ಜನ್ಮದಿನ ಜೂನ್ 14 ವಿಶ್ವ ರಕ್ತ ದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸುಳ್ಯ ಘಟಕದ ಉಪಸಭಾಪತಿ ಕೆ. ಎಂ. ಮುಸ್ತಫ, ಪ್ರಧಾನ ಕಾರ್ಯದರ್ಶಿ ತಿಪ್ಪೇಶಪ್ಪ, ಕೆವಿಜಿ ಸಮೂಹ ಸಂಸ್ಥೆಗಳ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಯು. ಪಿ. ಉಜ್ವಲ್, ಕೆವಿಜಿ ಡೆಂಟಲ್ ಕಾಲೇಜು ಪ್ರಾoಶುಪಾಲೆ ಶ್ರೀಮತಿ ಮೋಕ್ಷ ನಾಯಕ್, ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾoಶುಪಾಲ ಪ್ರೊ. ಸುರೇಶ್, ಕೆವಿಜಿ ಪಾಲಿಟೆಕ್ ನಿಕ್ ಪ್ರಾoಶುಪಾಲ ಡಾ. ಜಯಪ್ರಕಾಶ್,ಕೆವಿಜಿ ಐಟಿಐ ಪ್ರಾoಶುಪಾಲ ಚಿದಾನoದ, ಮೊದಲಾದವರು ಭಾಗವಹಿಸಿದ್ದರು.
ರಕ್ತದಾನ ಶಿಬಿರ ದಲ್ಲಿ ನೂರಾರು ರಕ್ತದಾನಿಗಳು ಉತ್ಸಾಹದಿಂದ ಭಾಗವಹಿಸಿದರು. ಶಿಬಿರ ಸಂಘಟಿಸುವಲ್ಲಿ
ದಿನೇಶ್ ಮಡ್ತಿಲ, ಆಡಳಿತಾಧಿಕಾರಿ ಬಿ. ಟಿ. ಮಾಧವ, ಚಂದ್ರಶೇಖರ ಬಿಳಿನೆಲೆ, ಭವಾನಿ ಶಂಕರ್ ಆಡ್ತಲೆ, ಡಾ. ಮನೋಜ್, ಪ್ರೊ. ಲೋಕೇಶ್, ಪ್ರಜ್ಞಾ ಮೊದಲಾದವರು ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!