ದೇಶದ ಪ್ರತಿಯೊಬ್ಬ ಪ್ರಜೆಗೂ ನಿವೇಶನ ಕಲ್ಪಿಸುವುದು ಸರಕಾರದ ಮಹತ್ವದ ಯೋಜನೆ. ಈ ಯೋಜನೆಯ ಅಡಿಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ನಿಂತಿಕಲ್ಲು ಸಮೀಪ ಕಾಪಡ್ಕ ಎಂಬಲ್ಲಿ ಫಲಾಭವಿಗಳಿಗೆ ನಿವೇಶನ ಕಲ್ಪಿಸಲಾಗಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದು ಎಂಬಂತೆ ಈ ನಿವೇಶನ ಮೊದಲ ಮಳೆಗೆ ಹಾಕಿದ ಮಣ್ಣೆಲ್ಲಾ ಕೊಚ್ಚಿ ಹೋಗಿದೆ . ಈ ಪ್ರದೇಶವನ್ನು ನೋಡಿದಾಗ ಮಡಿಕೇರಿಯಲ್ಲಾದ ಪ್ರಕೃತಿ ವಿಕೋಪನ್ನು ನೆನಪಿಸುತ್ತದೆ. ಈ ಕಾಮಗಾರಿಯೂ ಸಂಪೂರ್ಣವಾಗಿ ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಮೊದಲಾಗಿ ನಿವೇಶನ ಕಟ್ಟಲೂ ಯೋಗ್ಯಭೂಮಿ ಆಗಿಲ್ಲ , ಹಾಗೂ ಭೂಮಿಯನ್ನು ಅವೈಜ್ಞಾನಿಕವಾಗಿ ಅಗೆದು ಹಾಕಲಾಗಿದೆ. ಅಲ್ಲದೆ ಮಣ್ಣಿನ ಅಡಿಯಲ್ಲಿ ದೊಡ್ಡ ದೊಡ್ಡ ಮರಗಳ ದಿಮ್ಮಿಗಳನ್ನು ಹಾಕಿದ್ದು,ಮಳೆಗಾಲದಲ್ಲಿ ಕೊಚ್ಚಿ ಹೋಗುವ ಲಕ್ಷಣಗಳು ಕಂಡುಬರುತ್ತಿವೆ. ಒಟ್ಟಿನಲ್ಲಿ ನಿವೇಶನ ಪ್ರದೇಶದಲ್ಲಿ ನಿಂತು ನೋಡಿದರೆ ಪ್ರಕೃತಿ ವಿಕೋಪದ ಭೀಕರತೆಯನ್ನು ಮತ್ತೊಮ್ಮೆ ನೆನಪಿಸುತ್ತದೆ. ಇನ್ನೊಂದು ವಿಚಾರವೆಂದರೆ ಸಂಬಂಧ ಪಟ್ಟ ಅಧಿಕಾರಿಗಳ , ಜನಪ್ರತಿನಿಧಿಗಳ ಬೇಜಾವಬ್ದಾರಿ ವರ್ತನೆಯು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇಷ್ಟಾದರೂ ಯಾವುದೇ ಸಲಹೆ ಸೂಚನೆಗಳನ್ನು ಕೊಡದೆ ಆಗಿರುವ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಅವರ ಪಾಡಿಗೆ ಅವರಿದ್ದಾರೆ. ಈಗ ಫಲಾನುಭಾವಿಗಳು ದಿಕ್ಕುತೋಚದಂತಾಗಿದ್ದು, ಕಟ್ಟಿರುವ ಮನೆಯನ್ನು ಕೆಡವಲು ಮುಂದಾಗಿರುವುದು ಮಾತ್ರ ಬೇಸರದ ಸಂಗತಿ. ಇನ್ನದರೂ ಶಾಸಕರು ಹಾಗೂ ಸ್ಥಳೀಯ ಆಡಳಿತ ಗಮನ ಹರಿಸಿ ಮಣ್ಣು ಕುಸಿತವಾಗದಂತೆ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಮಾಡಬೇಕಿದೆ.
- Thursday
- November 21st, 2024