Ad Widget

ಕವನ : ಜೀವನದ ಸಂತೆಯಲ್ಲಿ ಕನಸುಗಳ ಮಾರಾಟ…

ಜೀವನದಲ್ಲಿ ಗೆಲ್ಲಬೇಕೆಂಬ ಕನಸು ಕಂಡವರೆಷ್ಟೋ, ಜೀವನದ ಅನಿವಾರ್ಯತೆಗಳಿಗಾಗಿ ತಮ್ಮ ಕನಸುಗಳನ್ನು ಬಚ್ಚಿಟ್ಟು ಮುನ್ನಡೆದವರೆಷ್ಟೋ…
ಕನಸುಗಳ ಹೊತ್ತು ಅಲೆದಾಡಿದವರೆಷ್ಟೋ, ಅವಕಾಶಕ್ಕಾಗಿ ಕೈಚಾಚಿದವರೆಷ್ಟೋ…
ನಮ್ಮಿಂದ ಸಾಧನೆ ಮಾಡಲು ಸಾಧ್ಯವೇ ಎಂದು ಭಯಪಟ್ಟು ಕುಳಿತವರೆಷ್ಟೋ, ನಮ್ಮಿಂದಾಗದು ಎಂದು ಕನಸುಗಳ ಮರೆತು ಹೊರನಡೆದವರೆಷ್ಟೋ…
ಕಷ್ಟಗಳ ಕೋಟೆಯಲ್ಲಿ ಕನಸುಗಳ ಬಿಟ್ಟವರೆಷ್ಟೋ, ನೋವಿನ ನರಕದಲ್ಲಿ ಕನಸುಗಳ ಮರೆತವರೆಷ್ಟೋ…
ಕನಸುಗಳ ಬಚ್ಚಿಟ್ಟು, ಭಯಪಟ್ಟು, ಮರೆತ ಮಾತ್ರಕ್ಕೆ ಕನಸುಗಳು ಕರಗುವುದಿಲ್ಲ, ಆದರೆ ನನಸಾಗದೇ ಉಳಿದ ಕನಸುಗಳ ನೆನೆದು ಕಂಬನಿ ಸುರಿಸಿ ಕೊರಗುತ್ತಿರುವ ಕನಸುಗಾರರೆಷ್ಟೋ, ಈ ಜಗದಿ ತಾವು ಕಂಡ ಕನಸುಗಳ ನೆನೆದು ಕಣ್ಣೀರು ಸುರಿಯುತ್ತಿರುವ ಕನಸುಗಾರರೆಷ್ಟೋ…
ಅಂತಿಮವಾಗಿ ಜೀವನದ ಸಂತೆಯಲ್ಲಿ ಕನಸುಗಳು ಮಾರಾಟವಾಗಿವೆ, ಕಷ್ಟ-ನೋವು, ಅನಿವಾರ್ಯತೆಗಳಿಗಾಗಿ ಕನಸುಗಳು ಮಾರಾಟವಾಗಿವೆ…

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!