Ad Widget

ಕನ್ನಡ ಕಿರುಚಿತ್ರಕ್ಕೆ ಅಪ್ಪಳಿಸಲಿರುವ ಪಥ

ಎ.ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮತ್ತು ಅಚಲ್ ಉಬರಡ್ಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಇನ್ನೊಂದು ಹೊಸ ಕನ್ನಡ ಕಿರುಚಿತ್ರ *ಪಥ*. ಈ ಕಿರುಚಿತ್ರದ ಕಥೆ ಮತ್ತು ಛಾಯಾಗ್ರಹಣವನ್ನು ಯೋಶಿತ್ ಬನ್ನೂರು ಮಾಡಿದರೆ ನಮನ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಹಾಗೂ ಅಶ್ವಿನ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿರುತ್ತಾರೆ.ಪಥ ಕಿರುಚಿತ್ರದ ನಾಯಕರಾಗಿ ಅಚಲ್ ಉಬರಡ್ಕ ಹಾಗೂ ನಾಯಕಿಯಾಗಿ ವಿಶ್ರಿತ ಆಚಾರ್ಯ ಇವರು ಬಣ್ಣ ಹಚ್ಚಿದ್ದು, ಶರತ್ ಕೆ ಎನ್, ಸ್ವಸ್ತಿಕ್ ಶೆಟ್ಟಿ, ಅರಹಂತ್ ಜೈನ್, ಗಗನ್ ದೀಪ್, ಮಂಜುನಾಥ್ ಜೋಡುಕಲ್ಲು ಮುಂತಾದವರು ಅಭಿನಯಿಸಿದ್ದಾರೆ.ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದಿದ್ದು, ಪೋಸ್ಟರ್‌ನ್ನು ತಲಕಾವೇರಿಯ ಅನುವಂಶಿಕ ಅರ್ಚಕರಾದಟಿ.ಎಸ್ ಸುಧೀರ್ ಆಚಾರ್ ಇವರು ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಅರ್ಚಕರಾದ ನಾಗರಾಜ ಭಟ್, ಸಾಯಿಗೀತ, ಸೀತಾರಾಮ ಆಚಾರ್ಯ ಹಾಗೂ ಚಿತ್ರ ತಂಡದವರು ಉಪಸಿತರಿದ್ದರು. ಇದರ ಚಿತ್ರೀಕರಣ ಪೂರ್ಣಗೊಂಡಿದ್ದು, ಟೀಸರ್ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಸಧ್ಯದಲ್ಲೇ ತಿಳಿಸಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!