ಹಲವು ವರ್ಷಗಳಿಂದ ಗಾಂಧಿನಗರ ಸರ್ಕಾರಿ ಶಾಲೆ ಜಾಗದ ತಕರಾರು ವಿಷಯದಲ್ಲಿ ಇಂದು ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಲಾಕ್ ಡೌನ್ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ಸ್ಥಳೀಯರೊಬ್ಬರು ಬೇಲಿ ನಿರ್ಮಿಸಿದಾಗ ಶಾಲಾ ಎಸ್ಡಿಎಂಸಿ ವತಿಯಿಂದ ಸುಳ್ಯ ತಹಸೀಲ್ದಾರರಿಗೆ ದೂರು ನೀಡಲಾಗಿತ್ತು.ಈ ವಿಷಯವನ್ನು ಆಧರಿಸಿ ಅಮರ ಸುದ್ದಿ ಪತ್ರಿಕೆಯಲ್ಲಿ ಸವಿಸ್ತಾರವಾಗಿ ವರದಿಯನ್ನು ಪ್ರಕಟಿಸಲಾಗಿತ್ತು. ಇದೀಗ ಒಂದು ತಿಂಗಳ ನಂತರ ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಇಂದು ಸರ್ವೆ ಕಾರ್ಯ ನಡೆಯುತ್ತಿದ್ದು ಸ್ಥಳದಲ್ಲಿ ಸ್ಥಳೀಯರು, ವಿವಿಧ ರಾಜಕೀಯ ಮುಖಂಡರುಗಳು, ಎಸ್ಡಿಎಂಸಿ ಸಮಿತಿಯವರು, ಸುಳ್ಯ ತಹಶಿಲ್ದಾರ್
ಅನಂತ ಶಂಕರ್ ಕಂದಾಯ ನಿರೀಕ್ಷಕರು ಕೊರಗಪ್ಪ ಹೆಗ್ಡೆ, ಪಂಜ ಕಂದಾಯ ನಿರೀಕ್ಷಕರ ಶಂಕರ್, ಸುಳ್ಯ ವಿ ಎ ತಿಪ್ಪೇಶ್,
ಶಾಲಾ ಎಸ್ಡಿಎಂಸಿ ಸಮಿತಿಯ ಆರ್ ಕೆ ಮಹಮ್ಮದ್, ಪ್ರವೀಣ್ ನಾಯಕ್, ನಪಂ ಸದಸ್ಯ ಶರೀಫ್ ಕಂಠಿ, ವೆಂಕಪ್ಪ ಗೌಡ, ವಿನಯ ಕಂದಡ್ಕ, ಪ್ರವಿತ, ನ.ಪ ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ, ಜಿಲ್ಲಾ ಪಂಚಾಯತ್ ಸದಸ್ಯರು ಹರೀಶ್ ಕಂಜಿಪಿಲಿ, ಸ್ಥಳೀಯರಾದ ಪ್ರದೀಪ ದೇವರಗುಂಡ, ಮೊದಲಾದವರು ಉಪಸ್ಥಿತರಿದ್ದರು.
- Sunday
- November 24th, 2024