ಸಾಲಮನ್ನಾಕ್ಕಾಗಿ ಹಾಗೂ ಲಾಕ್ ಡೌನ್ ಸಂತ್ರಸ್ಥ ಬಡವರಿಗೆ ಪರಿಹಾರ ನೀಡಲು ಆಗ್ರಹಿಸಿ ಮತ್ತು ಸಾಲ ವಸೂಲಿಗಾರರ ದಬ್ಬಾಳಿಕೆ ವಿರುದ್ದ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ ಜೂ 25ರಂದು ಪುತ್ತೂರು ಮಿನಿ ವಿಧಾನಸೌಧ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಋಣಮುಕ್ತ ಅನುಷ್ಠಾನ ಹೋರಾಟ ಸಮಿತಿಯ ಅಧ್ಯಕ್ಷ ಬಿ ಎಂ ಭಟ್ ಕರೋನವೈರಸ್ ಹಿನ್ನೆಲೆಯಲ್ಲಿ ಸರಕಾರದ ನಿಯಮಾವಳಿ ಅನುಗುಣವಾಗಿ ಕೇವಲ 50 ಮಂದಿ ಹೋರಾಟಗಾರರನ್ನು ಮಾತ್ರ ನಾವು ಪ್ರತಿಭಟನಾ ಸ್ಥಳಕ್ಕೆ ಕರೆತಂದಿದ್ದು, ನಮ್ಮಲ್ಲಿ ಸಾವಿರಾರು ಮಂದಿ ಹೋರಾಟಗಾರರು ಇದ್ದಾರೆ.ಸಂದರ್ಭಕ್ಕನುಗುಣವಾಗಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಬಡ ಮಹಿಳೆಯರ ಮೈಕ್ರೋಫೈನಾನ್ಸ್ ಸಾಲಗಳನ್ನು ಮನ್ನಾ ಮಾಡಬೇಕು. ಕೋವಿಡ್ 19 ರ ಪರಿಹಾರ ಎಲ್ಲಾ ಬಡವರಿಗೂ ನಗದು ರೂಪದಲ್ಲಿ ನೀಡಬೇಕು .ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಯವರು ಕೊರೋನಾ ಸಮಸ್ಯೆಯಿಂದ ಜನಸಾಮಾನ್ಯರು ಬಳಲುತ್ತಿರುವ ಸಂದರ್ಭದಲ್ಲಿ ಸಮಸ್ಯೆಯ ನಡುವೆ ಮನೆ ಮನೆಗೆ ಬಂದು ಬಡ ಮಹಿಳೆಯರನ್ನು ಸಾಲ ವಸೂಲಿ ನೆಪದಲ್ಲಿ ಎದುರಿಸುವುದನ್ನು ತಡೆಯಬೇಕು .ರಾಷ್ಟ್ರೀಕೃತ ಬ್ಯಾಂಕುಗಳು ಬಡ ಮಹಿಳೆಯರಿಗೆ ಸಾಲವನ್ನು ನೀಡಬೇಕು ಎಂದು ಆಗ್ರಹಿಸಿ ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಮನವಿಯನ್ನು ನೀಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ರಾಜ್ಯ ಸಮಿತಿ ಸದಸ್ಯರು ಜಿಲ್ಲಾ ಸಮಿತಿ ಸದಸ್ಯರು ಪದಾಧಿಕಾರಿಗಳು, ಪುತ್ತೂರು ಹೋರಾಟ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.
- Friday
- November 22nd, 2024