ದೇವಚಳ್ಳ : ಸ.ಹಿ.ಪ್ರಾ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆ. ವಿದ್ಯಾರ್ಥಿಗಳಿಗೆ ಇ.ವಿ.ಎಂ ಯಂತ್ರದ ಮೂಲಕ ಮತದಾನದ ಪರಿಕಲ್ಪನೆ ಮೂಡಿಸಲು ವಿನೂತನವಾಗಿ ನಡೆದ ಶಾಲಾ ಸಂಸತ್ ಚುನಾವಣೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇಲ್ಲಿ ಜೂ.06 ರಂದು 2023-24ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆ ನಡೆಯಿತು. ಚುನಾವಣೆಯನ್ನು ಇ.ವಿ.ಎಮ್ ಆ್ಯಪ್ ಬಳಸಿ ವಿನೂತನವಾಗಿ ನಡೆಸಲಾಯಿತು. ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ಮತ ಪ್ರಚಾರ ಮತ್ತು ವೋಟಿಂಗ್ ಮೆಷಿನ್ ಆ್ಯಪ್ ಬಳಸಿ ಮತದಾನ ಪ್ರಕ್ರಿಯೆಯನ್ನು ಮೆಷಿನ್ ಮೂಲಕ ಮಾಡುವ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಮುಖ್ಯ ಶಿಕ್ಷಕರಾದ ಶ್ರೀಧರ್ ಗೌಡ.ಕೆ, ಮಾರ್ಗದರ್ಶಿ ಶಿಕ್ಷಕಿ ನಯನಾ.ಕೆ ಹಾಗೂ ಎಲ್ಲಾ ಶಿಕ್ಷಕರು ಪೋಲಿಂಗ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ನಡೆದ ಮತದಾನದಲ್ಲಿ ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಲಿಖಿತ್.ಜಿ, ಉಪ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಜನಿತ್.ಎಚ್ ಮತ್ತು ವಿರೋಧ ಪಕ್ಷದ ನಾಯಕಿಯಾಗಿ 7ನೇ ತರಗತಿಯ ಬಬಿತಾ ಆಯ್ಕೆಯಾದರು.(ವರದಿ : ಉಲ್ಲಾಸ್ ಕಜ್ಜೋಡಿ)
- Thursday
- November 21st, 2024